ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಸಕಾರಾತ್ಮಕತೆಯನ್ನು ಹೆಚ್ಚಿಸಲು ಅಧ್ಯಯನ ಕೊಠಡಿಯಲ್ಲಿ ಇರಲಿ ಈ ವಸ್ತುಗಳು

ಕೆಲವೊಂದು ವಸ್ತುಗಳನ್ನು ನಾವು ಅಧ್ಯಯನ ಕೊಠಡಿಯಲ್ಲಿ ಇರಿಸುವುದರಿಂದ ನಮ್ಮ ಸುತ್ತಮುತ್ತ ಸಕಾರಾತ್ಮಕತೆಯನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಅಧ್ಯಯನದಲ್ಲಿ ಹೆಚ್ಚಿನ ಗಮನಕೊಡಲು ಮತ್ತು ಜೀವನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರಾದ ಪೂಜಾ ಸೇಠ್.

ಬೆಂಗಳೂರು: ಅಧ್ಯಯನದಲ್ಲಿ (Vastu for study room) ಹೆಚ್ಚಿನ ಗಮನ ಹರಿಸಲು ಕೊಠಡಿಯಲ್ಲಿ ಕೆಲವೊಂದು ವಸ್ತುಗಳನ್ನು ಇರಿಸಬೇಕು. ಇದರಿಂದ ಜೀವನದಲ್ಲಿ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಇದಕ್ಕಾಗಿ ವಾಸ್ತು ತತ್ತ್ವಗಳು (Vastu tips) ನಮಗೆ ಸಹಾಯ ಮಾಡುತ್ತದೆ. ಅಧ್ಯಯನ ಸ್ಥಳವು (Vastu for reading room) ನಮ್ಮನ್ನು ಹೆಚ್ಚು ಶಕ್ತಿಯುತಗೊಳಿಸುವಂತಿರಬೇಕು, ಸಕಾರಾತ್ಮಕತೆಯನ್ನು ವೃದ್ಧಿಸುವಂತರಬೇಕು. ಇದರಿಂದ ಮಾನಸಿಕ ಸ್ಪಷ್ಟತೆ, ಬೌದ್ಧಿಕ ಶಕ್ತಿ ವೃದ್ಧಿಯಾಗುವುದು ಎನ್ನುತ್ತಾರೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರಾದ ಪೂಜಾ ಸೇಠ್.

ಅಧ್ಯಯನದಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಲು ಈ ಐದು ವಸ್ತುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಸರಸ್ವತಿಯ ಚಿತ್ರ

ಅಧ್ಯಯನ ಕೊಠಡಿಯಲ್ಲಿ ಇರಬೇಕಾದ ಅತ್ಯಂತ ಶಕ್ತಿಶಾಲಿ ಚಿತ್ರಗಳಲ್ಲಿ ಸರಸ್ವತಿ ದೇವಿಯ ಚಿತ್ರ. ಇದು ಶಾಂತತೆ, ಶಿಸ್ತು ಮತ್ತು ಸ್ಫೂರ್ತಿಯನ್ನು ತರುತ್ತದೆ. ಈ ಚಿತ್ರವನ್ನು ನೇರವಾಗಿ ಅಧ್ಯಯನ ಮೇಜಿನ ಮುಂದೆ ಅಥವಾ ಪೂರ್ವ ಗೋಡೆಯ ಮೇಲೆ ಇಡುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ಶಕ್ತಿ ಹೆಚ್ಚುತ್ತದೆ. ಈ ಚಿತ್ರವು ಶಾಂತ ಮತ್ತು ಗೌರವಯುತವಾಗಿರಬೇಕು, ವೀಣೆ ಮತ್ತು ಪುಸ್ತಕಗಳೊಂದಿಗೆ ಕುಳಿತಿರುವುದನ್ನು ತೋರಿಸಬೇಕು, ಇದು ಕಲೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುತ್ತದೆ.

ಗಣೇಶನ ಚಿತ್ರ

ವಿಘ್ನಗಳನ್ನು ನಿವಾರಿಸುವ ಗಣೇಶನನ್ನು ಬುದ್ಧಿಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅವನ ಚಿತ್ರವು ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ. ಗಣೇಶನ ಚಿತ್ರವನ್ನು ಮಾ ಸರಸ್ವತಿಯ ಎಡಭಾಗ ಅಥವಾ ಈಶಾನ್ಯ ಗೋಡೆಯ ಮೇಲೆ ಇರಿಸಬಹುದು. ಇದು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಉದಯಿಸುತ್ತಿರುವ ಸೂರ್ಯ

ಉದಯಿಸುತ್ತಿರುವ ಸೂರ್ಯ ಹೊಸ ಆರಂಭ ಮತ್ತು ಹೆಚ್ಚಿನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಪೋಸ್ಟರ್ ಅಧ್ಯಯನ ಕೊಠಡಿಯಲ್ಲಿದ್ದರೆ ವಿದ್ಯಾರ್ಥಿಗಳು ಪ್ರತಿದಿನ ಉಲ್ಲಾಸದಿಂದ ಓದಲು ಸಹಾಯವಾಗುತ್ತದೆ. ಅದನ್ನು ಪೂರ್ವ ಗೋಡೆಯ ಮೇಲೆ ಇರಿಸಿ. ಉದಯಿಸುತ್ತಿರುವ ಸೂರ್ಯನ ಮೃದುವಾದ ಚಿನ್ನದ ಬೆಳಕು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪರ್ವತ ಚಿತ್ರ

ಪರ್ವತ, ನದಿ ಅಥವಾ ಹಸಿರು ಭೂದೃಶ್ಯಗಳ ಪೋಸ್ಟರ್‌ಗಳು ಮನಸ್ಸಿಗೆ ಶಾಂತತೆ ಮತ್ತು ಸ್ಥಿರತೆಯ ಭಾವನೆಯನ್ನು ತರುತ್ತವೆ. ಇವು ದೀರ್ಘಕಾಲೀನ ಏಕಾಗ್ರತೆ ಮತ್ತು ಅಧ್ಯಯನ ಶಿಸ್ತಿಗೆ ಅತ್ಯಗತ್ಯ. ಈ ಪೋಸ್ಟರ್‌ಗಳನ್ನು ನೈಋತ್ಯ ಗೋಡೆಯ ಮೇಲೆ ಇರಿಸಬೇಕು. ಇದು ಕೊಠಡಿಯಲ್ಲಿರುವ ವಾಸ್ತು ದೋಷಗಳನ್ನು ಸ್ಥಿರಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಮನಸ್ಸನ್ನು ಸ್ಥಿರವಾಗಿರಿಸಬಹುದು.

ಇದನ್ನೂ ಓದಿ: Vastu tips: ಫ್ರಿಡ್ಜ್ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ಸ್ಫೂರ್ತಿ ತುಂಬುವ ಉಲ್ಲೇಖ

ಸ್ಫೂರ್ತಿದಾಯಕ ಉಲ್ಲೇಖಗಳನ್ನು ಹೊಂದಿರುವ ಪೋಸ್ಟರ್‌ಗಳು ಪ್ರೇರಕ ಶಕ್ತಿಗಳಾಗುತ್ತವೆ. ಇದು ಮನಸ್ಸನ್ನು ಶೈಕ್ಷಣಿಕ ಗುರಿಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.

ವಿದ್ಯಾ ಇರ್ವತ್ತೂರು

View all posts by this author