Ugadi Horoscope: ಚಂದ್ರ ಗ್ರಹಣದ ಬಳಿಕ ಕರ್ಕಾಟಕ ರಾಶಿಗೆ ಅದೃಷ್ಟ...ಮಂಗಳ ಕಾರ್ಯಗಳಿಗೂ ಅನುಗ್ರಹ
ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ? ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಕರ್ಕಾಟಕ ರಾಶಿಯವರಿಗೆ ಈ ಬಾರಿ ಗುರು, ಚಂದ್ರ, ರಾಹು,ಕೇತು ಶನಿ ಯಾವ ತರನಾಗಿ ಪ್ರಭಾವ ಬಿದ್ದಿರಬಹುದು ಎಂದು ಖ್ಯಾತ ಜ್ಯೋತಿಷಿಗಳಾದ ವೇ| ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ugadi horoscope

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಆರಂಭ ಆಗುವುದೆ ಯುಗಾದಿಯ ನಂತರದಲ್ಲಿ. ಹೀಗಾಗಿ ಯುಗಾದಿಯಂದು ಬೇವು ಬೆಲ್ಲ ಸವಿದು ಜೀವನದ ಸುಖ ದುಃಖಗಳನ್ನು ಸಮನಾಗಿ ಕಾಣುವಂತೆ ಸಾಂಕೇತಿಕವಾಗಿ ಈ ಹಬ್ಬದ ಆಚರಣೆಯೂ ಅನಾದಿಕಾಲದಿಂದಲೂ ಆಚ ರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಯುಗಾದಿ ಬಳಿಕ ಮುಂದಾಗುವ ಒಳಿತು ಕೆಡುಕುಗಳ ಬಗ್ಗೆ ಸರಳ ಕುತೂಹಲ ನಮಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಕರ್ಕಾಟಕ ರಾಶಿಯ ಫಲ ಏನಿರಬಹುದು (Ugadi Horoscope)? ಈ ಬಾರಿ ಗುರು, ಚಂದ್ರ, ರಾಹು,ಕೇತು, ಶನಿ ಯಾವ ತರನಾಗಿ ಪ್ರಭಾವ ಬೀರಬಹುದು ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.
ಕರ್ಕಾಟಕ ರಾಶಿಗೆ ಈ ಯುಗಾದಿಯ ಭವಿಷ್ಯ ಹೇಗಿರಲಿದೆ?
ಕರ್ಕಾಟಕ ರಾಶಿಯ ಅಧಿಪತಿ ಚಂದ್ರನಾಗಿದ್ದು ಚಂದ್ರ ಹಾಗೂ ಯುಗಾದಿಯ ಬಲ ಎರಡು ಕೂಡ ಕರ್ಕಾಟಕ ರಾಶಿಯವರಿಗೆ ಶುಭ ಫಲ ನೀಡಲಿದೆ. ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಅಷ್ಟು ಮಾತ್ರವಲ್ಲದೆ ಕರ್ಕಾಟಕ ರಾಶಿಯವರಿಗೆ ಅನೇಕ ಅನಾರೋಗ್ಯ ಸಂದರ್ಭದಲ್ಲಿ ಉಂಟಾದ ನಷ್ಟಗಳು ಪರಿಹಾರ ಕಂಡು ಆರ್ಥಿಕ ಸಹಕಾರ ಒಲಿದು ಬರಲಿದೆ. ಶ್ರಾವಣ ಮಾಸದ ನಂತರವೇ ವಧು ವರರ ಅನ್ವೇಷಣೆ ಮಾಡುವುದು ಬಹಳ ಉತ್ತಮ. ಶ್ರಾವಣ ಮಾಸದ ಬಳಿಕ ಮಂಗಳ ಕಾರ್ಯಗಳಿಗೆ ಚಂದ್ರನಿಂದ ಅನುಗ್ರಹ ಸಿಗಲಿದೆ.
ಶನಿ ಪ್ರಭಾವವೂ ಇದೆ
ಶನಿಯು 9ನೇ ಮನೆಯಲ್ಲಿ ಸಂಚರಿಸುವಾಗ ಕರ್ಕಾಟಕ ರಾಶಿ ಅವರಿಗೆ ಸಾಕಷ್ಟು ಒಳಿತು ಕೆಡುಕು ಸರಿ ಸಮಾನವಾಗಿ ಆಗಲಿದೆ. ಕರ್ಕಾಟಕ ರಾಶಿ ಅವರು ಮುಂಗೋಪಿಗಳಾಗಿದ್ದು, ಕೆಲಸದಲ್ಲಿ ಅತೃಪ್ತ ಭಾವನೆ ಕಾಡುವ ಸಾಧ್ಯತೆ ಸಹ ಇರಲಿದೆ. ಹಣಕಾಸಿನ ಸಮಸ್ಯೆ ಪರಿಹಾರ ಕಾಣಲು ಆಂಜನೇಯ ದಂಡಕ ಪಠಣ ಮಾಡಬೇಕು. ಇದರಿಂದ ನಿಮಗೆ ಯಾವುದೇ ವಿಚಾರದಲ್ಲಿಯೂ ಕೆಡುಕಾಗುವ ಪ್ರಮಾಣವನ್ನು ಕಡಿಮೆ ಮಾಡಬಹುದು.
ಚಂದ್ರ ಗ್ರಹಣ ಬಳಿಕ ಯಶಸ್ಸು
ಯುಗಾದಿಯ ನಂತರ ಗ್ರಹಣ ಕಾಲದವರೆಗೂ ಅಶುಭ ಫಲಗಳಿದ್ದು ಇದು ಸಾಕಷ್ಟು ಸಮಸ್ಯೆ ತಂದೊಡ್ಡಲಿದೆ. ಹಾಗಾಗಿ ಚಂದ್ರಗ್ರಹಣ ಆಗುವ ತನಕ ವು ಆರ್ಥಿಕ ಕುಟುಂಬದ ವೈಮನಸ್ಸು ಇತ್ಯಾದಿಗಳಲ್ಲಿ ಬಹಳ ಎಚ್ಚರಿಕೆ ಯಿಂದ ಇರಬೇಕು. ಚಂದ್ರಗ್ರಹಣ ಆದ ಬಳಿಕವಷ್ಟೆ ಅಧಿಕೃತವಾಗಿ ದೋಷ ಪರಿಹಾರ ಆಗಲಿದೆ. ಅನೇಕ ದಿನಗಳಿಂದ ಬಾಕಿ ಉಳಿದ ಕೆಲಸ ಕಾರ್ಯಗಳೂ ಸಹ ಚಂದ್ರ ಗ್ರಹಣದ ಬಳಿಕ ಈಡೇರಲಿದೆ. ಹಾಗಾಗಿ ಚಂದ್ರ ಗ್ರಹಣ ಎನ್ನುವುದು ಕರ್ಕಾಟಕ ರಾಶಿ ಹೊಂದಿದ್ದವರ ಪಾಲಿಗೆ ಅದೃಷ್ಟ ಎನ್ನಬಹುದು.
ಇದನ್ನು ಓದಿ: Ugadi Horoscope: ಮಿಥುನ ರಾಶಿಯವರು ಏಳೆಂಟು ತಿಂಗಳು ಎಚ್ಚರ ವಹಿಸಿ!
ಪರಿಹಾರ ಏನು?
ಈ ವರ್ಷದಂದು ಅನೇಕ ಮೂಲದಿಂದ ಆದಾಯ ಹೆಚ್ಚಿಸಲು ಹೆಚ್ಚಿನ ಅವಕಾಶಗಳು ಒದಗಿ ಬರಲಿದೆ. ಅವುಗಳು ನಿಮ್ಮಲ್ಲಿ ಭದ್ರವಾಗಿರಲು ಕಾಲ ಕಾಲಕ್ಕೆ ಚಂದ್ರ ಗ್ರಹಣ ಸಂದರ್ಭದಲ್ಲಿ ಚಂದ್ರ ಶಾಂತಿ ಮಾಡಬೇಕು. ಪ್ರತೀ ಗ್ರಹಣದ ಬಳಿಕ ಪುಣ್ಯ ನದಿಯಲ್ಲಿ ಸ್ನಾನ ಮಾಡಬೇಕು. ಶನಿ ಸಮಸ್ಯೆ ತಪ್ಪಿಸಿಕೊಳ್ಳಲು ಪುರುಷರು ಆಂಜನೇಯ ದಂಡಕ ಕಲಿತು ಪ್ರತೀ ಶನಿವಾರ ಹೇಳಬೇಕು. ಇನ್ನು ಸ್ತ್ರೀಯರು ಪರಮೇಶ್ವರನ ಆರಾಧನೆ ಮಾಡಿದರೆ ದೋಷಗಳಿದ್ದರೆ ಪರಿಹಾರ ಅಗಲಿದೆ. ಕರ್ಕಾಟಕ ರಾಶಿಯಲ್ಲಿ ಎಲ್ಲ ಒಲಿದು ಬರುವ ಶುಭ ಫಲ ಇದ್ದರೂ ಅಲ್ಲಲ್ಲಿ ಅಡೆತಡೆ ಸಹ ಕಂಡು ಬರಲಿದೆ. ನಿಂತು ಹೋದ ಅದೆಷ್ಟೊ ಕೆಲಸ ಕಾರ್ಯಗಳು ಕೈಗೂಡಿ ಕಾರ್ಯ ಸನ್ನದ್ದವಾಗಲು ಆಗಾಗ ಶಿವ, ಗಣಪತಿ ಮತ್ತು ಲಕ್ಷ್ಮೀ ದೇಗುಲಕ್ಕೆ ಭೇಟಿ ನೀಡಿದರೆ ಬಹುತೇಕ ಸಮಸ್ಯೆ ಪರಿಹಾರ ಕಾಣಲಿದೆ.