Ugadi Horoscope: ಗುರುವಿನ ಆರಾಧನೆ ಮಾಡಿದರೆ ಸಿಂಹ ರಾಶಿ ಅವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!
ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದ ಲಾವಣೆಗಳಾಗಲಿದೆ ? ಎನ್ನುವ ಮಾಹಿತಿಯನ್ನು ಈ 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಅಂತೆಯೆ ಈ ಬಾರಿ ಯುಗಾದಿಯ ಹೊಸ ವರ್ಷವು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಒಳಿತು ಕೆಡುಕೇನು? ಯಾವ ರೀತಿಯ ಬದಲಾವಣೆ ಇದೆ? ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

Leo horscope

ಬೆಂಗಳೂರು: ಯುಗಾದಿ ಹಬ್ಬದಂದು ಕ್ರೋದಿ ಸಂವತ್ಸರ ಕಳೆದು ವಿಶ್ವವಸು ಸಂವತ್ಸರಕ್ಕೆ ಕಾಲಿಡಲಿದ್ದೇವೆ. ಈ ಹೊಸ ಸಂವತ್ಸರ ಪ್ರತಿ ಯೊಬ್ಬರ ಬದುಕಿನಲ್ಲಿಯೂ ಹೊಸ ಭರವಸೆಯನ್ನು ತರಲಿದೆ. ಮಾರ್ಚ್ 30ರ ಯುಗಾದಿ ಬಳಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Ugadi Horoscope) ನಮ್ಮ ಜೀವನದಲ್ಲಿ ಬಹಳ ಮುಖ್ಯ ಬದಲಾವಣೆಗಳು ಆಗಲಿದೆ. ಗ್ರಹಗಳ ಸಂಚಾರದಿಂದ ನಮ್ಮ ಜೀವನದಲ್ಲಿ ಸಾಕಷ್ಟು ಒಳಿತು ಕೆಡುಕುಗಳು ಸಂಭವಿಸುವ ಸಾಧ್ಯತೆ ಇರ ಲಿದೆ.ಈ ಬಾರಿಯ ಹೊಸ ಸಂವತ್ಸರದಲ್ಲಿ ಗ್ರಹಗಳ ರಾಶಿ ಬದಲಾವಣೆ ಇತರ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರ ಬಹುದು ಎನ್ನುವ ಕುತೂಹಲ ನಮ್ಮಲ್ಲಿದೆ. ಅಂತೆಯೆ ಈ ಬಾರಿ ಯುಗಾದಿಯ ಹೊಸ ವರ್ಷವು ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಒಳಿತು ಕೆಡುಕೇನು? ಯಾವ ರೀತಿಯ ಬದಲಾವಣೆ ಇದೆ? ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.
ಗುರು ಬಲದ ಸೌಭಾಗ್ಯ
ಸಿಂಹ ರಾಶಿ ಅವರಿಗೆ ಮೇ 14ರ ಬಳಿಕ ಗುರುಬಲ ಭಾಗ್ಯ ಇರಲಿದೆ. ಹೀಗಾಗಿ ಅಂದುಕೊಂಡ ಕೆಲಸ ಕಾರ್ಯಗಳು ಸಕಾಲಕ್ಕೆ ಆಗಲಿದೆ. ಮದುವೆ ಮತ್ತಿತರ ಮಂಗಳ ಕಾರ್ಯಗಳು ನೆರವೇರಲಿವೆ. ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ವರಿಗೆ ಈ ಯುಗಾದಿ ಬಹಳ ಸಂಭ್ರಮ ತರಲಿದೆ. ಗುರು ಬಲದಿಂದಾಗಿ ಭೂಮಿಯ ಕೆಲಸ ಕಾರ್ಯಗಳು, ತೋಟ ನಿರ್ಮಾಣ , ಹೊಸ ವಾಹನ ಖರೀದಿ, ಚಿನ್ನ ಬೆಳ್ಳಿ ಇತರ ಸಂಪತ್ತಿನ ಖರೀದಿ ಎಲ್ಲಕ್ಕೂ ಶುಭ ಸಂದರ್ಭ ಒದಗಿ ಬರಲಿದೆ. ಮೇ- ಜೂನ್ ಬಳಿಕ ಸಿಂಹ ರಾಶಿ ಅವರು ಉತ್ತಮವಾದ ರಾಶಿಫಲ ಪಡೆಯಲಿದ್ದಾರೆ. ಪರಿಣಾಮ ಸರ್ಕಾರಿ ಕೆಲಸ ಕಾರ್ಯಗಳು ಈಡೇರಲಿದ್ದು ಸಂತೋಷದ ವಾತಾವರಣ ನೆಲೆಯಾಗಲಿದೆ.
ಅಪಾಯದ ಬಗ್ಗೆ ಎಚ್ಚರವಹಿಸಿ
ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ಸ್ವಲ್ಪ ಮಟ್ಟಿಗೆ ಅಶುಭ ಫಲ ಗೋಚರವಾಗಲಿದೆ. ಹಾಗಾಗಿ ಪ್ರಯಾಣ ಮಾಡುವಾಗ ಬಹಳ ಎಚ್ಚರಿಕೆ ಅಗತ್ಯ. ಒಂದಿಷ್ಟು ಕೆಲಸ ಕಾರ್ಯಗಳು ಇತರರ ಏಳ್ಗೆಗಾಗಿ ಮಾಡಲು ಹೋಗುವುದು ಅಪಾಯ ತರುವ ಸಾಧ್ಯತೆ ಇದೆ. ಅನಗತ್ಯ ಖರ್ಚು, ತಾಪ ತ್ರಯ, ಗೊಂದಲಗಳು ಉಂಟಾಗಲಿದೆ. ಜನವರಿ 14 ರ ನಂತರ ಸಿಂಹ ರಾಶಿ ಅವರಿಗೆ ಸಣ್ಣ ಪುಟ್ಟ ಅಪಘಾತ ಆಗುವ ಸಂಭವ ಇದೆ. ಹಾಗಾಗಿ ಈ ಎಲ್ಲ ಸಮಸ್ಯೆಗೆ ಗುರುವಿನ ಆರಾಧನೆ ಮಾಡಿದರೆ ಕೆಟ್ಟ ರಾಶಿ ಫಲ ನಿಯಂತ್ರಣದಲ್ಲಿ ಇರಲಿದೆ.
ಗುರುವಿನ ಅನುಗ್ರಹ
ಸಿಂಹ ರಾಶಿ ಅವರು ನಿರಂತರ ಗ್ರಂಥಗಳ ಅಧ್ಯಯನ ಮಾಡುವುದರಿಂದ ಸಾಕಷ್ಟು ಶುಭ ಫಲ ನಿಮ್ಮ ರಾಶಿಯಲ್ಲಿ ಗೋಚರವಾಗಲಿದೆ. ನಿಮ್ಮ ಸಂಪ ತ್ತು ನಶಿಸದಂತೆ ಮತ್ತು ಯಾವುದೆ ಚ್ಯುತಿ ಬರದಂತೆ ಕಾಯಲು ಗುರುವಿನ ಅನುಗ್ರಹ ಬಹಳ ಅಗತ್ಯವಿದೆ. ಗುರುಗಳ ಸಂಬಂಧಿಸಿದ ಶ್ಲೋಕ ಪಠಣ, ಗ್ರಂಥ ಓದುವಿಕೆಯಿಂದ ಸಮಸ್ಯೆ ಪರಿಹಾರವಾಗಲಿದೆ. ಇದರಿಂದ ಒಳ್ಳೆ ವಿಚಾರದ ಬಗ್ಗೆ ಆಲೋಚನೆ,ವೃತ ಧ್ಯಾನ ಇತ್ಯಾದಿಗಳನ್ನು ಮಾಡಲು ಮನೋಸ್ಥೈರ್ಯ ಬರಲಿದೆ.
ಇದನ್ನು ಓದಿ: Ugadi Horoscope: ವೃಷಭ ರಾಶಿಯವರಿಗೆ ರಾಜಫಲ! ಈ ವರ್ಷ ಅಂದುಕೊಂಡದ್ದೆಲ್ಲಾ ನೆರವೇರುತ್ತೆ
ಪರಿಹಾರ ಕ್ರಮ ಏನು?
ಗುರು ಪ್ರಾಬಲ್ಯ ಹೊಂದಿದ್ದ ಸಂದರ್ಭದಲ್ಲಿ ಸಿಂಹ ರಾಶಿ ಅವರು ಹೆಚ್ಚು ವ್ರನಿಷ್ಠರಾಗಿರಬೇಕು. ಸೂರ್ಯೋದಯಕ್ಕೆ ಮುನ್ನ ಬೇಗ ಎದ್ದು ಸೂರ್ಯ ನಮಸ್ಕಾರ ಮಾಡುವುದರಿಂದ ಕರ್ಮಫಲಗಳಲ್ಲಿ ಸಾಕಷ್ಟು ಒಳಿತಾಗಲಿದೆ. ಉತ್ತಮ ಆರೋಗ್ಯ ಸ್ಥಿತಿಗೆ, ವಿದ್ಯಾರ್ಥಿ ಗಳ ಉತ್ತಮ ಫಲಿತಾಂಶ ಎಲ್ಲ ದಕ್ಕೂ ಕೂಡ ಸಿಂಹ ರಾಶಿ ಅವರು ದೇವರಿಗೆ ಪೂಜೆ ಸಲ್ಲಿಸಿದರೆ ಫಲ ಸಿಗಲಿದೆ. ನಿಮ್ಮ ಬದುಕಿನಲ್ಲಿ ಯಾರಿಗೆ ಗುರು ಸ್ಥಾನ (ರಾಘವೇಂದ್ರ ಸ್ವಾಮಿಗಳು, ನಾರಾಯಣ ಗುರುಗಳು) ನೀಡುತ್ತಿರೊ ಅವರನ್ನು ಆರಾಧಿಸಬೇಕು. ಗುರುವಿನ ದರ್ಶನ, ಸೇವೆ, ಫಲ ತಾಂಬೂಲಾದಿಗಳನ್ನು ನೀಡ ಬೇಕು. ಗುರುವಿನ ಆರಾಧನೆ ಮಾಡುವುದರಿಂದ ಏನನ್ನು ನೀವು ಪಡೆದಿದ್ದೀರೊ ಅದು ನಿಮ್ಮಲ್ಲೇ ಶಾಶ್ವತವಾಗಿ ನೆಲೆಸುವಂತಾಗಲಿದೆ.