ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugadi Horoscope: ಬೇವು-ಬೆಲ್ಲದ ಹಬ್ಬ ಮೇಷ ರಾಶಿಗೆ ಯಾವ ಫಲ ನೀಡಲಿದೆ? ಶುಭವೋ? ಅಶುಭವೋ?

ಯುಗಾದಿ 2025 ಪಂಚಾಂಗದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಆರಂಭವಾಗುತ್ತಿದ್ದಂತೆ ಆಯಾ ರಾಶಿಗಳ ರಾಶಿಫಲ ಹೇಗಿರಲಿದೆ? ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗಲಿದೆ ಎನ್ನುವ ಮಾಹಿತಿಯನ್ನು ಈ 2025ರ ಯುಗಾದಿ ವರ್ಷ ಭವಿಷ್ಯದಲ್ಲಿ ವಿವರಿಸಲಾದೆ. ಯುಗಾದಿಯ ಬಳಿಕ ಮೇಷ ರಾಶಿ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಲಿದೆ? ಆರೋಗ್ಯ, ಉದ್ಯೋಗ, ಕುಟುಂಬ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಎಂದು ಈ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ವೇಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ಮೇಷ ರಾಶಿಗೆ ಈ ಬಾರಿ ಯುಗಾದಿ ಯಾವ ಫಲ ನೀಡುತ್ತೆ?

Profile Pushpa Kumari Mar 28, 2025 6:37 PM

ಬೆಂಗಳೂರು: ಭಾರತೀಯ ಪರಂಪರೆಯಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದೇ ಆಚರಿಸಲಾಗುತ್ತದೆ. ಮಾರ್ಚ್ 30ರಂದು ವಿಶ್ವಾವಸು ನಾಮ ಸಂವತ್ಸರ ಆರಂಭ ಆಗಲಿದ್ದು ಯುಗಾದಿ ಬಳಿಕ ಯಾರ ಬದುಕು ಹೇಗಾಗಬಹುದು? ಏನೆಲ್ಲ ಒಳಿತು- ಕೆಡುಕಾಗಬಹುದು ಎಂಬಿತ್ಯಾದಿ ಕುತೂಹಲ ಮೂಡುವುದು ಸಹಜ. ಈ ನಿಟ್ಟಿನಲ್ಲಿ ಯುಗಾದಿಯ ಬಳಿಕ ಮೇಷ ರಾಶಿಗೆ  ಏನೆಲ್ಲಾ ಬದಲಾವಣೆಯನ್ನು ಈ ವರ್ಷ ಮಾಡಲಿದೆ. ಮೇಷ ರಾಶಿ ಮೇಲೆ ಗ್ರಹಗಳ ಪ್ರಭಾವ ಹೇಗಿರಲಿದೆ? (Ugadi Horoscope) ಆರೋಗ್ಯ, ಉದ್ಯೋಗ, ಕುಟುಂಬ, ವ್ಯಾಪಾರದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಎಂದು ಖ್ಯಾತ ಜ್ಯೋತಿಷಿ ಗಳಾದ ವೇಬ್ರ|| ಶ್ರೀ ವಿಜಯಾನಂದ ಜೋಯ್ಸ್ ವಿಸ್ತೃತವಾಗಿ ತಿಳಿಸಿದ್ದಾರೆ.

ಮೇಷ ರಾಶಿಯ ವರ್ಷ ಭವಿಷ್ಯ ಹೇಗಿದೆ?

ಮೇಷ ರಾಶಿಯ ಅಧಿಪತಿ ಅಂಗಾರಕನಾಗಿದ್ದು ಯುಗಾದಿ ಹಬ್ಬದಂದು ಅಂಗಾರಕ ನಾಲ್ಕನೇ ಮನೆಯಲ್ಲಿದ್ದು ಗುರು ಎರಡನೇ ಮನೆಯಲ್ಲಿ ಪ್ರಭಾವ ಬೀರಲಿದ್ದಾನೆ. ಹಾಗಾಗಿ ಮೇ ಜೂನ್ ತನಕ ಮೇಷ ರಾಶಿ ಅವರಿಗೆ ಅಂದು ಕೊಂಡ ಕೆಲಸ ಕಾರ್ಯಗಳು ಕೈಗೂಡಲಿದೆ. ಜೂನ್ ನಂತರದಲ್ಲಿ ಒಂದಿಷ್ಟು ಬದುಕಿನ ಪರೀಕ್ಷೆಗಳು ಸವಾಲಾಗಲಿದೆ. ಅಪವಾದ ಮತ್ತು ಅಪಕೀರ್ತಿಯ ಭಯ ಸಹ ಕಾಡಲಿದೆ. ಹೀಗಾಗಿ ಮುಂದಿನ ಯುಗಾದಿ ಹಬ್ಬದ ತನಕವು ಯಾವುದೇ ಯೋಜನೆಗಳಿದ್ದತೂ ಭಯ ಪಡದೆ ಸವಾಲಾಗಿ ಸ್ವೀಕರಿಸಿದರೆ ಜಯ ಖಂಡಿತ ಸಿಗಲಿದೆ. ಗುರು ಮೂರನೇ ಸ್ಥಾನ ಇದ್ದ ಕಾರಣ 1-16 ವಯಸ್ಸಿನ ಮಕ್ಕಳ ವಿದ್ಯಾಭ್ಯಾಸ ಕ್ಷೇತ್ರದಲ್ಲಿಯೂ ಪ್ರಗತಿ ಕಾಣಲಿದೆ. ಅದೇ ರೀತಿ ದೇವರಲ್ಲಿ ಭಕ್ತಿ ಮತ್ತು ಶ್ರದ್ಧೆಗಳಿದ್ದಾಗ ಅವೇ ನಿಮಗೆ ಸನ್ಮಾರ್ಗವಾಗುವುದು.



ತಾಳ್ಮೆ ಅಗತ್ಯ

ಮೇಷ ರಾಶಿ ಅವರು ಯುಗಾದಿ ಬಳಿಕ ಕೆಲವು ಸನ್ನಿವೇಶಗಳಿಂದ ಕೋಪಕ್ಕೆ ಒಳಗಾಗುವ ಸಾಧ್ಯತೆಗಳು ಇದೆ. ತಾಳ್ಮೆಗೆಟ್ಟು ವರ್ತಿಸುವ ಮುನ್ನ ಯೋಚಿಸಬೇಕು.ಈ ಅವಧಿಯಲ್ಲಿ ನೀವು ಪರಿಣಾಮಕಾರಿಯಾಗಿ ಸಂವಹನ ನಡೆಸಬೇಕು. ಏಕೆಂದರೆ ಪ್ರೀತಿಪಾತ್ರರೊಂದಿಗೆ ಕೆಲವು ತಪ್ಪು ತಿಳುವಳಿಕೆಗಳು ಮತ್ತು ಜಗಳಗಳು ಸಂಭವಿಸುವ ಸಾಧ್ಯತೆ ಇದ್ದು ಗುರು ಹಿರಿಯರಿಗೆ ಗೌರವ ಕೊಟ್ಟು ತಾಳ್ಮೆಯಿಂದ ವರ್ತಿಸಿದ್ದರೆ ಇಷ್ಟಾರ್ಥ ಸಿದ್ಧಿ ಆಗಲಿದೆ.

ವಿದೇಶದಲ್ಲಿ ನೆಲೆಸುವ ಭಾಗ್ಯವಿದೆ

16-35 ವರ್ಷದವರು ಯಾರ್ಯಾರು ವಿದೇಶದಲ್ಲಿ ಶಿಕ್ಷಣ ಉದ್ಯೋಗ ಅರಸುತ್ತಿದ್ದಿರೋ ಅಂತವರಿಗೆ ಈ ಯುಗಾದಿ ದೊಡ್ಡ ಸಂಭ್ರಮ ನೀಡ ಲಿದೆ. ನಿಮ್ಮ ಇಚ್ಚೆಯಂತೆ ವಿದೇಶದಲ್ಲಿ ನೆಲೆಸಬಹುದು. ಅನೇಕ ಸಮಸ್ಯೆ ಗಳನ್ನು ಸಮರ್ಥವಾಗಿ ನಿರ್ಧರಿಸುವ ಜಾಣ್ಮೆ ಮೇಷರಾಶಿ ಅವರಿಗೆ ಒಲಿದು ಬರ ಲಿದೆ. ಉದ್ಯೋಗ ಹಾಗೂ ಲಾಭದ ಹುದ್ದೆಯಲ್ಲಿ ಬುದ್ಧಿವಂತಿಕೆಯಿಂದ ವರ್ತಿ ಸುವುದು ನಿಮ್ಮ ಆರ್ಥಿಕ ಜೀವನವನ್ನು ಸುಧಾರಿಸುತ್ತದೆ. ಇದಕ್ಕೆ ಗ್ರಹ ಗತಿಗಳ ಸ್ಥಾನ ಸಹಕಾರಿಯಾಗಿರುವುದರಿಂದ ಸಕಾಲದಲ್ಲಿ ಹೊಸ ವೃತ್ತಿಯು‌ ನಿಮ್ಮ ಬದುಕನ್ನು ಬದಲಾಯಿಸಬಹುದು.

ಆರೋಗ್ಯ ಹೇಗಿರಲಿದೆ?

35-60ರ ವಯೋಮಾನದವರಿಗೆ ತ್ರಿಕರಣ ಸಮಸ್ಯೆ ಬರಲಿದೆ. ಶ್ರಾವಣ ಮಾಸದ ನಂತರ ವಾತಾ, ಪಿತ್ತ, ಕಫ ಸಮಸ್ಯೆ ಹೆಚ್ಚು ಕಾಡಲಿದೆ. ಈ ಬಗ್ಗೆ ಮೊದಲೇ ಜಾಗೃತಿ ಮಾಡಿದರೆ ಸಮಸ್ಯೆ ಪ್ರಾಥಮಿಕ ಹಂತದಲ್ಲಿ ಪರಿಹಾರ ಕಾಣಲಿದೆ. ಮೇಷ ರಾಶಿಯವರು ಧೂಳಿನ ವಾತಾವರಣ, ಸಿಹಿ ಸೇವನೆ ಮತ್ತು ಇತರ ಹೊರಗಿನ ಆಹಾರ ಸೇವಿಸುವಾಗ ಎಚ್ಚರವಹಿಸಬೇಕು. 2026 ಜನವರಿಯಿಂದ ಮಾರ್ಚ್ ತನಕ ಉತ್ತಮ ಆರೋಗ್ಯ ಫಲ ಸಿಗಲಿದೆ.

ಇದನ್ನು ಓದಿ: Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ

ಆರ್ಥಿಕ ಸ್ಥಿತಿ

ಹೊಸದಾಗಿ ಮನೆ ಕಟ್ಟಬೇಕು, ಸ್ವ ಉದ್ಯೋಗ ಮಾಡಬೇಕು ಎಂದು ಇದ್ದವರಿಗೆ ಈ ವರ್ಷದ ಜೂನ್ ಬಳಿಕ ಸಾಲದ ಲೋನ್ ಹಣ ಮಂಜೂರಾಗಲಿದೆ. ಇನ್ನು ಸಾಮಾನ್ಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದ್ದು ಖರ್ಚಿನ ಪ್ರಮಾಣ ಕೂಡ ಅಧಿಕ ಇರಲಿದೆ. ಅನಗತ್ಯ ಖರ್ಚಿನ ಪ್ರಮಾಣ ಸಹ ಈ ವರ್ಷದಲ್ಲಿ ಹೆಚ್ಚಾಗಲಿದೆ.

ಪರಿಹಾರ ಏನು?

ಮೇಷ ರಾಶಿ ಅವರು ತ್ರಿರಂಗ ದರ್ಶನ ಮಾಡುವುದರಿಂದ ಉತ್ತಮ ಫಲ ಗೋಚರವಾಗಲಿದೆ. ಎಪ್ರಿಲ್ 30 ರಂದು ಬರುವ ಅಕ್ಷಯ ತೃತೀಯ ದಿನ ಹೆಸರು ಕಾಳು ದಾನ ಮಾಡಬೇಕು. ಮನೆ ಹತ್ತಿರದ ದೇಗುಲದ ಅರ್ಚಕರಿಗೆ ಇಲ್ಲವೆ ಮೊಳಕೆ ಬರಿಸಿದ ಹೆಸರು ಕಾಳನ್ನು ಹಸುಗಳಿಗೆ ತಿನ್ನಿಸುವುದರಿಂದ ಗ್ರಹಚಾರ ನಿರ್ಮೂಲನೆ ಆಗಲಿದೆ. ಇದರಿಂದ ಕೋಟಿ ಪುಣ್ಯ ಪ್ರಾಪ್ತಿಯು ಆಗಲಿದೆ.