ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ವಾಸ್ತು ಪ್ರಕಾರ ಮನೆ ಮುಂದೆ ಗುಲಾಬಿ ಗಿಡಗಳನ್ನು ನೆಡಬಹುದಾ...?

Vastu Tips: ಮನೆಯಲ್ಲಿ ಗುಲಾಬಿ ಹೂವಿನ ಗಿಡ ನೆಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಗುಲಾಬಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮತ್ತು ಪೂಜಿಸಿದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಾಲ ತೀರಿಸಲು ಸಹ ಇದು ಸಹಾಯಕವಾಗುತ್ತದೆ

ಮನೆಯ ಈ ದಿಕ್ಕಿಗೆ ಗುಲಾಬಿ ಗಿಡ ನೆಡಿ

Profile Sushmitha Jain Apr 5, 2025 8:09 AM

ವಾಸ್ತು ಶಾಸ್ತ್ರ(Vastu Shastra)ದ ಪ್ರಕಾರ ಕೆಲವೊಂದು ಗಿಡ(Plants)ಗಳನ್ನು ಮನೆಯ ಮುಖ್ಯದ್ವಾರದಲ್ಲಿ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ(Postive Energy) ಯ ಓಡಾಟ ಹೆಚ್ಚಾಗುತ್ತದೆ. ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಇಂತಹ ಗಿಡಗಳು ಕೇವಲ ಆಕರ್ಷಕವಾಗಿ ಕಾಣೋದು ಮಾತ್ರವಲ್ಲದೆ ಮನೆಗೆ ಉತ್ತಮ ಲಾಭವನ್ನು ಕೂಡ ತಂದು ಕೊಡುತ್ತವೆ. ಮರಗಿಡಗಳಿಗೆ ನಮ್ಮ ಜೀವನದಲ್ಲಿ ಹಾಗೂ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ಇದಕ್ಕೆ ಗುಲಾಬಿ ಗಿಡ(Rose Plant)ವೂ ಹೊರತಾಗಿಲ್ಲ.

ಗುಲಾಬಿ ಗಿಡವನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ಹೆಚ್ಚುತ್ತದೆ. ಹಾಗಾದರೆ ಮನೆಯಲ್ಲಿ ಸಂಪತ್ತು ಹೆಚ್ಚಿಸಲು ಮತ್ತು ಮನೆಯಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು ಗುಲಾಬಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ನೋಡೋಣ.

ವಾಸ್ತು ಶಾಸ್ತ್ರದಲ್ಲಿ ಗುಲಾಬಿ ಹೂವನ್ನು ಜ್ಞಾನ ಹಾಗೂ ಸಮೃದ್ಧಿಯ ಪ್ರತೀಕ ಎಂದು
ನಂಬಲಾಗಿದ್ದು, ಗುಲಾಬಿ ಹೂವನು ಮನೆಯ ಮುಖ್ಯ ದ್ವಾರದಲ್ಲಿ ಇಡುವುದರಿಂದಾಗಿ ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲಿ ಆರ್ಥಿಕವಾಗಿ ಸಬಲರಾಗುವಂತಹ ಎಲ್ಲಾ ಅವಕಾಶಗಳನ್ನು ಕೂಡ ನೀವು ಪಡೆದುಕೊಳ್ಳಲಿದ್ದೀರಿ. ಹೀಗಾಗಿ ಮನೆಯಲ್ಲಿ ಹಣದ ಹರಿವು ಕೂಡ ಹೆಚ್ಚಾಗಲಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಸಹ ನೀವು ಪಡೆದುಕೊಳ್ಳಬಹುದಾಗಿದೆ.

ನೈಋತ್ಯ ದಿಕ್ಕಿನಲ್ಲಿ ನೆಡಿ: ಗುಲಾಬಿ ಹೂವಿನ ಗಿಡಗಳನ್ನು ಮನೆಯ ನೈಋತ್ಯ ಮೂಲೆಯಲ್ಲಿ ಬೆಳೆಸಬಹುದಾಗಿದ್ದು, ಕೆಂಪು-ಹೂಬಿಡುವ ಸಸ್ಯಗಳನ್ನು ಜೀವಂತವಾಗಿಡಲು ದಕ್ಷಿಣವು ಕೂಡ ಉತ್ತಮ ದಿಕ್ಕಾಗಿದೆ. ಇದು ಸಮಾಜದಲ್ಲಿ ಮನೆ ಮಾಲೀಕನ ಗೌರವ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.

ಈ ಸುದ್ದಿಯನ್ನು ಓದಿ; Vastu Tips: ಶಾಸ್ತ್ರದ ಪ್ರಕಾರ, ಯಾವ ರೀತಿ ದೇವರ ಕೋಣೆ ನಿರ್ಮಿಸಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ಇರುತ್ತೆ...?

ಇನ್ನೂ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಕುಟುಂಬ ಜೀವನದಲ್ಲಿ ಸಮಸ್ಯೆಗಳಿದ್ದರೆ ಅಂತವರು ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ಕೆಂಪು ಗುಲಾಬಿಗಳನ್ನು ಅರ್ಪಿಸಬೇಕು. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನೂ ಪರಿಹರಿಸುತ್ತದೆ.ನ್ನೂ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಕುಟುಂಬ ಜೀವನದಲ್ಲಿ ಸಮಸ್ಯೆಗಳಿದ್ದರೆ ಅಂತವರು ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ಕೆಂಪು ಗುಲಾಬಿಗಳನ್ನು ಅರ್ಪಿಸಬೇಕು. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನೂ ಪರಿಹರಿಸುತ್ತದೆ.

ಹಾಗೇ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದರೆ, ಗುಲಾಬಿ ಹೂವುಗಳು ತುಂಬಾ ಉಪಯುಕ್ತವಾಗಿವೆ. ವಾಸ್ತು ಶಾಸ್ತ್ರದ ಪ್ರಕಾರ ಸಂಜೆಯ ಆರತಿಯ ಸಮಯದಲ್ಲಿ ಲಕ್ಷ್ಮಿ ದೇವಿಯ ಪಾದಗಳಿಗೆ ಗುಲಾಬಿ ಹೂವುಗಳಿಂದ ಪೂಜಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಉತ್ತಮ ಪರಿಹಾರ ಸಿಗುತ್ತದೆ. ಇದಲ್ಲದೆ ಶುಕ್ರವಾರದಂದು ದುರ್ಗೆಗೆ ಐದು ಗುಲಾಬಿ ದಳಗಳನ್ನು ವೀಳ್ಯದೆಲೆಯಲ್ಲಿ ಅರ್ಪಿಸಿ. ಹೀಗೆ ಮಾಡುವುದರಿಂದ ಹಣದ ಸಮಸ್ಯೆಯಿಂದ ಉತ್ತಮ ಪರಿಹಾರ ಸಿಗುತ್ತದೆ.