ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ಧನು ರಾಶಿಯವರಿಗೆ ಗುರು‌‌ ಅಧಿಪತಿ; ವರ್ಷವಿಡಿ ಶುಭ ಫಲ

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ.ಧನು ರಾಶಿಯವರಿಗೆ ಶ್ರೀ ವಿಶ್ವಾ ವಸು ನಾಮ ಸಂವತ್ಸರ ಹೇಗಿರಲಿದೆ? ಧನು ರಾಶಿಯ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ‌ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಬೀರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ..

ಧನು ರಾಶಿಯವರಿಗೆ ಒಳ್ಳೆಯ ಫಲ; ಈ ವರ್ಷ ಸೋಲೇ ಇಲ್ಲ

sagittarius horoscope

Profile Pushpa Kumari Mar 30, 2025 3:00 PM

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವನ್ನು ಯುಗಾದಿ (Ugadi 205)ಗೆ ಆಚರಣೆ ಮಾಡುತ್ತೇವೆ. ಈ ಹಿಂದೂ ಹೊಸ ವರ್ಷದಂದು ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿದೆ. ವಿಶ್ವವಸು ನಾಮ ಸಂವತ್ಸರದಲ್ಲಿ ಗ್ರಹಗತಿಗಳು ಬದಲಾಗುವುದರಿಂದ ಕೆಲವು ರಾಶಿಯ ಜನರಿಗೆ ಹೆಚ್ಚಿನ ಲಾಭವನ್ನು ಉಂಟುಮಾಡಲಿದೆ. ಹಾಗಾಗಿ ಯುಗಾದಿ ಹಬ್ಬದಿಂದ ಯಾರ ಬಾಳಲ್ಲಿ ಸಿಹಿ ಹೆಚ್ಚಾಗಲಿದೆ. ಯಾರಿಗೆ ಕಹಿ ಇರಲಿದೆ? ಎಂದು ಪಂಚಾಂಗದ ಮೂಲಕ ತಿಳಿಯಬಹುದು. ಧನು ರಾಶಿಯವರಿಗೆ ಶ್ರೀ ವಿಶ್ವವಸು ನಾಮ ಸಂವತ್ಸರ ಹೇಗಿರಲಿದೆ? ಧನು ರಾಶಿಯ (Ugadi Horoscope) ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? ‌ಆರೋಗ್ಯ, ಉದ್ಯೋಗ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಬೀರಲಿದೆ? ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.



ಧನು ರಾಶಿಗೆ ಯುಗಾದಿಯ ಭವಿಷ್ಯ ಹೇಗಿರಲಿದೆ?

ಮೂಲ, ಪೂರ್ವಾಷಾಢ, ಉತ್ತಾರಾಷಾಢ ನಕ್ಷತ್ರದ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಧನು ರಾಶಿ ಆಗುತ್ತದೆ. ಈ ರಾಶಿಯವರಿಗೆ ಯುಗಾದಿ ಹಬ್ಬದಿಂದ ಎರಡು ತಿಂಗಳವರೆಗೆ ಅಷ್ಟಾಗಿ ಶುಭ ಫಲವಿಲ್ಲ. ಮೇ ಅಂತ್ಯದ ನಂತರ ಅತ್ಯುತ್ತಮ ಶುಭ ಫಲವನ್ನು ಕಾಣಲಿದ್ದೀರಿ. ಹಾಗಾಗಿ ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರದ ಆಧಾರದ ಮೇಲೆ ಈ ಹೊಸ ವರ್ಷವೂ ಧನು ರಾಶಿಗೆ ಸೇರಿದ  ಸಾಕಷ್ಟು  ಜನರು ಪ್ರಗತಿಯೊಂದಿಗೆ ಸಾಗಲಿದ್ದೀರಿ.

ಗುರು ಬಲದಿಂದ ಯಶಸ್ಸು!

ಧನು ರಾಶಿಯವರಿಗೆ ಗುರು ಬಲ ಇರುವುದರಿಂದ ಶನಿಯು ಬಲಗಾರಕನಾಗಿದ್ದಾನೆ. ಹೀಗಾಗಿ ನಿಮ್ಮ ಇಚ್ಚೆಗೂ ಮೀರಿದಂತಹ ಲಾಭಗಳು ಬರಲಿವೆ. ವರ್ಷ ಪೂರ್ತಿ ಒಳ್ಳೆಯ ಫಲ ದೊಂದಿಗೆ ಸೋಲೇ ಇಲ್ಲದೆ ಬದುಕ ಬಲ್ಲಿರಿ.ಭೂಮಿಯ ವಿವಿಧ, ಸ್ನೀಹಿತರ ಜೊತೆ ಇದ್ದ ವೈಮನಸ್ಸು ದೂರ ವಾಗಲಿದೆ.ಶತ್ರುಗಳು ಮಿತ್ರ ರಾಗುವ ಸಂಭವ ಧನು ರಾಶಿಗಿದೆ.ಹಾಗೆ ಈ ಅವಧಿಯಲ್ಲಿ ನೀವು ಪ್ರಗತಿ ಮತ್ತು ಬದಲಾವಣೆಗಳಿಗಾಗಿ ಉತ್ತಮ ಅವಕಾಶಗಳನ್ನು ಪಡೆಯುವ ಯೋಗವು ಕೂಡ ಲಭಿಸಲಿದೆ.

ಆರ್ಥಿಕ ಸ್ಥಿತಿ

ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ 2025ರ ಹೊಸ ವರ್ಷವು ಧನು ರಾಶಿಗೆ ಸೇರಿದ ಜನರಿಗೆ ಅತ್ಯಂತ ಉತ್ತಮ ಫಲಿತಾಂಶವನ್ನು ನೀಡಲಿದೆ. ಈ ವರ್ಷ ಆರ್ಥಿಕ ಸ್ಥಿತಿ ಸಾಕಷ್ಟು ಬಲದಿಂದ ಇರುವುದು. ಗ್ರಹಗಳ ಸಂಚಾ ರವು ನಿಮ್ಮ ಮೇಲೆ ಪ್ರಭಾವವನ್ನು ಬೀರುವುದರಿಂದ ನೀವು ಪ್ರತಿಯೊಂದು ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಮಂಗಳನ ಸಂಚಾರದಿಂದಾಗಿ ನೀವು ಆರ್ಥಿಕವಾಗಿ ಸಾಕಷ್ಟು ಲಾಭವನ್ನು ಪಡೆಯುವ ಯೋಗ ಕೂಡ ಇರಲಿದೆ

ಇದನ್ನು ಓದಿ: Ugadi Horoscope: ತುಲಾ ರಾಶಿಯವರಿಗೆ ಯುಗಾದಿ ನಂತರ ರಾಜಯೋಗ

ತಾಮ್ರದ ದಾನ‌ ಅಗತ್ಯ

ಈ ವರ್ಷ ಎಷ್ಟೇ ಒಳಿತಾಗಿದ್ದರೂ ಮಾನಸಿಕವಾಗಿ ದುಗುಡ ಹೆಚ್ಚುವ ಸಾಧ್ಯತೆ ಇದೆ.ಹೀ ಗಾಗಿ ಮನೆ ದೇವರನ್ನು ಆರಾಧಿಸಿ. ತಿರುಪತಿ ತಿಮ್ಮ ಪ್ಪನಿಗೆ ಹುಂಡಿ ಹಣ ಹಾಕುವ ಮೂಲಕವು ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರ ಕಾಣಬಹುದು. ಯಾವುದಾದರೂ ದೇವಾಲಯಕ್ಕೆ ಪ್ರತಿದಿನ ಭೇಟಿ ನೀಡಿ ತಾಮ್ರದ ದಾನ ಮಾಡಿದರೆ ಒಳಿತು. ಇದರಿಂದ ಮನಸ್ಸಿನ ದುಗಡ ಆಯಸ್ಸು ಹೆಚ್ಚಿಸಲು ಸಹಕಾರಿಯಾಗಲಿದೆ.