Ugadi Horoscope: ಯುಗಾದಿಗೆ ಕನ್ಯಾ ರಾಶಿಗೆ ಗುರುಬಲ ಕ್ಷೀಣ, ದಸರಾ ಬಳಿಕ ದೇವಿಯ ಅನುಗ್ರಹ ಪ್ರಾಪ್ತಿ
ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಹಾಗಾದರೆ ಯುಗಾದಿಯ ಹೊಸ ವರ್ಷವು ಕನ್ಯಾ ರಾಶಿಯಲ್ಲಿ ಜನಿಸಿ ದವರಿಗೆ ಹೇಗಿರಲಿದೆ? ಬದಲಾವಣೆಗಳಿದೆಯಾ ಎನ್ನುವ ಮಾಹಿತಿಯನ್ನು ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ತಿಳಿಸಿದ್ದಾರೆ.

ugadi horoscope

ಬೆಂಗಳೂರು: ಯುಗಾದಿಯಂದು ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನವಾದ ಪಾಡ್ಯದಂದು ಹೊಸ ಪಂಚಾಂಗವು ಬರಲಿದೆ. ಈ ಬಾರಿ 2025ರ ಮಾರ್ಚ್ 30ರಂದು ವಿಶ್ವ ವಸು ನಾಮ ಸಂವತ್ಸರ ಆರಂಭವಾಗಲಿದ್ದು ಯುಗಾದಿ ಹಬ್ಬವನ್ನು ಭಾರತೀಯರು ಹೊಸ ವರ್ಷವೆಂದೇ ಪರಿಗಣಿಸುತ್ತಾರೆ. ವಿಶ್ವ ವಸು ನಾಮ ಸಂವತ್ಸರವು ನಮ್ಮ ಜೀವ ನದ ವರ್ಷ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ. ಗುರು, ರಾಹು, ಶನಿ ಮತ್ತು ಕೇತು ಗ್ರಹಗಳ ಸಂಚಾರ ನಮ್ಮ ರಾಶಿ ಫಲದ ಮೇಲೂ ಗೋಚರ ವಾಗಲಿದೆ. ಹಾಗಾದರೆ ಯುಗಾದಿಯ ಹೊಸ ವರ್ಷವು ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ (Ugadi Horoscope) ಹೇಗಿರಲಿದೆ, ನಿಮ್ಮ ಜೀವನ ದಲ್ಲಿ ಬದಲಾವಣೆಗಳಿದೆಯಾ ಎನ್ನುವ ಮಾಹಿತಿಯನ್ನು ಖ್ಯಾತ ಜ್ಯೋತಿಷಿ ಗಳಾದ ವೇ|ಬ್ರ| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.
ಗುರುಬಲ ಕಡಿಮೆ
ಕನ್ಯಾ ರಾಶಿಯ ಅಧಿಪತಿ ಶುಕ್ರಗ್ರಹವಾಗಿದ್ದು ಈ ವರ್ಷದಂದು ವೃಷಭ ರಾಶಿಯಲ್ಲಿ ಗುರು ಸಂಚರಿಸುವಾಗ ಉತ್ತಮ ಫಲ ಗೋಚರವಾಗಲಿದೆ. ಯುಗಾದಿಯ ಬಳಿಕ ಮೇ 14ರ ತನಕವು ಗುರುಬಲ ಇರಲಿದೆ. ಮೇ 14ರ ಬಳಿಕ ಕೆಲವು ನಿರಾಸೆ ಉಂಟಾಗುವ ಸಾಧ್ಯತೆ ಇದೆ. ಶನಿಯು ಉತ್ತಮ ಫಲದಾಯಕನಾಗಿದ್ದು ಸಪ್ತಮ ಸ್ಥಾನ ಪೂರ್ಣ ಆಕ್ರಮಿಸುವ ತನಕವು ಶನಿ ಉತ್ತಮ ಫಲ ನೀಡಲಿದ್ದಾನೆ. ಗುರುಬಲ ಕಡಿಮೆ ಇದ್ದಾಗ ಅಶುಭದ ವಾರ್ತೆ ಕೇಳಿ ಬರಲಿದೆ. ಬೆಲೆ ಬಾಳುವ ವಸ್ತುಗಳು ಕಳೆದು ಹೋಗುವ ಸಾಧ್ಯತೆ ಇದೆ.
ಆರೋಗ್ಯ ಕಾಳಜಿ ಅಗತ್ಯ
ಕನ್ಯಾ ರಾಶಿ ಅವರಿಗೆ ಯುಗಾದಿ ಬಳಿಕ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾಗಲಿದೆ. ಚರ್ಮ ರೋಗ ಸಮಸ್ಯೆ, ದುಸ್ವಪ್ನ ಕಾಡುವಿಕೆಯ ಸಮಸ್ಯೆ ಕೂಡ ಎದುರಾಗಲಿದೆ. ಅನಗತ್ಯ ಪ್ರಯಾಣ, ಖರ್ಚು ವೆಚ್ಚದ ಪ್ರಮಾಣ ಅಧಿಕವಾಗಿ ಇದರಿಂದ ಸಹ ಆರೋಗ್ಯ ಏರು ಪೇರಾಗುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಮುನ್ನೆಚ್ಚರಿಕೆ ಹೊಂದಿರಬೇಕಾಗಿದ್ದು ಅತ್ಯವಶ್ಯಕ. ಕನ್ಯಾ ರಾಶಿಯವರಿಗೆ ಜ್ಞಾಪಕ ಶಕ್ತಿ ಸಮಸ್ಯೆ ಬರಲಿದೆ ಹಾಗಾಗಿ ಉತ್ತರಾಭಿಮುಖವಾಗಿ ಓಂಕಾರ ಧ್ಯಾನ ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ. ಹಾಗಾಗಿ ಸಾಧ್ಯವಾದಷ್ಟು ಏಕಾಗ್ರತೆಯಿಂದ ಇದ್ದರೆ ಯಾವುದೆ ಸಮಸ್ಯೆ ಉದ್ಭವಿಸಲಾರದು. ಮನಸ್ಸಿನ ಮಾನಸಿಕ ಖಿನ್ನತೆ ಸಮಸ್ಯೆಯು ಬಗೆಹರಿಯಲಿದೆ.
ಆರ್ಥಿಕ ಸಮಸ್ಯೆ
ಕನ್ಯಾ ರಾಶಿ ಅವರಿಗೆ ಗುರು ಸ್ಥಾನವು ಮಿಶ್ರ ಫಲ ನೀಡುವ ಕಾರಣ ಆರ್ಥಿಕ ಸ್ಥಾನ ಮಾನಗಳು ಸ್ಥಾನ ಪಲ್ಲಟವಾಗಲಿದೆ. ಅನಗತ್ಯ ಖರ್ಚು ಬರಲಿದ್ದು, ಸಾಲ ಸಮಸ್ಯೆ ಸಹ ಕಾಡಲಿದೆ. ಆದರೆ ದಸರಾ ಹಬ್ಬದ ಬಳಿಕ ಒಂದೊಂದೆ ಸಮಸ್ಯೆ ಪರಿಹಾರ ಕಂಡು ಋಣ ಮುಕ್ತವಾಗಲಿದೆ. ಹಾಗಾಗಿ ಎಲ್ಲ ಸಂದರ್ಭದಲ್ಲಿ ನಾವು ಮಾಡಿದ್ದು ಸರಿ ಎಂಬ ಧೋರಣೆಯಿಂದ ಹೊರಬಂದು ಆದಾಯ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಬೇಕು.
ಯಾವಾಗ ಶುಭ ಫಲ
ಕನ್ಯಾ ರಾಶಿಯವರಿಗೆ ದಸರಾ ಹಬ್ಬದ ಬಳಿಕ ಮಳೆಗಾಲದಲ್ಲಿ ಶುಭ ಫಲ ಗೋಚರವಾಗಲಿದೆ. ಮುಂದಿನ ಯುಗಾದಿ ತನಕವು ಆರು ತಿಂಗಳು ಸುಖ ಇದ್ದರೆ ಇನ್ನು ಮುಂದಿನ ಆರು ತಿಂಗಳು ಸಂದಿಗ್ಧ ಪರಿಸ್ಥಿತಿ ಇರಲಿದೆ. ಮೊದಲ ಆರು ತಿಂಗಳು ಕನ್ಯಾ ರಾಶಿ ಅವರಿಗೆ ಕಷ್ಟ ಇದ್ದರು ಮುಂದಿನ ಆರು ತಿಂಗಳಿಗೆ ಸುಖ ಅರಸಿಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟ ಇದ್ದರು ಸ್ವಲ್ಪ ಸಮಯಕ್ಕೆಲ್ಲ ಲಾಂಭಾಂಶ ಸಿಗಲಿದೆ.
ಇದನ್ನು ಓದಿ: Ugadi Horoscope: ಚಂದ್ರ ಗ್ರಹಣದ ಬಳಿಕ ಕರ್ಕಾಟಕ ರಾಶಿಗೆ ಅದೃಷ್ಟ...ಮಂಗಳ ಕಾರ್ಯಗಳಿಗೂ ಅನುಗ್ರಹ
ಪರಿಹಾರ ಏನು?
ಕನ್ಯಾ ರಾಶಿ ಅವರು ಗುರು ಬಲ ಕಡಿಮೆ ಇದ್ದ ಸಂದರ್ಭದಲ್ಲಿ ಮನೆಯ ಸಮೀಪ ಇದ್ದ ಲಕ್ಷ್ಮೀನಾರಾಯಣ ದೇಗುಲಕ್ಕೆ ಭೇಟಿ ನೀಡಬೇಕು. ತಿಂಗಳಿಗೆ ಒಮ್ಮೆಯಾದರು ಲಕ್ಷ್ಮೀ ಹೃದಯ, ನಾರಾಯಣ ಹೃದಯ ಪಾರಾಯಣ ಮಾಡಬೇಕು. ಶುಕ್ರವಾರದಂದು ಲಕ್ಷ್ಮೀ ನಾರಾಯಣ ವಿಶೇಷ ಪೂಜೆ ,16 ದೀಪ ಬೆಳಗಿಸಬೇಕು. ಹೀಗೆ ಮಾಡಿದರೆ ಆರೋಗ್ಯ ,ಶಾಂತಿ, ಸುಖ, ಸಮೃದ್ದಿಗಳು ಪ್ರಾಪ್ತವಾಗಲಿದೆ. ಓಂಕಾರ ಧ್ಯಾನ, ವಿಷ್ಣು ಸಹಸ್ರನಾಮ ಸ್ತುತಿ ಕೇಳುದರಿಂದ ಮನಸ್ಸು ಹಿಡಿತದಲ್ಲಿದ್ದು ಧನಾತ್ಮಕ ಚಿಂತನೆ ನಿಮ್ಮಲ್ಲಿ ಮೂಡಲಿದೆ. ದಸರಾ ಹಬ್ಬ ಸಂದರ್ಭದಲ್ಲಿ ದೇವಿಯ ಸೋತ್ರವನ್ನು 9 ದಿನವು ಆಲಿಸಿಕೊಳ್ಳಿ.