ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ವೃಷಭ ರಾಶಿಯವರಿಗೆ ರಾಜಫಲ! ಈ ವರ್ಷ ಅಂದುಕೊಂಡದ್ದೆಲ್ಲಾ ನೆರವೇರುತ್ತೆ

Ugadi Horoscope: ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭ ವಾಗುತ್ತಿದ್ದಂತೆ ಆಯಾರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025 ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಯುಗಾದಿ 2025 ರ ಪಂಚಾಂಗ ದಲ್ಲಿ ‌‌ವೃಷಭರಾಶಿ ಯಲ್ಲಿ ಜನಿಸಿದವರಿಗೆ ವರ್ಷ ಭವಿಷ್ಯ ಹೇಗಿರಲಿದೆ, ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ..

ವೃಷಭ ರಾಶಿಯವರಿಗೆ ಈ ವರ್ಷ ಅದೃಷ್ಟವೋ ಅದೃಷ್ಟ..!

Profile Pushpa Kumari Mar 28, 2025 6:43 PM

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2025 ರ ಮಾರ್ಚ್ 30 ರಂದು ಪ್ರಾರಂಭವಾಗಲಿದೆ. ಯುಗಾದಿ 2025ಪಂಚಾಂಗದಲ್ಲಿ(Ugadi Horoscope) ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವನ್ನು ಸೂಚಿಸಿದ್ದು ಕೆಲ ಗ್ರಹಗಳ ಗತಿ ಬದಲಾವಣೆ ಆಗಲಿದೆ. ಹಾಗಾಗಿ 2025ರ ಯುಗಾದಿ ಹಬ್ಬದ ವರ್ಷವು ಯಾರ ಬಾಳಲ್ಲಿ ಸಿಹಿ ಹೆಚ್ಚಾಗಲಿದೆ? ಯಾರಿಗೆ ಕಹಿ ಇರಲಿದೆ ಎನ್ನುವ ಕುತೂಹಲ ಇರುವುದು ಸಹಜ. ಆದ್ದರಿಂದ ಯುಗಾದಿ 2025 ರ ಪಂಚಾಂಗದಲ್ಲಿ ‌‌ ವೃಷಭ ರಾಶಿಯಲ್ಲಿ ಜನಿಸಿದವರಿಗೆ ವರ್ಷ ಭವಿಷ್ಯ ಹೇಗಿರಲಿದೆ? ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಬೀರಲಿದೆ ಎಂದು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

ಗುರು ಬಲ ಆರಂಭ

ವೃಷಭ ರಾಶಿಯು ರೋಹಿಣಿ, ಕೃತಿಕ, ಮೃಗಶಿರ ನಕ್ಷತ್ರಕ್ಕೆ ಒಳಪಡಲಿದ್ದು ಈ ಯುಗಾದಿಯಂದು ಕೆಲ ಗ್ರಹಗಳ ಜಾಗ ಬದಲಾವಣೆ ಆಗಲಿದೆ. ವಿಶೇಷ ವಾಗಿ ಯುಗಾದಿಯು ವೃಷಭ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದ್ದು ಗುರು ಬಲದಿಂದ ಹೆಚ್ಚು ಪ್ರಗತಿಯನ್ನು ಕಾಣಲಿದ್ದೀರಿ. ಯುಗಾದಿ ಹಬ್ಬದ ದಿನದಿಂದ 45 ದಿನದ ವರೆಗೂ ಗುರು ಸ್ವಯಂ ರಾಶಿಯಲ್ಲೇ ಇದ್ದು ಮುಂದಿನ ಶುಭ ದಿನಗಳ ಸೂಚನೆಯನ್ನು ಗುರು ನೀಡಿದ್ದಾನೆ. ಈ ವರ್ಷ ವೃಷಭ ರಾಶಿಯವರಿಗೆ ಉತ್ತಮವಾದ ಬಲ ಇರಲಿದ್ದು ವೈಯಕ್ತಿಕ ಜೀವನದಲ್ಲಿ ಯಶಸ್ಸನ್ನು ಗಳಿಸುವ ಯೋಗವಿದೆ. ಯಾಕಂದ್ರೆ ಗುರು ದ್ವಿತೀಯಕ್ಕೆ ಬಂದಾಗ ರಾಜಫಲ ಸಿಗಲಿದ್ದು ಮೇ 14ರ ನಂತರ ವೃಷಭ ರಾಶಿಯವರಿಗೆ ಗುರು ಬಲ ಇರುವುದರಿಂದ ಅಂದುಕೊಂಡಂತಹ ಆಸೆ ಈಡೇರಿಸಿ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. 



ರಾಜಫಲದಿಂದ ಯಶಸ್ಸು

ಗುರು ದ್ವಿತೀಯಕ್ಕೆ ಬಂದಾಗ ರಾಜ ಫಲದ ಯೋಗ ಸಿಗಲಿದೆ. ಈ ಸಂದರ್ಭ ಗುರು ಬದಲಾವಣೆಯಿಂದ ಸಾಕಷ್ಟು ಬದಲಾವಣೆ ಕಂಡು ಬರಲಿದ್ದು ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಉತ್ತಮ ಲಾಭವನ್ನು ಸಹ ಪಡೆಯಬಹುದು. ನೀವು ಅಂದುಕೊಳ್ಳದೆ ಇರುವಂತಹ ಮಾರ್ಗಗಳಿಂದ ಉತ್ತಮ ಅವಕಾಶಗಳು ಲಭಿಸುವುದು. ಈ ಹಿಂದೆ ಕಷ್ಟ ಪಟ್ಟ ಶ್ರಮಕ್ಕೆ ಈ ವರ್ಷ ಹೆಚ್ಚಿನ ಲಾಭ ನಿಮಗೆ ಸಿಗಲಿದೆ.

ಆರೋಗ್ಯದ ಕಾಳಜಿ ಅಗತ್ಯ

ಪಂಚಮದಲ್ಲಿ ಕೇತು ಇದ್ದ ಕಾರಣ ವೃಷಭ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ದೈಹಿಕ ವಾಗಿ ವೃಷಭ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.ಬೆನ್ನು ನೋವು, ಅಥವಾ ಪಾರ್ಶ್ವವಾಯು ‌ಇತ್ಯಾದಿ ಉಂಟಾಗುವ ಸಾಧ್ಯತೆ ಹೆಚ್ಚು.ಹಾಗಾಗಿ ವೃಷಭ ರಾಶಿಯವರಿಗೆ ಅನಾರೋಗ್ಯದ ಭಯ ಈ ವರ್ಷ ಕಾಡಲಿದ್ದು ಅನಾರೋಗ್ಯ ಸಮಸ್ಯೆಯಿಂದ ಖರ್ಚು ವೆಚ್ಚಗಳು ಹೆಚ್ಚಾಗಲಿವೆ.

ವೃತ್ತಿಯಲ್ಲೂ ಪ್ರಗತಿ

ಈ ಯುಗಾದಿಯ ಸಂದರ್ಭದಲ್ಲಿ ವೃಷಭ ರಾಶಿಗೆ ಗುರು ಮತ್ತು ಶನಿಯು ಉತ್ತಮ ಸ್ಥಾನದಲ್ಲಿದ್ದು ನೀವು ಅಂದುಕೊಂಡಂತಹ ಹೆಚ್ಚಿನ ಕೆಲಸ ಕಾರ್ಯಗಳು ನೆರವೆರಲಿದೆ. ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಹೊಂದಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುವಿರಿ.

ಇದನ್ನು ಓದಿ: Live Long Life: ಈ ಸಲಹೆ ಪಾಲಿಸಿದ್ರೆ ನೀವೂ ಯಾವುದೇ ಔಷಧ ಇಲ್ಲದೆ ದೀರ್ಘಾಯುಷ್ಯ ಹೊಂದಬಹುದು

ಗ್ರಾಮ ದೇವತೆಯನ್ನು ಆರಾಧಿಸಿ

ನೀವು ಈ ಸಂದರ್ಭ ಏನೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಿನ‌ನಿತ್ಯ ನಿಮ್ಮ ಗ್ರಾಮ ದೇವಿಯನ್ನು ಆರಾಧಿಸಿ. ನಿಮ್ಮದೆ ಊರಿನ ಗ್ರಾಮ ದೇವಾ ಲಯಕ್ಕೆ  ಭೇಟಿ ನೀಡುವ ಮೂಲಕ ದೇವರಲ್ಲಿ‌ ಪ್ರಾರ್ಥಿಸಿದರೆ ನಿಮ್ಮ ತೊಂದರೆಗಳಿಗೆ ಪರಿಹಾರವನ್ನು ಪಡೆಯಬಹುದು.ಈ ಅವಧಿಯಲ್ಲಿ ಗ್ರಾಮ ದೇವಿ,  ಮಹಾಲಕ್ಷ್ಮಿ ದೇವಿಯನ್ನು ಪೂಜಿಸಿ ಮುತೈದೆಯರಿಗೆ ಹಣ್ಣು, ಹಂಪ ಲು ನೀಡಿ ಆಶಿರ್ವಾದ ಪಡೆದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಇನ್ನು ಗ್ರಹಣ ಸಂದರ್ಭದಲ್ಲಿ ಸರಿಯಾದ ನಿಯಮಪಾಲನೆ ಮಾಡುವ ಜೊತೆಗೆ ಸಮುದ್ರ ಜೀವರಾಶಿಗಳಿಗೆ ಆಹಾರಗಳನ್ನು ನೀಡುವುದರಿಂದ ಅನಾರೋಗ್ಯ ಖರ್ಚು ವೆಚ್ಚಗಳನ್ನು ತಡೆಯಬಹುದು..