Vastu Tips: ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗಬೇಕಾ? ಈ ಒಂದು ಗಿಡ ನೆಡಿ ಸಾಕು!
ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ನೆಡುವುದರಿಂದ ಮನೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯಬಹುದು. ಹಾಗಾದರೆ ಮನೆಯಲ್ಲಿ ಯಾವ ಜಾಗದಲ್ಲಿ ಮನಿ ಪ್ಲಾಂಟ್ ಇಟ್ಟರೆ ಒಳ್ಳೆಯದು? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಇಲ್ಲಿದೆ ವಿವರ.
ಮನಿ ಪ್ಲಾಂಟ್ -
ಬೆಂಗಳೂರು: ಇತ್ತೀಚಿನ ಹೆಣ್ಣುಮಕ್ಕಳಲ್ಲಿ ಗಾರ್ಡನಿಂಗ್ ಅಥವಾ ಮನೆ ಸುತ್ತಮುತ್ತಲೂ ಗಿಡಗಳನ್ನು ನೆಡುವ ಹವ್ಯಾಸ ಹೆಚ್ಚಾಗಿದೆ. ಮನೆಯನ್ನು ಅಂದಾಗಣಿಸಲು ಈ ಗಿಡಗಳನ್ನು ನೆಡುವುದು, ಮನೆಯೊಳಗೆ ಶೋಗೆ ಅಂತ ಕೆಲ ಸಸಿಗಳನ್ನು ತರುವುದೆಲ್ಲ ಮಾಡುತ್ತಾರೆ. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದರ ಈ ಹವ್ಯಾಸವನ್ನು ವಾಸ್ತು ಶಾಸ್ತ್ರಕ್ಕೆ (Vastu Shastra) ಅನುಸಾರವಾಗಿ ಮಾಡುವುದರಿಂದ ಮನೆಯ ಅಲಂಕಾರ ಹೆಚ್ಚಿಸುವುದರ ಜತೆಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಮನೆಯ ವಾಸ್ತು ದೋಷವು ಪರಿಹಾರವಾಗುತ್ತದೆ. ಬಣ್ಣಬಣ್ಣದ ಹೂಗಳಿಂದ ಕೂಡಿದ ಗಿಡಗಳು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಮನಸ್ಸಿಗೂ ಮುದ ನೀಡುತ್ತವೆ.
ಇದಕ್ಕೆ ಮನಿ ಪ್ಲಾಂಟ್(Money Plant) ಕೂಡ ಹೊರತಾಗಿಲ್ಲ. ಕೆಲವರು ಶೋಗೆಂದು ಈ ಗಿಡವನ್ನು ಮನೆಗೆ ತಂದು ಇಟ್ಟುಕೊಳ್ಳುತ್ತಾರೆ. ಇನ್ನು ಹಲವರು ಈ ಗಿಡ ಮನೆಯಲ್ಲಿದ್ದರೆ ಧನಾಗಮನ ಆಗುತ್ತದೆ ಎಂದು ತಂದು ಇಡುತ್ತಾರೆ. ಆದರೆ ಹೀಗೆ ಇಚ್ಛೆ ಬಂದಂತೆ ವಸ್ತುವನ್ನು ಗಣನೆಗೆ ತೆಗೆದುಕೊಳ್ಳದೇ ಮನೆಗೆ ಮನಿ ಪ್ಲಾಂಟ್ ತಂದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಆಗುತ್ತದೆ.
ಹಾಗಾದರೆ ಮನೆಯಲ್ಲಿ ಯಾವ ಜಾಗದಲ್ಲಿ ಮನಿ ಪ್ಲಾಂಟ್ ಇಟ್ಟರೆ ಒಳ್ಳೆಯದು? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಎಂಬುದನ್ನು ತಿಳಿದುಕೊಳ್ಳಿ. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್ ಅನ್ನು ನೆಡುವುದರಿಂದ ಮನೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ, ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯಬಹುದು.
ಯಾವ ದಿಕ್ಕಿನಲ್ಲಿದ್ದರೆ ಒಳಿತು?
ವಾಸ್ತು ಶಾಸ್ತ್ರದಲ್ಲಿ ಅನೇಕ ಮಂಗಳಕರ ಸಸ್ಯಗಳ ಬಗ್ಗೆ ತಿಳಿಸಲಾಗಿದ್ದು ಅದರಲ್ಲಿ ಮನಿ ಪ್ಲಾಂಟ್ ಕೂಡ ಒಂದು. ಇದನ್ನು ನೆಡುವುದರಿಂದ ಲಕ್ಷ್ಮೀ ದೇವಿ(Lakshmi Devi)ಯ ಅನುಗ್ರಹಕ್ಕೆ ಪಾತ್ರರಾಗಬಹುದು. ವಾಸ್ತು ಪ್ರಕಾರ ಈ ಗಿಡವನ್ನು ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನಲ್ಲಿ ನಡೆಬೇಕು. ಈ ಗಿಡದ ಪ್ರಯೋಜನವನ್ನು ಪಡೆಯಲು, ಸಸ್ಯವನ್ನು ಪ್ರವೇಶದ್ವಾರದ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಸೂರ್ಯನ ಬೆಳಕು ಅದರ ಮೇಲೆ ಬೀಳುವಂತೆ ನೋಡಿಕೊಳ್ಳಬೇಕು. ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ಅಗತ್ಯವಿಲ್ಲ. ವಾರಕ್ಕೆ ಎರಡು ಮೂರು ಬಾರಿಯಾದರೂ ನೀರು ಹಾಕಿದ್ದರೆ ಸಾಕು.
ಸೋಮವಾರ ಈ ವಸ್ತುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿ ಹಣದ ಮಳೆಯೇ ಸುರಿಯುವುದು..!
ಗಾಜಿನ ಬಾಟಲಿಯಲ್ಲಿ ನೆಡಬೇಡಿ
ಮನಿ ಪ್ಲಾಂಟ್‌ನ ಸಸ್ಯವನ್ನು ಅಪ್ಪಿ-ತಪ್ಪಿಯೂ ಗಾಜಿನ ಬಾಟಲಿಯಲ್ಲಿ ನೆಡಬಾರದು. ಇದಕ್ಕೆ ಕಾರಣ ಗಿಡವನ್ನು ಗಾಜಿನ ಬಾಟಲಿಯಲ್ಲಿ ನೆಡುವುದರಿಂದ ಅದರ ಬೇರುಗಳಿಗೆ ಹರಡುವಷ್ಟು ಜಾಗ ಸಿಗುವುದಿಲ್ಲ. ಹೀಗಾಗಿ ನೀವು ಇದರ ಬಗ್ಗೆ ವಿಶೇಷ ಗಮನಹರಿಸಬೇಕು. ನೀವು ಮನಿ ಪ್ಲಾಂಟ್ ನೆಡುತ್ತಿದ್ದರೆ ಅದು ಎಂದಿಗೂ ಒಣಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಉಡುಗೊರೆಯಾಗಿ ನೀಡಬೇಡಿ
ಇನ್ನು ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್‍ನ ಗಿಡವನ್ನು ಮನೆಯೊಳಗೆ ನೆಡಬೇಕು. ಅದಷ್ಟು ಅದರ ಮೇಲೆ ಹೊರಗಿಂದ ಬಂದವರ ಕಣ್ಣು ಬೀಳದಂತೆ ನೋಡಿಕೊಳ್ಳಬೇಕು. ಯಾಕೆಂದರೆ ಆ ಗಿಡ ಬೆಳೆದಿರುವುದನ್ನು ನೋಡಿ ಕೆಲವರು ಅಸೂಯೆ ಪಡಬಹುದು. ಇದರಿಂದ ದೃಷ್ಟಿ ಅಂದಂತೆ ಆಗಿ ಆ ಸಸ್ಯ ಒಣಗಿ ಹೋಗಬಹುದು. ಇದರ ಜತೆ ಮತ್ತೊಂದು ವಿಷಯವನ್ನು ನೆನಪಿಟ್ಟುಕೊಳ್ಳಿ. ತಪ್ಪಿಯೂ ಎಂದಿಗೂ ಯಾರಿಗೂ ಮನಿ ಪ್ಲಾಂಟ್ ಅನ್ನು ಉಡುಗೊರೆಯಾಗಿ ನೀಡಬಾರದು.