Vastu Tips: ಹವನದ ವೇಳೆ ಪಾಲಿಸಲೇಬೇಕು ವಾಸ್ತು ನಿಯಮ
ಸಾಮಾನ್ಯವಾಗಿ ನಾವು ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ ಹವನಗಳನ್ನು(Vastu about havan) ಮಾಡಿಸುತ್ತೇವೆ. ಇದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಗಳು ಅಲ್ಲಿ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಸಾಮಾನ್ಯವಾಗಿ ಹವನಕ್ಕೆ ಪಾಲಿಸಬೇಕಾದ ಕೆಲವು ನಿಯಮಗಳನ್ನು ಬಹುತೇಕ ಎಲ್ಲರೂ ಇದನ್ನು ಹೇಳುವುದಿಲ್ಲ. ಅಗತ್ಯವಿರುವುದನ್ನಷ್ಟೇ ಹೇಳಿ ಮುಗಿಸುತ್ತಾರೆ. ಹವನದ ಕುರಿತು ವಾಸ್ತು ಶಾಸ್ತ್ರ ಹೇಳಿರುವ ನಿಯಮಗಳೇನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.


ಸಾಮಾನ್ಯವಾಗಿ ನಾವು ಮನೆಗಳಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ (Vastu about havan) ಹವನಗಳನ್ನು ಮಾಡಿಸುತ್ತೇವೆ. ಇದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಗಳು ಅಲ್ಲಿ ನೆಲೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹವನ ಮಾಡಿಸುವ ಮುನ್ನ ಮತ್ತು ಅನಂತರ ಪಾಲಿಸಬೇಕಾದ ಕೆಲವು ನಿಯಮಗಳಿವೆ. ವಾಸ್ತು (Vastu for home) ಪ್ರಕಾರ ಪೂಜೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಇಡಬೇಕು ಎನ್ನುವ ನಿಯಮವಿದೆ. ಮನೆಯಲ್ಲಿ ಒಂದು ವೇಳೆ ಹವನ ಮಾಡುವುದಾದರೆ ಅದಕ್ಕೆ ಪಾಲಿಸಬೇಕಾದ ನಿಯಮಗಳೇನು ಎನ್ನುವ ಕುರಿತು ವಾಸ್ತು ಶಾಸ್ತ್ರ (vastu shastra) ಹೇಳುವ ಮಾಹಿತಿಗಳು ಇಲ್ಲಿವೆ.
ಹಿಂದೂ ಧರ್ಮದಲ್ಲಿ ಹವನವನ್ನು ಬಹಳ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಇದು ವಾತಾವರಣವನ್ನು ಶುದ್ದೀಕರಣ ಮಾಡುವುದು ಮಾತ್ರವಲ್ಲದೆ ಪರಿಸರವನ್ನು ಸಕಾರಾತ್ಮಕ ಶಕ್ತಿಯಿಂದ ತುಂಬುತ್ತದೆ. ಹವನದ ಸಮಯದಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬೆಂಕಿಗೆ ಅರ್ಪಿಸಲಾಗುತ್ತದೆ. ಇದರ ಹೊಗೆ ಮತ್ತು ಸುವಾಸನೆಯು ಮನಸ್ಸು ಮತ್ತು ದೇಹ ಎರಡನ್ನೂ ಶಾಂತಗೊಳಿಸುತ್ತದೆ.
ಹವನ ಪೂರ್ಣಗೊಂಡ ಅನಂತರ ಈ ಕುಂಡವನ್ನು ಎಲ್ಲಿಯೂ ಹಾಗೆ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಹವನ ಕುಂಡವನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಹವನದಿಂದ ಉತ್ಪತ್ತಿಯಾಗುವ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಪಂಡಿತ್ ಅರವಿಂದ್ ತ್ರಿಪಾಠಿ. ಹವನ ಕುಂಡವನ್ನು ಬೆಂಕಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ದೇವರು ಮತ್ತು ದೇವತೆಗಳಿಗೆ ವಿವಿಧ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಇದು ಅತ್ಯಂತ ಪವಿತ್ರವಾಗಿದೆ ಮತ್ತು ಹವನದ ಸಮಯದಲ್ಲಿ ದೈವಿಕ ಶಕ್ತಿಯು ಅದರಲ್ಲಿ ಹರಿಯುತ್ತದೆ. ಆದ್ದರಿಂದ, ಹವನದ ಅನಂತರವೂ ಅದರ ಶುದ್ಧತೆಯನ್ನು ಕಾಪಾಡಿಕೊಳ್ಳುವುದು ಅವಶ್ಯಕ.
ಹವನ ಕುಂಡವು ತಾಮ್ರ, ಹಿತ್ತಾಳೆಯಂತಹ ಲೋಹದಿಂದ ಮಾಡಲ್ಪಟ್ಟಿದ್ದರೆ ಮತ್ತು ಅದನ್ನು ಭವಿಷ್ಯದಲ್ಲಿ ಮತ್ತೆ ಬಳಸಲು ಬಯಸಿದರೆ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಶುದ್ಧ ಬಟ್ಟೆಯಿಂದ ಮುಚ್ಚಿ ಪೂಜಾ ಕೋಣೆಯಲ್ಲಿ ಅಥವಾ ಯಾವುದೇ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಅದು ಯಾವುದೇ ಅಶುದ್ಧ ವಸ್ತುವಿನ ಸಂಪರ್ಕಕ್ಕೆ ಬರಬಾರದು ಎಂಬುದನ್ನು ನೆನಪಿರಲಿ.
ಹವನ ಕುಂಡವನ್ನು ಪೂಜಾ ಸ್ಥಳ ಅಥವಾ ಸೂರ್ಯನ ದಿಕ್ಕಿನಲ್ಲಿ ಅಂದರೆ ಪೂರ್ವ ದಿಕ್ಕಿನಲ್ಲಿ ಇಡಬಹುದು. ಇದು ಮನೆಯಲ್ಲಿ ಶುಭವನ್ನು ತರುತ್ತದೆ ಮತ್ತು ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆ ಉಳಿಯುವಂತೆ ಮಾಡುತ್ತದೆ. ಹವನ ಕುಂಡವು ಕೇವಲ ಪಾತ್ರೆಯಲ್ಲ. ಇದು ಅಗ್ನಿ ದೇವರನ್ನು ಆಹ್ವಾನಿಸುವ ಮತ್ತು ದೇವತೆಗಳಿಗೆ ಅರ್ಪಣೆಗಳನ್ನು ಮಾಡುವ ಸ್ಥಳವಾಗಿದೆ. ಹವನದ ಸಮಯದಲ್ಲಿ ಶಕ್ತಿಯು ಅದರೊಳಗೆ ಹರಿಯುತ್ತದೆ ಮತ್ತು ಅದು ಸಕಾರಾತ್ಮಕತೆಯ ಕೇಂದ್ರವಾಗಿರುತ್ತದೆ.
ಹವನ ಕುಂಡವನ್ನು ಇಡಲು ಅತ್ಯಂತ ಶುಭ ದಿಕ್ಕು ಎಂದರೆ ಆಗ್ನೇಯ ದಿಕ್ಕು. ಈ ದಿಕ್ಕು ಅಗ್ನಿ ಅಂಶಕ್ಕೆ ಸಂಬಂಧಿಸಿದೆ. ಇದು ಶಕ್ತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ದಿಕ್ಕಿನಲ್ಲಿ ಕುಂಡವನ್ನು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಉಳಿಯುತ್ತದೆ ಮತ್ತು ಸಮೃದ್ಧಿ ಬರುತ್ತದೆ.
ಇದನ್ನೂ ಓದಿ: Vastu Tips: ಮನೆಯ ಅದೃಷ್ಟ, ಸಂಪತ್ತು, ಸಮೃದ್ಧಿಗಾಗಿ ಬಳಸಿ ದಾಲ್ಚಿನಿ
ಹವನ ಕುಂಡವನ್ನು ನಿಯಮಿತವಾಗಿ ಇರಿಸುವ ಸ್ಥಳವನ್ನು ಸ್ವಚ್ಛಗೊಳಿಸಿ. ಧೂಳು ಅಥವಾ ಕೊಳಕು ಕುಂಡದ ಪಾವಿತ್ರ್ಯವನ್ನು ಕಡಿಮೆ ಮಾಡುತ್ತದೆ. ಹವನ ಕುಂಡವನ್ನು ಎಂದಿಗೂ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕುಗಳನ್ನು ನಕಾರಾತ್ಮಕ ಶಕ್ತಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ.