ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ...?

Vastu Tips: ದೇವರ ಕೋಣೆಯನ್ನು ಎಷ್ಟು ಉತ್ತಮ ರೀತಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ದೇವರ ಕೋಣೆ ನಿರ್ಮಿಸುವಾಗ ಶಾಸ್ತ್ರದಲ್ಲಿನ ನಿಯಮಗಳನ್ನು ಅನುಸರಿಸಬೇಕು. ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ.? ದೇವರ ಕೋಣೆಯನ್ನು ಹೀಗೆ ನಿರ್ಮಿಸಿ..

ಸಾಂದರ್ಭಿಕ ಚಿತ್ರ

ಮನೆಯಲ್ಲಿ ಪ್ರತಿಯೊಂದು ಕೋಣೆ ಮತ್ತು ವಸ್ತುಗಳು ವಾಸ್ತು ಪ್ರಕಾರ(Vastu Shastra) ಸರಿಯಾದ ಸ್ಥಳ ಹಾಗೂ ದಿಕ್ಕಿನಲ್ಲಿದ್ದರೆ(Direction) ಮಾತ್ರ ಮನೆಯಲ್ಲಿ ಸಂತೋಷ, ಅದೃಷ್ಟ, ಸಂಪತ್ತು, ಅಭಿವೃದ್ಧಿ ಆಗಲಿದ್ದು,
ಕೌಟುಂಬಿಕವಾಗಿಯೂ ಸುಖ ಶಾಂತಿ ನೆಲೆಸುತ್ತದೆ.ಇದಕ್ಕೆ ದೇವರ ಮನೆಯೂ ಹೊರತಾಗಿಲ್ಲ. ಆದ್ರೆ ಹೆಚ್ಚಿನ ಜನರು ದೇವರ ಮನೆ ನಿರ್ಮಿಸುವಾಗ ವಾಸ್ತುವನ್ನು ಪಾಲಿಸುವುದನೇ ಮರೆತು ಬಿಡುತ್ತಾರೆ, ಆದ್ರೆ ಇದರಿಂದ ವಾಸ್ತು ದೋಷ ಸಮಸ್ಯೆ ಎದುರಾಗಲಿದ್ದು, ಮನೆಯಲ್ಲಿ ಕಲಹ, ಅಶಾಂತಿ ಉಂಟಾಗುವುದರ ಜೊತೆಗೆ ನಕಾರಾತ್ಮಕ ಪ್ರಭಾವವೂ ಬೀರುತ್ತದೆ.

ಹಾಗಾದ್ರೆ ಮನಃಶಾಂತಿಗೆ ಅತ್ಯಂತ ಸಹಕಾರಿಯಾಗುವ ದೇವರಕೋಣೆಯನ್ನು ಹೇಗೆ (Vastu Tips) ನಿರ್ಮಿಸಬೇಕು, ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎನ್ನುವ ಬಗ್ಗೆ ಇಲ್ಲಿ ಕೆಲವು ಮಾಹಿತಿಯನ್ನು ನೀಡಲಾಗಿದೆ.


ಈ ದಿಕ್ಕು ದೇವರ ಕೋಣೆಯ ನಿರ್ಮಾಣಕ್ಕೆ ಸೂಕ್ತ


ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಕೋಣೆ
ಉತ್ತರ ದಿಕ್ಕಿಗೆ ಇದ್ದರೆ ಶುಭ ಎಂದು ಪರಿಗಣಿಸಲಾಗಿದ್ದು,
ಪೂಜೆ ಕೈಂಕರ್ಯ ಅಥವಾ ದೇವರ ಮನೆಯಲ್ಲಿ ಕುಳಿತು ಜಪ, ಸ್ತೋತ್ರ ಪಠಣ ಮಾಡುವಾಗಲೂ ಪೂರ್ವ ದಿಕ್ಕಿಗೆ ಮುಖ ಮಾಡಿ ಧ್ಯಾನಿಸುವಂತೆ ದೇವರ ಕೋಣೆಯ ನಿರ್ಮಾಣ ಮಾಡಿರಬೇಕು.

ಅಲ್ಲದೇ ಪೂಜಾ ಕೋಣೆಯ ಸ್ಥಳವು ಮನೆಯಲ್ಲಿ ಅತ್ಯಂತ ಮಂಗಳಕರವಾದ ಸ್ಥಳವಾಗಿದ್ದು, ಇದು ಸಕಾರತ್ಮಕತೆ, ದೈವಿಕತೆಯ ಸೆಳವನ್ನು ವ್ಯಾಖ್ಯಾನಿಸುತ್ತದೆ. ಉತ್ತರ ದಿಕ್ಕಿನ ಹೊರತಾಗಿ ದೇವರ ಮನೆ ನಿರ್ಮಾಣಕ್ಕೆ ಈಶಾನ್ಯ, ಪೂರ್ವ ಮತ್ತು ದಿಕ್ಕು ಸೂಕ್ತವಾಗಿದೆ.

ಪ್ರತ್ಯೇಕ ಕೋಣೆ ಇರಲಿ

ವಾಸ್ತು ಶಾಸ್ತ್ರ ಪ್ರಕಾರ ಮನೆಯು ದೊಡ್ಡದಿದ್ದಾಗ ದೇವರ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ಪ್ರತ್ಯೇಕವಾಗಿ ನಿರ್ಮಿಸುವುದು ಉತ್ತಮವಾಗಿದ್ದು, ದೇವರ ಕೋಣೆಯನ್ನು ಮೇಲೆ ಅಂದರೆ ಎತ್ತರದ ಸ್ಥಳದಲ್ಲಿ ಇರಿಸುವುದು ಶುಭ ಅಲ್ಲ. ಹೀಗೆ ಮಾಡುವುದರಿಂದ ದೇವರ ಪಾದ ಮತ್ತು ನಮ್ಮ ಹೃದಯ ಒಂದೇ ಸ್ಥಾನದಲ್ಲಿದ್ದಂತಾಗುತ್ತದೆ ಎಂದು ಹೇಳಲಾಗುತ್ತದೆ. ಸರಿಯಾದ ಜಾಗವನ್ನು ಮತ್ತು ದಿಕ್ಕನ್ನು ನೋಡಿ, ಅಲ್ಲಿ ದೇವರನ್ನು ಕೂರಿಸುವುದು ಉತ್ತಮವೆಂದು ಹೇಳಲಾಗುತ್ತದೆ.
ಬಣ್ಣದ ಆಯ್ಕೆ ಹೀಗಿರಲಿ

ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಗೆ ಗಾಢವಾದ ಬಣ್ಣಗಳನ್ನು ಬಳಸುವುದು ಸೂಕ್ತವಲ್ಲ. ದೇವರ ಪೂಜಾ ಸ್ಥಳಕ್ಕೆ ಆದಷ್ಟು ತಿಳಿ ಅಥವಾ ಲೈಟ್ ಬಣ್ಣಗಳನ್ನು ಅಂದರೆ ಹಳದಿ, ಹಸಿರು ಅಥವಾ ತಿಳಿ ಗುಲಾಬಿ ಬಣ್ಣಗಳನ್ನು ಪೂಜಾ ಗೃಹಕ್ಕೆ ಬಳಿಯುವುದು ಒಳ್ಳೆಯದೆಂದು ಹೇಳಲಾಗುತ್ತದೆ. ಹಾಗೇ ಎಂದಿಗೂ ದೇವದಕೋಣೆಗೆ ಎರಡು ಅಥವಾ ಮೂರು ರೀತಿಯ ಬಣ್ಣಗಳನ್ನು ದೇವರ ಬಳಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದು, ದೇವರ ಮನೆಗೆ ಸರಿ ಹೊಂದುವ ಯಾವುದಾದರೂ ಒಂದು ತರಹದ ಬಣ್ಣವನ್ನು ಪೂರ್ತಿ ಕೋಣೆಗೆ ಬಳಿಯುವುದು ಉತ್ತಮ.
ಈ ಸುದ್ದಿಯನ್ನು ಓದಿ: Astro Tips: ಶುಕ್ರವಾರ ತಪ್ಪದೇ ಈ ಕೆಲಸಗಳನ್ನು ಮಾಡಿ, ಲಕ್ಷ್ಮಿ ಒಲಿಯುತ್ತಾಳೆ..!

ಮರದ ಪೀಠೋಪಕರಣ ಉತ್ತಮ

ದೇವರ ಕೋಣೆಯನ್ನು ಮರದ ಪೀಠೋಪಕರಣಗಳಿಂದ ನಿರ್ಮಿಸುವುದು ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ವಿಶಾಲವಾದ ಜಾಗ ಮತ್ತು ಅನುಕೂಲವಿದ್ದಲ್ಲಿ ಮಾರ್ಬಲ್‌ನಿಂದ ದೇವರ ಕೋಣೆಯನ್ನು ನಿರ್ಮಿಸುವುದು ಸಹ ಒಳ್ಳೆಯದೆಂದು ಹೇಳಲಾಗುತ್ತದೆ. ಮಾರ್ಬಲ್‌ನಿಂದ ನಿರ್ಮಿಸಿದ ಪೂಜಾ ಗೃಹವು ಸಹ ಪವಿತ್ರವೆಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಹೀಗೆ ನೀವು ಈ ಎಲ್ಲ ಕ್ರಮಗಳನ್ನು ಅನುಸರಿಸಿದಲ್ಲಿ ನಿಮಗೆ ದೇವರ ಕೃಪೆ ಪ್ರಾಪ್ತಿಯಾಗುವುದಲ್ಲದೆ, ಅದೃಷ್ಟವೂ ಒಲಿಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.