ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ತುಲಾ ರಾಶಿಯವರಿಗೆ ಯುಗಾದಿ ನಂತರ ರಾಜಯೋಗ

ಯುಗಾದಿ 2025ರ ಪಂಚಾಂಗದ ಪ್ರಕಾರ ಈ ಹೊಸ ವರ್ಷವು ತುಲಾ ರಾಶಿಯಲ್ಲಿ ಜನಿಸಿದವರಿಗೆ ಹೇಗಿರಲಿದೆ? ಯುಗಾದಿ ಬಳಿಕ ಮುಂದಾಗುವ ಒಳಿತು ಕೆಡುಕುಗಳೇನು ಎನ್ನುವುದನ್ನು ಖ್ಯಾತ ಜ್ಯೋತಿಷಿ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ತುಲಾ ರಾಶಿಗೆ ಯುಗಾದಿ ನಂತರ ಆರ್ಥಿಕವಾಗಿ ಸಾಕಷ್ಟು ಲಾಭ

ugadi libra astrology

Profile Pushpa Kumari Mar 29, 2025 6:43 PM

ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು ಯುಗಾದಿಗೆ ಪ್ರಾರಂಭ. ಹೀಗಾಗಿ ಯುಗಾದಿಯಂದು ಬೇವು ಬೆಲ್ಲ ಸವಿದು ಸುಖ ದುಃಖಗಳನ್ನು ಸಮನಾಗಿ ಕಾಣುವಂತೆ ಈ ಹಬ್ಬದ ಆಚರಣೆ ಮಾಡುತ್ತೇವೆ. ಯುಗಾದಿ 2025ರ ಪಂಚಾಂಗದ ಪ್ರಕಾರ ಈ ಹೊಸ ವರ್ಷವು ತುಲಾ ರಾಶಿಯಲ್ಲಿ (Ugadi Horoscope) ಜನಿಸಿದವರಿಗೆ ಹೇಗಿರಲಿದೆ? ಯುಗಾದಿ ಬಳಿಕ ಮುಂದಾ ಗುವ ಒಳಿತು ಕೆಡುಕುಗಳೇನು ಎಂದು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿವರವಾಗಿ ತಿಳಿಸಿದ್ದಾರೆ.



ತುಲಾ ರಾಶಿಗೆ ಯುಗಾದಿಯ ಭವಿಷ್ಯ ಹೇಗಿರಲಿದೆ?

ಚಿತ್ತ ನಕ್ಷತ್ರ, ಸ್ವಾತಿ ನಕ್ಷತ್ರ, ವಿಶಾಖ ನಕ್ಷತ್ರ ತುಲಾ ರಾಶಿಯಲ್ಲಿ ಬರಲಿದ್ದು, ನಿಮಗೆ ಯುಗಾದಿ ಸಂವತ್ಸರವು ಅತ್ಯುತ್ತಮ ಫಲ ನೀಡಲಿದೆ. ಗುರು ಹಾಗೂ ಶನಿಯು ಲಾಭದಲ್ಲಿ ಇರಲಿದ್ದು ಇದ್ದಂತಹ ಗ್ರಹಣ ದೋಷಗಳು ಪರಿಹಾರವಾಗಲಿದೆ. ಕಳೆದ 2023ರ ಚಂದ್ರಗ್ರಹಣದಿಂದ ತುಲಾ ರಾಶಿಯವರಿಗೆ ಹಾನಿಯಾಗಿ ಕೆಲವು ಸಂದರ್ಭಗಳಲ್ಲಿ ನಷ್ಟ ಉಂಟಾಗಿತ್ತು. ಆದರೆ ಈ ವರ್ಷ ಗ್ರಹಗಳ ಸ್ಥಾನ ಪಲ್ಲಟದಿಂದಾಗಿ ಕೆಲವು ಬದಲಾವಣೆ ಕಂಡು ಬರಲಿದೆ.

ರಾಜಯೋಗ ಸಿದ್ದಿ

ತುಲಾ ರಾಶಿಯಲ್ಲಿ ದಶ ಮುಕ್ತಿಗಳು ಉತ್ತಮವಾಗಿ ನಡೆಯಲಿದ್ದು, ಅಂತವರಿಗೆ ರಾಜಯೋಗವು ಸಿದ್ದಿಯಾಗಲಿದೆ. ಹಾಗಾಗಿ ಈ ವರ್ಷ ತುಲಾ ರಾಶಿಗೆ ಅಂದುಕೊಂಡದ್ದೆಲ್ಲ ಇಷ್ಟಾರ್ಥ ಪ್ರಾಪ್ತಿಯಾಗಲಿದೆ. ಈ ಸಂದರ್ಭ ನೀವು ಆರ್ಥಿಕವಾಗಿ ಲಾಭವನ್ನು ಪಡೆಯುವುದರೊಂದಿಗೆ ಜೀವನದಲ್ಲಿ ಸುಧಾರಣೆಯನ್ನು ಹೊಂದುವಿರಿ ಮತ್ತು ನಿಮ್ಮಲ್ಲಿ ಸಂತೋಷದ ವಾತಾವರಣ ಇರಲಿದೆ. ಹಾಗಾಗಿ ಮುಂದಿನ ಯುಗಾದಿಯವರೆಗೂ ತುಲಾ ರಾಶಿಯವರು ಸಂತೋಷವನ್ನೇ ಕಾಣ ಬಯಸುತ್ತೀರಿ.

ಮನಸ್ತಾಪ ಉಂಟಾಗಲಿದೆ

ತುಲಾ ರಾಶಿಯವರು ಯಾರೊಂದಿಗೂ ಮನಸ್ತಾಪ ಮಾಡಿಕೊಳ್ಳದೆ ಧರ್ಮ- ನಿಷ್ಠರಾಗಿರಬೇಕು. ಶನಿ ಮತ್ತು ರಾಹುವಿನ ಪ್ರಭಾವದಿಂದಾಗಿ, ತುಲಾ ರಾಶಿಯ ಜನರಿಗೆ ತಮ್ಮ ಸಂಬಂಧಗಳಲ್ಲಿ ಕೆಲವೊಮ್ಮೆ ಜಗಳ ಉಂಟಾಗುವ ಸಾಧ್ಯತೆ ಇದೆ. ತುಂಬಾ ಹತ್ತಿರದವರ ಜತೆ ವ್ಯಾಜ್ಯ ಉಂಟಾಗುವ ಸಂಭವ ಇದೆ. ಈ ಸಮಯದಲ್ಲಿ ಉತ್ತಮ ಮಾತು ಮತ್ತು ಪರಸ್ಪರರನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವುದರಿಂದ ಸಂಬಂಧವನ್ನು ಬಲಗೊಳಿಸಿಕೊಳ್ಳಬಹುದು.

ವೃತ್ತಿ ಜೀವನ

6ನೇ ಮನೆಯಲ್ಲಿ ಶನಿಯು ಧನ ಲಾಭವನ್ನು ನೀಡಲಿದ್ದು ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡಲಿದ್ದೀರಿ. ಗುರು ಗ್ರಹವು 9ನೇ ಮತ್ತು 10ನೇ ಮನೆಯಲ್ಲಿ ಚಲಿಸುವುದರಿಂದಾಗಿ ನೀವು ವೃತ್ತಿ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುವಿರಿ. ಹಾಗಾಗಿ ನಿಮ್ಮ ಕಠಿಣ ಪರಿಶ್ರಮದಿಂದ ಈ ವರ್ಷ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದೆ. ಈ ಅವಧಿಯಲ್ಲಿ ನಿಮಗೆ ಆರ್ಥಿಕ ಲಾಭವಾಗುವ ಯೋಗವಿದೆ. ಶುಕ್ರನು ತುಲಾ ರಾಶಿಯಲ್ಲಿ ಚಲಿಸುವುದರಿಂದ ನಿಮಗೆ ಬಹಳಷ್ಟು ಒಳಿತಾಗಲಿದೆ.

ಇದನ್ನು ಓದಿ: Astro Tips: ಶುಕ್ರವಾರ ತಪ್ಪದೇ ಈ ಕೆಲಸಗಳನ್ನು ಮಾಡಿ, ಲಕ್ಷ್ಮಿ ಒಲಿಯುತ್ತಾಳೆ..!

ದೇವರನ್ನು ಆರಾಧಿಸಿ

ತುಲಾ ರಾಶಿಯವರು ಭಜನೆ, ಧಾರ್ಮಿಕ ಪಠಣಗಳಲ್ಲಿ ಭಾಗಿಯಾದರೆ ನಿಮ್ಮಲ್ಲಿ ಆತ್ಮ ಸ್ಥೈರ್ಯ ಹೆಚ್ಚಾಗಲಿದೆ. ಕುಲದೇವರ ಆರಾಧನೆ, ಮಾತಾ ಪಿತೃಗಳ ಸೇವೆ, ಪ್ರಾಣಿ ಪಕ್ಷಿಗಳ ಸೇವೆ, ಅನ್ನದಾನ ಇತ್ಯಾದಿ ಸೇವೆ ನೀಡಿದರೆ ಕೆಡುಕಾಗುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಹೋಮ, ಯಜ್ಞಗಳಲ್ಲಿ ಪಾಲ್ಗೊಳ್ಳಬೇಕು. ಹೋಮದಲ್ಲಿನ ಅಗ್ನಿಗೆ ಪ್ರಾರ್ಥನೆ ನೆರವೇರಿಸಿ. ಹಾಗೆಯೇ ಗಜ ದರ್ಶನ ಮಾಡುವ ಮೂಲಕ ಉತ್ತಮ ಫಲವನ್ನು ಕಾಣಲಿದ್ದಿರಿ. ಯಾವುದೇ ದೇವರ ಸ್ತೋತ್ರವನ್ನು ಪಠಿಸಿವುದರಿಂದ ನಕಾರಾತ್ಮಕ ಪರಿಣಾಮ ಕಡಿಮೆ ಮಾಡಬಹುದು.