ಬೆಂಗಳೂರು: ವೃತ್ತಿ (Vastu for office table) ಬದುಕಿನಲ್ಲಿ ಅಡೆತಡೆ ಎದುರಾಗಲು ನಾನಾ ಕಾರಣಗಳಿರುತ್ತವೆ. ಆದರೆ ಇದಕ್ಕೆ ಸುಲಭ ಪರಿಹಾರವೂ ಇದೆ. ಕೆಲಸದಮೇಜಿನ ಮೇಲೆ ಇಡುವ ವಸ್ತುಗಳು, ಬಳಸುವ ಬಣ್ಣಗಳು ಕೆಲವೊಮ್ಮೆ ವೃತ್ತಿ ಬದುಕಿನಲ್ಲಿ ಅಡೆತಡೆಗಳನ್ನು ಉಂಟು ಮಾಡಬಹುದು. ಯಾಕೆಂದರೆ ಇವುಗಳು ನಕಾರಾತ್ಮಕ ಪರಿಸರವನ್ನು ಉಂಟು ಮಾಡಿ ಅದು ನಮ್ಮ ವೃತ್ತಿ ಬದುಕಿಗೆ ಅಡ್ಡಿಯಾಗುವಂತೆ ಮಾಡುತ್ತವೆ. ಕೆಲಸ ಮಾಡುವೆ ಮೇಜಿನ ಮೇಲೆ ಉತ್ತಮ ಪರಿಣಾಮ ಬೀರುವ ಬಣ್ಣಗಳನ್ನು ಆಯ್ದುಕೊಳ್ಳುವುದರಿಂದ ಜೀವನದಲ್ಲಿ ಏಳಿಗೆಯನ್ನು ಹೊಂದಬಹುದು. ಅಂತಹ ಬಣ್ಣಗಳು (Vastu about color) ಯಾವುದು ಎನ್ನುವ ಕುರಿತು ವಾಸ್ತು ಶಾಸ್ತ್ರ ಹೇಳಿರುವ ಸಲಹೆಗಳು ಇಂತಿವೆ.
ಕೆಲಸದ ಮೇಜಿನ ಮೇಲೆ ಕೆಲವೊಂದು ಬಣ್ಣಗಳನ್ನು ಎಂದಿಗೂ ಬಳಸಬಾರದು. ಯಾಕೆಂದರೆ ಇದು ನಮ್ಮ ಶಕ್ತಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ನಕಾರಾತ್ಮಕವಾಗಿಸುತ್ತದೆ. ಕೆಲಸದ ಮೇಜಿನ ಮೇಲಿನ ಬಣ್ಣಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳುವುದು ಬಹುಮುಖ್ಯ.
ನಾವು ಹೆಚ್ಚಾಗಿ ನೋಡುವ ಬಣ್ಣಗಳು ನಮ್ಮ ಶಕ್ತಿ ಮತ್ತು ಕೆಲಸದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಬಣ್ಣಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇದರಿಂದ ಕೆಲಸದ ಮೇಲೆ ಹೆಚ್ಚು ಗಮನಹರಿಸಬಹುದು. ಆದರೆ ಕೆಲವೊಮ್ಮೆ ನಾವು ನಮಗೆ ಅಥವಾ ನಮ್ಮ ಪ್ರೀತಿಪಾತ್ರರ ಇಷ್ಟಕ್ಕೆ ಅನುಗುಣವಾಗಿ ತಪ್ಪಾದ ಬಣ್ಣಗಳನ್ನು ಆಯ್ಕೆ ಮಾಡುತ್ತೇವೆ. ಆದರೆ ಇದು ನಮ್ಮ ಶಕ್ತಿಯನ್ನು ಬದಲಾಯಿಸುತ್ತದೆ. ಮಾತ್ರವಲ್ಲದೆ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ಕೆಲಸದ ಮೇಜಿನ ಮೇಲೆ ಕೆಲವು ಬಣ್ಣಗಳನ್ನು ಇಡುವ ಮೊದಲು ಕೆಲವೊಂದು ಅಂಶಗಳನ್ನು ತಿಳಿದುಕೊಂಡಿರಬೇಕು ಎನ್ನುತ್ತಾರೆ ಪಂಡಿತ್ ಜನ್ಮೇಶ್ ದ್ವಿವೇದಿ.
ಕಪ್ಪು
ಎಂದಿಗೂ ಕಪ್ಪು ಬಣ್ಣದ ವಸ್ತುಗಳನ್ನು ಕೆಲಸದ ಮೇಜಿನ ಮೇಲೆ ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ ಹೆಚ್ಚಿಸುತ್ತದೆ. ಇದರಿಂದ ಅದು ಯಾವಾಗಲೂ ನೀವು ಒಂಟಿತನವನ್ನು ಅನುಭವಿಸುವಂತೆ ಮಾಡುತ್ತದೆ. ಈ ಕಾರಣದಿಂದಾಗಿ ಕೆಲವು ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುತ್ತೀರಿ. ಕಪ್ಪು ಬಣ್ಣದ ಡೈರಿ, ಪೆನ್ ಹೋಲ್ಡರ್, ಲ್ಯಾಪ್‌ಟಾಪ್ ಕೇಸ್ ಅಥವಾ ಡೆಸ್ಕ್ ಮ್ಯಾಟ್ ಅನ್ನು ಇಟ್ಟುಕೊಳ್ಳಬಾರದು. ಮೇಜಿನ ಮೇಲೆ ನೇವಿ ಬ್ಲೂ ಬಣ್ಣವನ್ನು ಆರಿಸಿಕೊಳ್ಳುವುದು ಉತ್ತಮ.
ಕಂದು
ಕಂದು ಬಣ್ಣ ಆಕರ್ಷಕವಾಗಿರುತ್ತದೆ. ಆದರೆ ಅದನ್ನು ಎಂದಿಗೂ ಕೆಲಸದ ಮೇಜಿನ ಮೇಲೆ ಬಳಸಬೇಡಿ. ಏಕೆಂದರೆ ಕಂದು ಬಣ್ಣವು ನಿಮ್ಮನ್ನು ಯಾವಾಗಲೂ ಆಲಸ್ಯಗೊಳಿಸುತ್ತದೆ. ಅಲ್ಲದೆ ದಿನಚರಿಗೆ ಯಾವುದೇ ಹೊಸ ವಿಷಯಗಳನ್ನು ಸೇರಿಸುವುದನ್ನು ತಡೆಯುತ್ತದೆ. ಇದು ಪ್ರೇರಣೆಯ ಕೊರತೆಗೆ ಕಾರಣವಾಗಬಹುದು. ಹಳೆಯ ಫೈಲ್, ಹಳೆಯ ಬಣ್ಣದ ಡ್ರಾಯರ್ ಅಥವಾ ಈ ಬಣ್ಣದ ಡೆಸ್ಕ್ ಆರ್ಗನೈಸರ್‌ಗಳನ್ನು ಎಂದಿಗೂ ಬಳಸಬೇಡಿ. ಇದರ ಬದಲಾಗಿ ಕ್ರೀಮ್ ಬಣ್ಣವನ್ನು ಬಳಸಬಹುದು.
ಇದನ್ನೂ ಓದಿ: Vastu Tips: ಹವನದ ವೇಳೆ ಪಾಲಿಸಲೇಬೇಕು ವಾಸ್ತು ನಿಯಮ
ಕೆಂಪು
ಕೆಂಪು ಬಣ್ಣ ಆಕ್ರಮಣಕಾರಿಯಾಗಿರುತ್ತದೆ. ಕೆಂಪು ಬಣ್ಣವು ಕೋಪವನ್ನು ಹೆಚ್ಚಿಸುತ್ತದೆ. ಇದು ಕೆಲಸ ಮೇಲೆ ಪರಿಣಾಮ ಬಿರುವಂತೆ ಮಾಡುತ್ತದೆ. ಈ ಬಣ್ಣದಿಂದ ಯಾವಾಗಲೂ ಕಿರಿಕಿರಿ, ಕೋಪ ಮತ್ತು ಏಕಾಗ್ರತೆಯ ಕೊರತೆ ಉಂಟಾಗುತ್ತದೆ. ಇದರ ಬದಲಿಗೆ ಗುಲಾಬಿ ಅಥವಾ ಬಿಳಿ ಬಣ್ಣವನ್ನು ಬಳಸಬಹುದು.
ಕೆಲಸದ ಮೇಜಿನ ಮೇಲೆ ಈ ಮೂರು ಬಣ್ಣಗಳನ್ನು ಬಳಸುವುದನ್ನು ತಪ್ಪಿಸಿ. ಇದರಿಂದ ವೃತ್ತಿಜೀವನದಲ್ಲಿ ಉನ್ನತಿಯನ್ನು ಪಡೆಯಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.