ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ವೃಶ್ಚಿಕ ರಾಶಿಯವರು ಅಕ್ಷಯ ತೃತೀಯ ದಿನ ಈ ಕೆಲಸ ಮಾಡಿದರೆ ಶುಭಫಲ ಸಿಗಲಿದೆ

ಶ್ರಾವಣ ಮಾಸದಲ್ಲಿ ವೃಶ್ಚಿಕ ರಾಶಿಯ ಫಲ ಏನಿರಬಹುದು? ನಿಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರಲಿದೆ? ಸಂಕಷ್ಟ ಪರಿಹಾರಕ್ಕೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ವೃಶ್ಚಿಕ ರಾಶಿಗೆ ಯುಗಾದಿ ವರ್ಷದ ಭವಿಷ್ಯ ಫಲ ಹೇಗಿದೆ?

scorpio

Profile Pushpa Kumari Mar 30, 2025 5:36 PM

ಬೆಂಗಳೂರು: ಚೈತ್ರಮಾಸದ ಶುಕ್ಲ ಪಕ್ಷದಂದು ಹಿಂದೂ ಧರ್ಮದ ಹೊಸ ವರ್ಷ ಆರಂಭವಾಗುತ್ತದೆ. ಈ ಬಾರಿ ಯುಗಾದಿಯು ಮಾರ್ಚ್ 30ಕ್ಕೆ ಅನೇಕ ರಾಶಿಗಳ ಮೇಲೆ ಬೇವು ಬೆಲ್ಲದ ರಾಶಿ ಫಲಗಳು ಗೋಚರವಾಗಲಿದೆ. ವಿಶ್ವಾವಸು ಸಂವತ್ಸರದ ಯುಗಾದಿ ಬಳಿಕದ ಅನೇಕ ರಾಶಿಗಳ ಮೇಲೆ ವರ್ಷ ಭವಿಷ್ಯ ಹೇಗಿರಲಿದೆ ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಈ ಬಾರಿ ಯುಗಾದಿಯ ಬಳಿಕ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದ್ದು ಇದು ನಮ್ಮ ಜೀವನದ ಮೇಲು ಸಾಕಷ್ಟು ಪರಿಣಾಮ ಬೀರುತ್ತದೆ. ಗ್ರಹಗಳ ಸಂಚಾರದಿಂದ ಈ ಬಾರಿ ರಾಶಿ ಫಲಗಳು ಸಾಕಷ್ಟು ಶುಭ ಅಶುಭಗಳ ಮಿಶ್ರ ಫಲ ಗೋಚರವಾಗಲಿದೆ. ಈ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ವೃಶ್ಚಿಕ ರಾಶಿಯ ಫಲ (Ugadi Horoscope) ಏನಿರಬಹುದು? ನಿಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆ ಬೀರುತ್ತದೆ ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.



ಪಂಚಮಕ್ಕೆ ಶನಿ ಪ್ರವೇಶ

ವೃಶ್ಚಿಕ ರಾಶಿಯ ಅಧಿಪತಿ ಕುಜಗ್ರಹವಾಗಿದ್ದು ಇತರ ಮಿತ್ರಗ್ರಹಗಳ ಚಲನೆ ಮೂಲಕ ಕುಜನ ಸ್ಥಾನ ಪಲ್ಲಟವಾಗಲಿದೆ. ವೃಶ್ಚಿಕ ರಾಶಿಯಲ್ಲಿ ಪಂಚಮ ಶನಿ ಪ್ರವೇಶ ಆಗಲಿದ್ದು, ಗುರುಬಲ ಕಡಿಮೆ ಆಗಲಿದೆ. ಇಷ್ಟುದಿನ ಶನಿ ಮತ್ತು ಗುರು ಬಲ ಇದ್ದ ಕಾರಣ ಯಾವುದೆ ತೊಂದರೆ ತಾಪತ್ರಯಗಳು ಆಗಿರಲಿಲ್ಲ. ಆದರೆ ಈಗ ಪಂಚಮದಲ್ಲಿ ಶನಿ ಪ್ರವೇಶದಿಂದ ಗೆಲುವಿನ ವಿಚಾರದಲ್ಲಿ ಸ್ವಲ್ಪ ಪರಿಣಾಮ ಬೀರುವ ಸಾಧ್ಯತೆ ಇದೆ. ದುಃಖ, ಆತಂಕ ಆಗಾಗ ಬಂದು ಹೋಗುವ ಸಾಧ್ಯತೆ ಇದೆ. ಇಷ್ಟೆಲ್ಲ ಕಷ್ಟಗಳಿದ್ದರೂ ಎಲ್ಲವನ್ನು ಎದುರಿಸಲು ವೃಶ್ಚಿಕ ರಾಶಿಯವರು ಮನೋಸ್ಥೈರ್ಯ ಹೊಂದಿರಬೇಕು.

ವ್ಯಾಪಾರಸ್ಥರಿಗೆ ಉತ್ತಮ ಸಮಯ

ವೃಶ್ಚಿಕ ರಾಶಿಯಲ್ಲಿನ ವ್ಯಾಪಾರಸ್ಥರಿಗೆ‌ ಇದು ಶುಭ ಕಾಲ ಎನ್ನಬಹುದು. ಹೊಸದಾಗಿ ವ್ಯಾಪಾರ ಮಾಡುವವರಿಗೂ ದೈವ ಬಲ ಇರಲಿದೆ. ಶ್ರಮ ಇಟ್ಟು ಮಾಡಿದ್ದ ಕೆಲಸಕ್ಕೆ ಒಳ್ಳೆ ಲಾಭಾಂಶ ಸಿಗಲಿದೆ. ಬೇರೆ ಬೇರೆ ಕಡೆ ಯಿಂದ ಲಾಭಾಂಶ ಸಿಕ್ಕರೂ ಅನಗತ್ಯ ಖರ್ಚಾಗುವ ಸಾಧ್ಯತೆ ಇದೆ.

ದೈವ ಭಕ್ತಿ ಇರಲಿ

ಯುಗಾದಿ ಬಳಿಕ ವೃಶ್ಚಿಕ ರಾಶಿಗೆ ಗುರುಬಲ ಕ್ಷೀಣವಾಗಲಿದ್ದು ಇದನ್ನೆಲ್ಲ ಸಮದೂಗಿಸಲು ದೈವಭಕ್ತಿ ಹೊಂದಿವುದು ಬಹಳ ಮುಖ್ಯ. ದೇವತಾರಾಧನೆ, ಪೂಜೆ ಪಠಣ ಮಾಡಿದರೆ ವೃಶ್ಚಿಕ ರಾಶಿಯ ಗೋಚರ ಫಲ ಶುಭಕರವಾಗಲಿದೆ. ವೃಶ್ಚಿಕ ರಾಶಿಯವರು ದೈವಭಕ್ತಿ ಹೊಂದಿದ್ದ ಸಂದರ್ಭದಲ್ಲಿ ಏನನ್ನು ಕೂಡ ಜಯಿಸುವ ಮನೋಬಲ ಅವರಿಗೆ ಒಲಿದು ಬರಲಿದೆ. ಬಂಡವಾಳ ಹೂಡಿಕೆ ಮಾಡಿ ನಿರೀಕ್ಷೆ ಮಾಡಿದ್ದಷ್ಟು ಲಾಭ ಸಿಗದಿದ್ದರೂ ನಷ್ಟವಾಗದೆ ಕಾಯ್ದುಕೊಳ್ಳಲು ದೈವ ಭಕ್ತಿ ಬಹಳ ಮುಖ್ಯವಾಗಿದೆ.

ಇದನ್ನು ಓದಿ: Ugadi Horoscope: ಧನು ರಾಶಿಯವರಿಗೆ ಗುರು‌‌ ಅಧಿಪತಿ; ವರ್ಷವಿಡಿ ಶುಭ ಫಲ

ಪರಿಹಾರ ಕ್ರಮಗಳೇನು?

ವೃಶ್ಚಿಕ ರಾಶಿಯವರು ಪಂಚಮ ಶನಿ ಬಾಧೆ ತಪ್ಪಿಸಿಕೊಳ್ಳಲು ದೈವ ಭಕ್ತಿ ಹೊಂದಬೇಕು. ಧ್ಯಾನ, ಶ್ಲೋಕ ಪಠಣವನ್ನು ನಿಶ್ಕಲ್ಮಶ ಶ್ರದ್ಧಾ ಭಕ್ತಿಯಿಂದ ಮಾಡಬೇಕು. ಅಕ್ಷಯ ತೃತೀಯ ದಿನದಂದು ಅಡಿಕೆಯ ಸಿಂಗಾರದ ಹೂವನ್ನು ನಿಮ್ಮ ಊರಿನ ಗ್ರಾಮ ದೇವರಿಗೆ ಸಮರ್ಪಣೆ ಮಾಡಿ. ಇದರಿಂದ ಅನಗತ್ಯ ಸಮಸ್ಯೆಗಳು ದೂರವಾಗಲಿದೆ. ಒಂದು ಮುಷ್ಠಿ ಅಡಿಕೆ ಹಾಗೂ 18 ವಿಳ್ಯದೆಲೆಯನ್ನು ಅಕ್ಷಯ ತೃತೀಯ ದಿನದಂದು ಸುಬ್ರಹ್ಮಣ್ಯ ಸನ್ನಿಧಾನಕ್ಕೆ ಅಥವಾ ಅಮ್ಮನವರ ಸನ್ನಿಧಾನಕ್ಕೆ ಅರ್ಪಣೆ ಮಾಡಬೇಕು. ಹೀಗೆ ಮಾಡುವುದರಿಂದ ವೃಶ್ಚಿಕ ರಾಶಿಯವರಿಗೆ ದ್ರೋಹ, ಮೋಸ ತೊಂದರೆಗೆ ಒಳಗಾಗದಂತೆ, ಮುಂದೆ ಆಗುವ ನಷ್ಟ ಎದುರಾಗದಂತೆ ತಡೆಯಬಹುದು.