ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ಮೀನ‌ ರಾಶಿಗೆ ಸಾಡೇಸಾತ್‌ ಪರಿಣಾಮ ಏನು? ಯಾವಾಗ ಪರಿಹಾರ?

ಯುಗಾದಿ 2025 ಪಂಚಾಂಗದಲ್ಲಿ(Ugadi Horoscope) ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭ ವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಎಷ್ಟು ಒಳಿತು ಕೆಡುಕು ಇದೆ ಇದಕ್ಕೆ ಪರಿಹಾರ ಕ್ರಮಗಳು ಏನು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ಮೀನ ರಾಶಿಗೆ ಶನಿ ಸಂಚಾರ ಪ್ರಾರಂಭ- ಯಾವ ‌ಪರಿಹಾರ ಕೈಗೊಳ್ಳಬೇಕು?

Profile Pushpa Kumari Mar 31, 2025 11:52 AM

ಬೆಂಗಳೂರು: ಹೊಸ ಸಂವತ್ಸರವು ಯುಗಾದಿ ದಿನದಿಂದಲೇ ಪ್ರಾರಂಭ. ಅಂದಿನಿಂದಲೇ ವಿಶ್ವಾವಸು ಸಂವತ್ಸರ ಆರಂಭವಾಗಲಿದ್ದು ಈ ಹೊಸ ವರ್ಷದ ಸಂವತ್ಸರದಲ್ಲಿ ಶುಭ- ಅಶುಭ ಫಲಗಳು ಏನಿವೆ ಎಂಬುದನ್ನು ಗ್ರಹಗಳ ಗೋಚಾರ ಫಲದ ಆಧಾರದಲ್ಲಿ ನೋಡಲಾಗುತ್ತದೆ. ಶನಿ, ರಾಹು, ಕೇತು, ಶುಕ್ರ ಗ್ರಹಗಳ ಸಂಚಲನವು ಕೆಲವು ಗ್ರಹಕ್ಕೆ ಅದೃಷ್ಟ ಒಲಿದು, ಶುಭ ಸಮಾಚಾರ ತಂದರೆ ಇನ್ನು ಕೆಲವು ಗ್ರಹಗಳಿಗೆ ಆಪತ್ತು ಸಂಭವಿಸುವ ಸಾಧ್ಯತೆ ಇದೆ. ಹಾಗಾದರೆ ಈ ಶ್ರಾವಣ ಮಾಸದಲ್ಲಿ ಮೀನ ರಾಶಿಯ ಫಲಾಫಲ ಏನಿರಬಹುದು (Ugadi Horoscope)ನಿಮ್ಮ ಜೀವನದಲ್ಲಿ ಬದಲಾವಣೆಗಳಿವೆಯಾ, ಈ ಹೊಸ ಸಂವತ್ಸರದಲ್ಲಿ ಶುಭಾಶುಭ ಫಲಗಳು ಏನಿವೆ?ಎಷ್ಟು ಒಳಿತು ಕೆಡುಕು ಇದೆ ಇದಕ್ಕೆ ಪರಿಹಾರ ಕ್ರಮಗಳು ಏನು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿಗಳಾದ ವೇ|ಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.



ಮೀನರಾಶಿಯ ವರ್ಷ ಭವಿಷ್ಯ ಹೇಗಿದೆ?

ನೀವು ಪೂರ್ವಭಾದ್ರ ನಕ್ಷತ್ರದ 4ನೇ ಪಾದ, ಉತ್ತರಾಭಾದ್ರ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ರೇವತಿ ನಕ್ಷದ 1,2,3 ಅಥವ 4 ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮೀನ ರಾಶಿ ಆಗುತ್ತದೆ. ಯುಗಾದಿಯ ಸಂದರ್ಭದಲ್ಲಿ ಶನಿ ಸಂಚಾರ ದಿಂದಾಗಿ ಮೀನ ರಾಶಿಯವರಿಗೆ ಹಲವು ಅಡೆತಡೆಗಳು ಉಂಟಾಗಲಿದೆ. ಈ ವರ್ಷ ಮೀನ ರಾಶಿ ಯವರಿಗೆ ನಷ್ಟ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಜನ್ಮದಲ್ಲಿ ಶನಿ ಮತ್ತು ಶುಕ್ರ ನಿದ್ದು ಸಾಡೇಸಾತ್ನ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಲಸ್ಯ, ಸೋಮರಿತನ, ಜಡತ್ವ ಉಂಟಾಗುವ ಸಾಧ್ಯತೆ ಇದೆ. ಶನಿಯು ಜನ್ಮದಲ್ಲೇ ಇರುವುದರಿಂದ ಅನಾರೋಗ್ಯ ಸಮಸ್ಯೆಯು ಉಂಟಾಗುವ ಸಾಧ್ಯತೆ ಇದೆ.

ಸಾಡೇಸಾತ್ ಪರಿಣಾಮ: ಭಯ ಪಡುವ ಅಗತ್ಯ ಇಲ್ಲ!

ಮೀನ‌ರಾಶಿಯವರಿಗೆ ಸಾಡೇಸಾತ್ ಪರಿಣಾಮ ಬೀರಲಿದ್ದು, ಆದರೆ ಭಯ ಪಡುವ ಅಗತ್ಯ ಇಲ್ಲ. ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಸಾಡೇ ಸಾತ್ ಮತ್ತು ಧೈಯ ನೀಡುವ ಏಕೈಕ ಗ್ರಹವಾಗಿದೆ.‌ ಶನಿಯು ನಿಮ್ಮ ಆತ್ಮ‌ ಪರೀಕ್ಷೆ ಮಾಡಲಿದ್ದು ಯಾವಾಗಲೂ ಕೆಟ್ಟ ಫಲಿ ತಾಂಶಗಳನ್ನು ನೀಡುವುದಿಲ್ಲ. ಕೆಲವೊಮ್ಮೆ‌ ಅದೃಷ್ಟ ತುಂಬಾ ಚೆನ್ನಾಗಿ ಇರುತ್ತದೆ. ಆದರೆ ಅದನ್ನು ಉಪಯೋಗಿಸುವ ರೀತಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಮೀನರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಗುರು ಇದ್ದು ಜನ್ಮದಲ್ಲಿ ಶನಿಯು ಇರುವ ಕಾರಣ ಮುಂಬರುವ ಸಂಕ್ರಾಂತಿ ಹಬ್ಬದ ನಂತರವಾಗಿ ಒಳ್ಳೆಯ ಫಲ ಪ್ರಾಪ್ತಿಯಾಗಲಿದೆ.

ಧೈರ್ಯದಿಂದ ಇರಿ:

ಯಾವುದೇ ಸಂದರ್ಭದಲ್ಲೂ ನಿಮ್ಮ ಮನಸ್ಸನ್ನು ಸಕ್ರಮವಾಗಿ ಇಟ್ಟು ಕೊಳ್ಳಿ. ಶನಿಯ ಪ್ರಭಾವದಿಂದಾಗಿ, ಮೀನ ರಾಶಿಯವರಿಗೆ ಆರ್ಥಿಕ ತೊಂದರೆಗಳು, ಕೌಟುಂಬಿಕ ಸಮಸ್ಯೆ ಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆ ಗಳ ಸೂಚನೆ ಇದೆ. ಹಾಗಾಗಿ ಶನಿ ಸಂಚಾರದಿಂದಾಗಿ ನೀವು ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಯನ್ನ ನೀಡಬೇಕಾಗುತ್ತದೆ. ಈ ಸಂದರ್ಭ ನಿತ್ಯ ವ್ಯಾಯಾಮವನ್ನು ಮಾಡುವ ಅಭ್ಯಾಸ ಬೆಳಿಸಿಕೊಳ್ಳಿ

ಇದನ್ನು ಓದಿ: Ugadi Horoscope: ಕುಂಭ ರಾಶಿಗೆ ರಾಹುದೆಸೆ ಬೇವಾಗಲಿದೆಯೆ ಅಥವಾ ಬೆಲ್ಲವಾಗಲಿದೆಯೆ?

ಪರಿಹಾರ ಏನು?

ಸಾಡೇಸಾತ್ ಪ್ರಭಾವ ಬೀರುವ ರಾಶಿಯ ಜನರು . ಈ ಅವಧಿಯಲ್ಲಿ ಯೋಗ, ಧ್ಯಾನ ಮತ್ತು ದಾನ ಧರ್ಮ ದಂತಹ ಕೆಲಸಗಳನ್ನು ಮಾಡುವು ದರಿಂದ ನೀವು ಆಂತರಿಕ ಶಾಂತಿಯನ್ನು ಪಡೆಯಬಹುದು. ಶನಿ ದೇವ ರಿಗೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಬೇಕು. ಅರಿಶಿನ,ಹೂ ,ಹಣ್ಣು ಅಥವಾ ಹಳದಿ ಬಟ್ಟೆಗಳಂತಹ ವಸ್ತುಗಳನ್ನು ದಾನ ಮಾಡಿದರೆ ಒಳಿತು.ನಿಮ್ಮ ಹತ್ತಿರದ ಯಾವುದೇ ದೇವಾಲಯ ಗಳಿಗೆ ಭೇಟಿ ನೀಡಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ನೀಡಿ. ಸೂರ್ಯನಮಸ್ಕಾರ ಮಾಡುವುದು ಶನಿವಾರ ಶನಿಗೆ ಎಣ್ಣೆ ಅಭಿಷೇಕ ಮಾಡುವುದು, ಇತರರಿಗೆ ಸಹಾಯ ಮಾಡುವುದು ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.