ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Varsha Bhavisya: 2026: ಕುಂಭ ರಾಶಿಯುವರಿಗೆ ಶನಿ ಕಾಟ! ಈ ಯಂತ್ರ ಧರಿಸಿದರೆ ಎಲ್ಲ ಸಮಸ್ಯೆಗಳೂ ಪರಿಹಾರ

2026ರಲ್ಲಿ ಗ್ರಹಗಳ ಮಹತ್ವದ ಸಂಚಾರದಿಂದ ಕುಂಭ ರಾಶಿಯವರ ಜೀವನದಲ್ಲಿ ಶನಿ ಪ್ರಭಾವ ಹೆಚ್ಚಾಗಲಿದೆ. ಶನಿಯಿಂದ ಕೆಲ ಸವಾಲುಗಳು ಎದುರಾದರೂ, ಶಿಸ್ತು, ಸಹನೆ ಮತ್ತು ಪರಿಶ್ರಮದಿಂದ ಅವನ್ನು ಜಯಿಸಬಹುದು. ಶನಿ ಕಾಟ ನಿವಾರಣೆಗೆ ದಾನ, ಶನಿ ಆರಾಧನೆ, ನಿಯಮಿತ ಪ್ರಾರ್ಥನೆ ಹಾಗೂ ಸತ್ಪಥದಲ್ಲಿ ನಡೆಯುವಂತೆ ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ

ಈ ವರ್ಷ ಕುಂಭ ರಾಶಿಯವರಿಗೆ ಶನಿ ಕಾಟ !

ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ -

Profile
Sushmitha Jain Jan 21, 2026 8:37 AM

ಬೆಂಗಳೂರು: 2026ರಲ್ಲಿ ಶನಿ, ಗುರು, ರಾಹು-ಕೇತು ಸೇರಿದಂತೆ ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಲಿವೆ. ಗ್ರಹಗಳ ಈ ಸಂಚಾರವು ಪ್ರತಿ ರಾಶಿಚಕ್ರದ ಜನರ ಮೇಲೆ ವಿಶೇಷವಾಗಿ ಪರಿಣಾಮ ಬೀರುತ್ತದೆ. ಈ ಹೊಸ ವರ್ಷದಲ್ಲಿ ದ್ವಾದಶ ರಾಶಿಗಳಲ್ಲಿ 11ನೇ ಸ್ಥಾನದಲ್ಲಿರುವ ಕುಂಭ ರಾಶಿ ಜನರಿಗೆ ಈ ಹೊಸ ವರ್ಷದಲ್ಲಿ ಶನಿ ಕಾಟವಿದೆಯಾ? ಸಮಸ್ಯೆ ನಿವಾರಣೆಗೆ ಉಪಾಯಗಳೇನು ಎಂಬುವುದನ್ನು ಇಲ್ಲಿ ತಿಳಿಯೋಣ.

ಭಾರತೀಯ ಜೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ಈ ಬಗ್ಗೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದು, ಅವರ ಪ್ರಕಾರ, ಕುಂಭ ರಾಶಿಯವರಿಗೆ ಈ ವರ್ಷವು ಆತ್ಮಾವಲೋಕನದ ಸಮಯವಾಗಿದ್ದು, ವರ್ಷದ ಆರಂಭದಿಂದಲೇ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಶನಿಯು ಜನವರಿ 1ರಿಂದ ವರ್ಷವಿಡೀ ಎರಡನೇ ಮನೆಯಲ್ಲಿರುತ್ತಾನೆ, ಆದ್ದರಿಂದ ನೀವು ಆರ್ಥಿಕ ವಿಷಯಗಳಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ ಅಲ್ಲದೇ ಕುಟುಂಬ ಜೀವನದಲ್ಲಿ ಕೆಲವು ಗೊಂದಲಗಳು ಮತ್ತು ತೊಂದರೆಗಳು ಸಹ ಬರಲಿವೆ.

ವಾಮಾಚಾರದ ಆತಂಕ

ಈ ರಾಶಿಯವರ ಜಾತಕದಲ್ಲಿ ಶನಿಕಾಟದ ಭಾಗವಾದಂತಹ ಚಂದ್ರ ಛಿದ್ರ ಸ್ಥಾನದ ಯಜಮಾನನಾಗಿದ್ದಾನೆ. ಹೀಗಾಗಿ ಈ ರಾಶಿಯವರು, ತಮ್ಮ ಮೇಲೆ ಯಾರೋ ವಾಮಾಚಾರ ಮಾಡಿಸಿದ್ದಾರೆ ಎಂಬ ಕಲ್ಪನೆಯಿಂದಲೇ ಆತಂಕಗೊಂಡು ಹಿಂಸೆ ಅನುಭವಿಸುವ ಸಾಧ್ಯತೆಗಳಿವೆ.

ವಿಡಿಯೋ ನೋಡಿ

ರಾಹು ದೋಷ

ಕುಂಭ ರಾಶಿಯಲ್ಲಿಯೇ ರಾಹು ಇರುವುದರಿಂದ ಈ ರಾಶಿಯುವರಿಗೆ ರಾಹು ದೋಷ ಇದೆ. ಹೀಗಾಗಿ ಅರಿಯದ, ಯಾರಿಗೂ ಕಾಣಿಸಿದ ದುಷ್ ಶಕ್ತಿಯೊಂದು ಇವರಿಗೆ ಕಾಟ ಕೊಡುವ ಸಾಧ್ಯತೆಗಳಿವೆ.

ಗುರುಬಲ ಇದ್ದರೂ ಶನಿ ಕಾಟ ತಪ್ಪಲ್ಲ
ಈ ರಾಶಿಯವರಿಗೆ ಜೂನ್ 2ರವರೆಗೆ ಗುರುಬಲ ಇದ್ದರೂ, ಎಡಬಿಡದೇ ನಡೆಯುತ್ತಿರುವ ಶನಿ ಕಾಟವನ್ನು ಧೈರ್ಯದಿಂದ ಎದರಿಸಲು ಸಾಧ್ಯವಾಗುವುದಿಲ್ಲ. ಕೆಲವ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟರೆ ಮಾತ್ರ ಕೆಲ ಸಮಸ್ಯಗಳಿಂದ ಪಾರಾಗಬಹುದಾಗಿದೆ.

Varsha Bhavisya: 2026: ಧನು ರಾಶಿಯವರ ಪ್ರೇಮ-ದಾಂಪತ್ಯ ಜೀವನದಲ್ಲಿ ಬಿರುಗಾಳಿ!

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅವಶ್ಯತೆ ಇದೆ. ಅನಾರೋಗ್ಯಕ್ಕೆ ಒಳಗಾದಾಗ, ಏನೋ ಒಂದು ಚಿಕ್ಕ ವ್ಯಾಧಿ ಎಂದು ಕಡೆಗಣಿಸದೇ ವಿಶೇಷ ಕಾಳಜಿವಹಿಸಬೇಕು. ವಿಶೇಷವಾಗಿ ಈ ಕುಂಭ ರಾಶಿಯವರು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ವ್ಯಾಧಿಗಳಿದ್ದಲ್ಲಿ, ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕತ್ಸೆಯನ್ನು ಪಡೆಯಬೇಕು.

ಹಣಕಾಸಿನಲ್ಲಿ ಅಭಿವೃದ್ಧಿಯಾದರೂ ನೆಮ್ಮದಿ ಇಲ್ಲ

ಈ ಕುಂಭ ರಾಶಿಯುವರಿಗೆ ಶನಿ ಕಾಟದ ದಿನಗಳಿದ್ದರೂ ಸಹ ಹಣಕಾಸಿನ ವಿಚಾರದಲ್ಲಿ ಶನೇಶ್ಚರನ ಮೂಲಕ ಅನಿರೀಕ್ಷಿತ ರೀತಿಯಲ್ಲಿ ಸಮೃದ್ಧಿ ಒದಗಿಬರಲಿದೆ. ಆದರೂ ಬಂದಂತ ಹಣದಿಂದ ನೆಮ್ಮದಿ ಇರುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಈ ರಾಶಿಯುವರು ಪೂರ್ವಾಪರ ಯೋಚನೆ ಮಾಡದೇ ಎಲ್ಲಿಯೂ ಹಣ ತೊಡಗಿಸಬಾರದು, ತೊಡಗಿಸಿದ್ದಲ್ಲೇ ಅನೇಕ ರೀತಿಯ ಪರಾಭವಗಳನ್ನು ಎದುರಿಸುವ ಸಾಧ್ಯತೆಗಳಿವೆ.

ಈ ಕುಂಭ ರಾಶಿಯವರು ಧನ್ವಂತರಿ ಶಕ್ತಿ ಸಂಯುಕ್ತವಾದಂತಹ ಭೈರವ ಯಂತ್ರವನ್ನು ಧರಿಸುವುದರಿಂದ ಶನಿ ಕಾಟದ ಪಾರಾಗಲು ಶಕ್ತಿ ದೊರೆಯಲಿದೆ ಮತ್ತು ಬರುಬಹುದಾದಂತ ವ್ಯಾಧಿಗಳಿಂದ ಹೋರಾಡಲು ಶಕ್ತಿ ದೊರಕಲಿದೆ.