ಬೆಂಗಳೂರು: ಹಿಂದೂ ಧರ್ಮದಲ್ಲಿ(Hindu Religion) ದಾನಕ್ಕೆ(Donation) ಅತ್ಯಂತ ಮಹತ್ವವಿದ್ದು, ದಾನ ಮಾಡಿದವರಿಗೆ ದೇವರ ಅನುಗ್ರಹ ಶೀಘ್ರ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗುತ್ತದೆ. ದಾನ ಮಾಡುವವರಿಗೆ ದೇವಾನುದೇವತೆಗಳ ಕೃಪೆ ದೊರೆಯಲಿದ್ದು, ಜೀವನದಲ್ಲಿನ ಕಷ್ಟ-ಕಾರ್ಪಣ್ಯಗಳು, ಸಮಸ್ಯೆಗಳಿಂದ ಮುಕ್ತಿ ಲಭಿಸುತ್ತದೆ ಮತ್ತು ಪೂರ್ವ ಜನ್ಮದ ಕರ್ಮಗಳಿಂದ ಮುಕ್ತಿ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯು ನೆಲೆಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ವಾಸ್ತು ಶಾಸ್ತ್ರದಲ್ಲಿಯೂ ದಾನ ಧರ್ಮಕ್ಕೆ ಪ್ರಾಮುಖ್ಯತೆ ಇದ್ದು, ಪುರಾತನ ಕಾಲದಿಂದ ದಾನ ಮಾಡುವುದು ಪುಣ್ಯ ಕಾರ್ಯ, ದೇವರ ಕಾರ್ಯವೆಂದು ಪರಿಗಣಿಸಲಾಗಿದೆ. ಇದರಿಂದ ಪೂರ್ವ ಜನ್ಮದ ದೋಷಗಗೂ ಮುಕ್ತಿ ದೊರೆಯುವುದರ ಜತೆಗೆ ಮನೆಗೆ ಸಮೃದ್ಧಿ ಬರುತ್ತದೆ.
ಅದೇ ವಾಸ್ತು ಶಾಸ್ತ್ರದಲ್ಲಿ(Vastu Tips) ಕೆಲ ವಸ್ತುಗಳನ್ನು ದಾನ ಮಾಡುವುದು ಅಶುಭ ಎಂಬುದನ್ನು ವಿವರಿಸಲಾಗಿದೆ. ಅಂತಹ ವಸ್ತುಗಳನ್ನು ದಾನ ಮಾಡುವುದರಿಂದ ಅನೂಕೂಲವಲ್ಲದ ಕೆಲವು ವಸ್ತುಗಳೂ ಇವೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ದಾನ ಮಾಡುವ ಮೊದಲು, ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದ್ದು, ಎಲ್ಲ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಗಳು ದೊರೆಯುವುದಿಲ್ಲ. ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಅಶುಭ ಫಲಗಳು ದೊರೆಯುತ್ತದೆ. ಬಡತನಕ್ಕೆ ದಾರಿಯಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಯಾವ ವಸ್ತುಗಳನ್ನು ದಾನ ಮಾಡಬಾರದು? ಆ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಶುಕ್ರವಾರ ಲಕ್ಷ್ಮೀ ದೇವಿಗೆ ಸಂಬಂಧಪಟ್ಟಂತೆ ಈ ಕ್ರಮಗಳನ್ನು ಅನುಸರಿಸಿ
ಶ್ವೇತ ವರ್ಣದ ವಸ್ತುಗಳು
ಸಂಪತ್ತನ್ನು ಕರುಣಿಸುವ ಲಕ್ಷ್ಮೀ ದೇವಿಗೆ ಶ್ವೇತ ವರ್ಣದ ವಸ್ತುಗಳು ಪ್ರಿಯವಾಗಿದ್ದು, ಆಕೆಗೆ ಬಿಳಿ ಬಣ್ಣದ ವಸ್ತುಗಳನ್ನು ಅರ್ಪಿಸುವುದರಿಂದ ಸಂತುಷ್ಟಳಾಗುತ್ತಾಳೆ. ಅಂತಹ ಬಿಳಿ ಬಣ್ಣದ ವಸ್ತುಗಳಲ್ಲಿ ಮೊಸರು ಕೂಡ ಒಂದಾಗಿದೆ. ಮೊಸರನ್ನು ನೀವು ಯಾರಿಗಾದರೂ ದಾನವಾಗಿ ನೀಡುವುದರಿಂದ ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತೀರಿ. ಇದರಿಂದಾಗಿ ಬಡತನ ನಿಮ್ಮ ಜೀವನವನ್ನು ಕತ್ತಲೆಯಲ್ಲಿ ಕಳೆಯುವಂತೆ ಮಾಡುತ್ತದೆ. ಹಾಗಾಗಿ ಮೊಸರನ್ನು ನೀವು ಯಾರಿಗೂ ದಾನ ಮಾಡಲು ಹೋಗದಿರಿ. ಈ ರೀತಿ ಮೊಸರನ್ನು ದಾನ ಮಾಡುವುದರಿಂದ ನಿಮ್ಮ ಅದೃಷ್ಟ ಕಡಿಮೆಯಾಗುತ್ತದೆ ಎನ್ನುವ ನಂಬಿಕೆಯಿದೆ.
ಪೊರಕೆ
ಪೊರಕೆ ಹೊಸದಾಗಿದ್ದರೂ ಹಳೆಯದಾಗಿದ್ದರೂ ಸರಿಯೇ ಅದನ್ನು ದಾನ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭಕರವೆಂದು ಹೇಳಲಾಗಿದೆ. ಪೊರಕೆ ಲಕ್ಷ್ಮೀ ದೇವಿಯ ಸೂಚಕವಾದುದರಿಂದ, ಅದನ್ನು ದಾನ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಮನೆಗೆ ಆರ್ಥಿಕ ಸಮಸ್ಯೆಗಳು ಬರಬಹುದು. ಹೀಗಾಗಿ ಪೊರಕೆಯನ್ನು ದಾನ ಮಾಡುವುದನ್ನು ತಪ್ಪಿಸುವುದು ಉತ್ತಮ.
ಹಲಸಿದ ಆಹಾರ
ಹಲಸಿದ ಅಥವಾ ಹಾಳಾಗಿರುವ ಆಹಾರವನ್ನು ಯಾರಿಗೂ ದಾನ ಮಾಡಬಾರದು. ಇಂತಹ ಆಹಾರವನ್ನು ನೀಡುವುದು ಮನೆಯವರ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ನಂಬಲಾಗಿದೆ. ಉದ್ದೇಶಪೂರ್ವಕವಾಗಿ ಹಳಸಿದ ಆಹಾರವನ್ನು ದಾನ ಮಾಡಿದರೆ, ಅದು ಮನೆಯಲ್ಲಿಯೇ ಬಡತನವನ್ನು ಆಕರ್ಷಿಸುತ್ತದೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಈ ರೀತಿಯ ದಾನವು ಅನಾರೋಗ್ಯದ ರೂಪದಲ್ಲಿ ಮನೆಗೆ ಮರಳಿ, ದಾನ ಮಾಡುವ ವ್ಯಕ್ತಿಯ ಬದುಕಿನಲ್ಲಿ ಅಶುಭ ಫಲಗಳನ್ನು ತರಬಹುದು.