ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ಮಿಥುನ ರಾಶಿಯವರು ಏಳೆಂಟು ತಿಂಗಳು ಎಚ್ಚರ ವಹಿಸಿ!

Ugadi Horoscope: ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಈ ಹೊಸ ವರ್ಷವು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ, ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ಮಿಥುನ ರಾಶಿಯವರ ಕಷ್ಟಕ್ಕೆ ಗರಿಕೆಯೇ ಪರಿಹಾರ!

Profile Pushpa Kumari Mar 28, 2025 8:46 PM

ಬೆಂಗಳೂರು: ಯುಗಾದಿ ಹಬ್ಬವನ್ನು ಇದೇ ತಿಂಗಳು ಮಾರ್ಚ್ 30ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಈ ವರ್ಷದ ಯುಗಾದಿ ಪಂಚಾಂಗದಲ್ಲಿ‌(Ugadi Horoscope) ಗ್ರಹಗಳ ಪ್ರಭಾವ ಹೇಗಿರಲಿದೆ? ಯಾವ ರಾಶಿಗಳಿಗೆ ಶುಭ ಫಲ ಸಿಗಲಿದೆ? ಯಾರಿಗೆ ಅಶುಭ ಎನ್ನುವ ಕುತೂಹಲ ಇರುವುದು ಸಾಮಾನ್ಯ. ಆದ್ದರಿಂದ ಈ ಹೊಸ ವರ್ಷವು ಮಿಥುನ ರಾಶಿಯಲ್ಲಿ ಜನಿಸಿ ದವರಿಗೆ ಹೇಗಿರಲಿದೆ, ನಿಮ್ಮ ಜೀವನದಲ್ಲಿ ಬದಲಾವಣೆಗಳಿದೆಯಾ ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ಮಿಥುನ ರಾಶಿಗೆ ನಷ್ಟ ಉಂಟಾಗುವ ಸಾಧ್ಯತೆ

ಮಿಥುನ ರಾಶಿಯ ಜನ್ಮಕ್ಕೆ ಗುರು ಪ್ರವೇಶ ಮಾಡಲಿದ್ದು‌ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಅಶುಭ ಫಲಗಳನ್ನು ಕಾಣಬೇಕಾಗುತ್ತದೆ. ನೀವು ಇರುವ ಸ್ಥಳವನ್ನು ಬದಲಾವಣೆ ಮಾಡುವಂತ ಹ ಅನಿವಾರ್ಯತೆ ಕೂಡ ಉಂಟಾಗುತ್ತದೆ. ದ್ವಂದ್ವ ಮನಸ್ಸು, ನಿರ್ಧಾರ ಗಳನ್ನು ಆಗಾಗ ಬದಲಿಸುವ ಮನಸ್ಥಿತಿ ಈ ರಾಶಿಯವರಲ್ಲಿ ಇದ್ದು ಶನಿಯು ಹತ್ತನೆ ಮನೆಯಲ್ಲಿ ಸಂಚರಿಸುವಾಗ ಕೆಲವೊಮ್ಮೆ ಮನಸ್ಸಿಗೆ ಖುಷಿ ಸಿಕ್ಕರೂ ಮತ್ತೊಮ್ಮೆ ಬೇಸರ ಮಾಡಿಕೊಳ್ಳುವ ಸಂದರ್ಭ ಬರಲಿದೆ. ಹೀಗಾಗಿ ಮಿಥುನ ರಾಶಿಯವರು ಮಾನಸಿಕವಾಗಿ ಹೆಚ್ಚು ಸದೃಡರಾಗಿರಬೇಕು.



ಏಳೆಂಟು ತಿಂಗಳು ಎಚ್ಚರ ವಹಿಸಿ

ಗುರುವಿನ ಸಂಚಾರದಿಂದಾಗಿ ಮಿಥುನ ರಾಶಿಗೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಮಸ್ಯೆ ಉಂಟು ಮಾಡಲಿದೆ. ಆರ್ಥಿಕವಾಗಿ ಕೂಡ ಸಾಧಾರಣವಾದ ಫಲಿತಾಂಶವನ್ನು ನೀಡಲಿದ್ದು ಈ ವರ್ಷದ ಆರಂಭವು ನಿಮಗೆ ಆರ್ಥಿಕವಾಗಿ ಉತ್ತಮ ವಾಗಿರುವುದಿಲ್ಲ. ಗುರುವು ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕನಾಗಿ ರುವುದರಿಂದ ಮನಸ್ಸಿಗೆ ಚಿಂತೆ, ಅಧಿಕ ತಿರುಗಾಟ, ವ್ಯಾಪಾರ ಉದ್ಯೋಗ ಗಳಲ್ಲಿ ಅಲ್ಪ ಪ್ರಗತಿ, ಬಂಧು ಮಿತ್ರ ವಿರೋಧವು ಕಂಡು ಬರಲಿದೆ. ಹಾಗಾಗಿ ಎಳೆಂಟು ತಿಂಗಳ ವರೆಗೆ ಅಂದರೆ ಡಿಸೆಂಬರ್ ವರೆಗೆ ಮಿಥುನ ರಾಶಿ ಯವರು ತಾಳ್ಮೆಯುತವಾಗಿ ಕಾಯಬೇಕು.

ನಿಮ್ಮ ಸ್ನೇಹಿತರಿಂದಲೇ ವಂಚನೆಯಾಗುವ ಸಾಧ್ಯತೆ ಇರಲಿದೆ. ಸ್ನೇಹಿತ ರನ್ನು ಬೇಗನೆ ಈ ರಾಶಿ ಯವರು ನಂಬುವ ಕಾರಣ ಮೋಸಕ್ಕೆ ಒಳಗಾಗು ವ ಸಾಧ್ಯತೆಗಳು ಇವೆ. ಶನಿಯು ಮೀನ‌ ರಾಶಿಯಲ್ಲಿ ಸಂಚರಿಸುವಾಗ ಮನಸ್ಸಿಗೆ ಬೇಸರ,ದುಗುಡ ಹೆಚ್ಚಾಗಲಿದ್ದು ಮಾನಸಿಕವಾಗಿ ಹೆಚ್ಚಾಗಿ ಕುಗ್ಗುವ ಸಾಧ್ಯತೆ ಇದೆ.ಹಾಗಾಗಿ ಯಾವುದೇ ಕೆಲಸ ಮಾಡುವ ಮೊದಲು ಅಥವಾ ಯಾರನ್ನೇ ನೇರವಾಗಿ ನಂಬುವ ಮೊದಲು ಈ ಬಗ್ಗೆ ಎಚ್ಚೆತ್ತು ಕೊಳ್ಳಿ.

ಇದನ್ನು ಓದಿ: Ugadi Horoscope: ಬೇವು-ಬೆಲ್ಲದ ಹಬ್ಬ ಮೇಷ ರಾಶಿಗೆ ಯಾವ ಫಲ ನೀಡಲಿದೆ? ಶುಭವೋ? ಅಶುಭವೋ?

ಪರಿಹಾರ ಏನು?

ಮಿಥುನ ರಾಶಿಯವರಿಗೆ ಪರಿಹಾರ ವೆಂದರೆ ಗರಿಕೆ ಹುಲ್ಲು. ಇದನ್ನು ಗಣಪತಿಗೆ ಆರ್ಪಣೆ ಮಾಡುವುದರಿಂದ ಸಾಧ್ಯವಾದಷ್ಟು ಸಮಸ್ಯೆಗಳು ದೂರ ವಾಗಲಿದೆ.ಹಾಗಾಗಿ ಮನೆಯ ಮುಂದೆಯೆ ಗರಿಕೆ ಹುಲ್ಲನ್ನು ಬೆಳೆಸಿ ಭುಧವಾರ ದಿನ 21 ಗರಿಕೆಯನ್ನು ಗಣಪತಿಗೆ ಅರ್ಪಿಸಿ ಪ್ರಾರ್ಥನೆ ಮಾಡಿ. ಇದರಿಂದ ಸಾಧ್ಯವಾದಷ್ಟು ನಿಮ್ಮ ಸಮಸ್ಯೆಗೆ ಮುಕ್ತಿ ಸಿಗಲಿದೆ. ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳು ವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ.