Astro Tips: ಶುಕ್ರವಾರ ತಪ್ಪದೇ ಈ ಕೆಲಸಗಳನ್ನು ಮಾಡಿ, ಲಕ್ಷ್ಮಿ ಒಲಿಯುತ್ತಾಳೆ..!
Astro Tips: ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಹಾಗಾದ್ರೆ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಯಾವ ಕೆಲಸ ಮಾಡಬೇಕು...? ಎಂಬ ಮಾಹಿತಿ ಇಲ್ಲಿದೆ.


ಬೆಂಗಳೂರು: ವಾರದಲ್ಲಿ ಬರುವ ಪ್ರತೀ ದಿನವನ್ನು ಒಂದಲ್ಲ ಒಂದು ದೇವರು ಅಥವಾ ದೇವತೆಗಳಿಗೆ ಸಮರ್ಪಿತವಾಗಿದೆ. ಗ್ರಂಥಗಳಲ್ಲಿ ಕೆಲವು ದಿನನಿತ್ಯದ ನಿಯಮಗಳನ್ನು ಸಹ ಹೇಳಲಾಗಿದೆ. ಉಳಿದೆಲ್ಲಾ ದಿನಗಳನ್ನು ವಿವಿಧ ದೇವರುಗಳಿಗೆ ಅರ್ಪಿತವಾದಂತೆ ಶುಕ್ರವಾರ(Astro Tips)ವನ್ನು ಲಕ್ಷ್ಮಿ ದೇವಿ(Goddess Lakshmi)ಗೆ ಅರ್ಪಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆಯು ಎಂದಿಗೂ ಎದುರಾಗಬಾರದು ಎಂದು ಬಯಸುತ್ತಾನೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಇತರರಂತೆ ಅವನು ಪೂಜೆ ಮತ್ತು ಪರಿಹಾರಗಳನ್ನು ಮಾಡುತ್ತಾನೆ. ಅನೇಕ ಬಾರಿ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ನಂತರವೂ ಹಣದ ಸಮಸ್ಯೆ ಆತನನ್ನು ಬಿಟ್ಟು ಹೋಗುವುದಿಲ್ಲ ಮತ್ತು ಅಂತಹ ಪರಿಸ್ಥಿತಿಯು ಆ ಸಂಕಷ್ಟದಲ್ಲಿರುವ ವ್ಯಕ್ತಿಯನ್ನು ಸಾಲ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಶುಕ್ರವಾರದಂದು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ನೀವು ಹಣದ ಸಮಸ್ಯೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ.
ಗೋಪಾಲ ಸಹಸ್ರನಾಮ ಪಠಿಸಿ
ಪ್ರತಿ ಶುಕ್ರವಾರ ನಿಯಮಿತವಾಗಿ ಶ್ರೀ ಗೋಪಾಲ ಸಹಸ್ರನಾಮನ್ನು ಪಠಿಸಬೇಕು. ಈ ಕಾರಣದಿಂದಾಗಿ ನಿಮ್ಮ ಸಾಲದ ಹೊರೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಮತ್ತು ಇದು ನಿಮ್ಮ ಮನೆಯಲ್ಲಿ ಸಮೃದ್ಧಿ ಉಳಿಯುವಂತೆ ಮಾಡುತ್ತದೆ. ಇದನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯು ಕೂಡ ನಿಮ್ಮ ಮೇಲೆ ಪ್ರಸನ್ನಳಾಗುತ್ತಾಳೆ ಎನ್ನುವ ನಂಬಿಕೆಯಿದೆ.
ಈ ಲಕ್ಷ್ಮಿ ಮಂತ್ರವನ್ನು ಪಠಿಸಿ:
ಶುಕ್ರವಾರ ರಾತ್ರಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಈಗ ಕಮಲದ ದೇವತೆ ಲಕ್ಷ್ಮಿಯನ್ನು ಧ್ಯಾನಿಸಿದ ನಂತರ, ಮನಸ್ಸಿನಲ್ಲೇ 'ಏಂ ಹ್ರೀಂ ಶ್ರೀಂ ಅಷ್ಟಲಕ್ಷ್ಮೀಯೈ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ' ಎನ್ನುವ ಮಂತ್ರವನ್ನು 108 ಬಾರಿ ಪಠಿಸಿ ಮತ್ತು ಮಂತ್ರದ ಪ್ರತಿ ಪಠಣದಲ್ಲೂ ಒಂದೊಂದು ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಅಂದರೆ 108 ಬಾರಿ ಮಂತ್ರವೆಂದರೆ 108 ಕಮಲದ ಹೂವುಗಳು ಅಗತ್ಯವಾಗಿರುತ್ತದೆ. ಶುಕ್ರವಾರ ಇದನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮೇಲೆ ದಯೆ ತೋರುತ್ತಾಳೆ. ಮತ್ತು ನಿಮ್ಮೆಲ್ಲಾ ಹಣದ ಸಮಸ್ಯೆಯನ್ನು ದೂರಾಗಿಸುತ್ತಾಳೆ.ಈ ಸುದ್ದಿಯನ್ನು ಓದಿ: Astro Tips: ಶುಕ್ರವಾರ ಈ ಕೆಲಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುವಳು..!
ವ್ಯವಹಾರಿಕ ಅಭಿವೃದ್ಧಿಗಾಗಿ ಹೀಗೆ ಮಾಡಿ:
ಶುಕ್ರವಾರದಂದು, ಓಂ ಲಕ್ಷ್ಮೀ ನಮಃ ಎಂಬ ಮಂತ್ರದಿಂದ ಅಭಿಷೇಕ ಮಾಡಿದ ನಂತರ ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಅದನ್ನು ಲಕ್ಷ್ಮಿಯ ಮುಂದೆ ಇಟ್ಟು ಪೂಜಿಸಿ. ನಂತರ ಇದನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ರಹಸ್ಯವಾಗಿ ಇಡಿ. ಇದರಿಂದ ವ್ಯಾಪಾರ ಬೆಳೆಯುತ್ತದೆ ಮತ್ತು ಸಾಲ ತೆಗೆದುಕೊಳ್ಳುವ ಅಗತ್ಯ ಎದುರಾಗುವುದಿಲ್ಲ. ಆದರೆ, ಈ ಕೆಲಸವನ್ನು ಮಾಡುವಾಗ ಯಾರು ನಿಮ್ಮನ್ನು ನೋಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಅಷ್ಟ ಲಕ್ಷ್ಮಿಯನ್ನು ಆರಾಧಿಸಿ:
ಶುಕ್ರವಾರದ ದಿನದಂದು ರಾತ್ರಿ ಅಷ್ಟ ಲಕ್ಷ್ಮಿ ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿಮಗೆಂದು ಎದುರಾಗುವುದಿಲ್ಲ. ಅಷ್ಟ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಕೆಂಪು ಹೂವಿನ ಹಾರವನ್ನು ಆಕೆಗೆ ಅರ್ಪಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಈ ಪರಿಹಾರದಿಂದ ಹಣದ ಕೊರತೆ ಎದುರಾಗುವುದಿಲ್ಲ ಮತ್ತು ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಶುಕ್ರವಾರದ ದಿನದಂದು ಈ ಮೇಲಿನ ನಾಲ್ಕು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯಿಂದ ನಮ್ಮೆಲ್ಲಾ ಹಣಕಾಸಿನ ಸಮಸ್ಯೆಗಳು ದೂರಾಗುತ್ತದೆ. ಹಾಗೂ ಜೀವನದಲ್ಲಿ ಧನ, ಧಾನ್ಯಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ಕಾಪಾಡುತ್ತದೆ. ಈ ದಿನ ನಾವು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆ ಅಷ್ಟ ಲಕ್ಷ್ಮಿಯರನ್ನು ಕೂಡ ಪೂಜಿಸಬಹುದು.