ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆ ಸಮೃದ್ಧಿಗೆ ಅಡ್ಡಿಯಾಗುತ್ತದೆ ಈ 2 ಪಾತ್ರೆಗಳು

ಅಡುಗೆ ಕೋಣೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಮನೆಯ ಸಮೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಅಂತಹ ತಪ್ಪುಗಳು ಯಾವುದು, ಯಾಕೆ ಮಾಡಬಾರದು, ಇದು ಬೀರುವ ಪರಿಣಾಮ ಹೇಗಿರುತ್ತದೆ ಮೊದಲಾದ ಮಾಹಿತಿ.

ಬೆಂಗಳೂರು: ಅಡುಗೆ ಮನೆಯಲ್ಲಿ (Vastu for kitchen) ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಮನೆಯ ಸಮೃದ್ಧಿ, ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದ ಮನೆಯ (Vastu For home) ಶಕ್ತಿಯ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ ಎನ್ನುತ್ತಾರೆ ವಾಸ್ತು (Vastu Tips) ಶಾಸ್ತ್ರಜ್ಞರು. ಅಡುಗೆ ಮನೆಯಲ್ಲಿ ಮುಖ್ಯವಾಗಿ ಎರಡು ಪಾತ್ರೆಗಳ ಬಗ್ಗೆ ಸಾಕಷ್ಟು ಜಾಗ್ರತೆ ವಹಿಸಬೇಕು. ಯಾಕೆಂದರೆ ಇದು ರಾಹು ದೋಷವನ್ನು ಉಂಟು ಮಾಡುತ್ತದೆ. ಇದರಿಂದ ಮನೆಯ ಸಮೃದ್ಧಿ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಸ್ತು ತತ್ವಗಳ ಪ್ರಕಾರ ಅಡುಗೆಮನೆಯು ಕೇವಲ ಅಡುಗೆ ಮಾಡುವ ಸ್ಥಳವಲ್ಲ. ಇದು ಶಕ್ತಿಯ ಪ್ರಾಥಮಿಕ ಮೂಲವೂ ಆಗಿದೆ. ಆದ್ದರಿಂದ ಅಡುಗೆಮನೆಯಲ್ಲಿನ ಸಣ್ಣ ತಪ್ಪುಗಳು ಮನೆಯ ಸಮೃದ್ಧಿ ಮತ್ತು ಶಾಂತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಕೆಲವು ದುಷ್ಟ ಗ್ರಹಗಳು ಅಡುಗೆಮನೆಯ ಪಾತ್ರೆಗಳಲ್ಲಿರುತ್ತವೆ. ಇವು ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತವೆ. ಇದರಿಂದ ಮನೆಗೆ ಲಕ್ಷ್ಮೀ ದೇವಿಯ ಪ್ರವೇಶಕ್ಕೆ ಅಡ್ಡಿಯಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

VS

ಈ ಎರಡು ಪಾತ್ರೆಗಳನ್ನು ಸರಿಯಾಗಿ ಸಂಗ್ರಹಿಸಿಡುವುದು ಬಹಳ ಮುಖ್ಯ. ಇಲ್ಲವಾದರೆ ಮನೆಯ ಸಮೃದ್ಧಿಗೆ ಅಡ್ಡಿಯಾಗುತ್ತದೆ. ಅಂತಹ ಪಾತ್ರೆಗಳೆಂದರೆ ಕಡಾಯಿ ಮತ್ತು ತವಾ. ಈ ಎರಡು ಪತ್ರಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿ ಇಡದಿದ್ದರೆ ಆರ್ಥಿಕ ತೊಂದರೆ ಉಂಟಾಗುತ್ತದೆ, ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿ ಅಮಿತಾ ರಾವಲ್.

ಕಡಾಯಿ ಮತ್ತು ತವಾವನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಯಾಕೆಂದರೆ ಹೀಗೆ ಇಡುವುದರಿಂದ ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕಡಾಯಿ ಮತ್ತು ತವಾವನ್ನು ನೇರವಾಗಿ ಇಡಬೇಕು. ಅವುಗಳನ್ನು ತಲೆಕೆಳಗಾಗಿ ಇಡುವುದರಿಂದ ಅವುಗಳ ಶಕ್ತಿಯ ಹಿಮ್ಮುಖವಾಗುತ್ತದೆ. ಇದರಿಂದ ನಕಾರಾತ್ಮಕ ಶಕ್ತಿಗೆ ಅಹ್ವಾನ ನೀಡಿದಂತಾಗುತ್ತದೆ.

ಇನ್ನು ಸರಿಯಾಗಿ ಸ್ವಚ್ಛಗೊಳಿಸದೆ ತವಾದಲ್ಲಿ ಅಡುಗೆ ಮಾಡಿದರೆ ಅದು ಕೂಡ ನಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಹೀಗಾಗಿ ಜಿಡ್ಡಿನ ಕುರುಹು ಇರುವ ಪಾತ್ರೆಯಲ್ಲಿ ಎಂದಿಗೂ ಯಾವುದೇ ಆಹಾರವನ್ನು ಬೇಯಿಸಬಾರದು. ವಾಸ್ತು ಮಾತ್ರವಲ್ಲ ಕೊಳಕಾದ ತವಾ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.

ಇದನ್ನೂ ಓದಿ: Vastu Tips: ಕೆಲಸ ಮಾಡುವ ಕಂಪ್ಯೂಟರ್ ಈ ದಿಕ್ಕಿನಲ್ಲಿದ್ದರೆ ಯಶಸ್ಸು ಗ್ಯಾರಂಟಿ

ಅಡುಗೆಮನೆಯಲ್ಲಿ ತವಾ ಮತ್ತು ಕಡಾಯಿಗಳನ್ನು ಬಾಗಿಲು ಅಥವಾ ಸಿಂಕ್ ಬಳಿ ಎಂದಿಗೂ ಇಡಬಾರದು. ಇದು ವಾಸ್ತು ದೋಷಗಳಿಗೆ ಕಾರಣವಾಗುತ್ತದೆ. ಈ ಪಾತ್ರೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಮತ್ತು ತಕ್ಷಣ ಜಾಗರೂಕತೆಯಿಂದ ಎತ್ತಿಡಬೇಕು. ಅವುಗಳನ್ನು ಎಂದಿಗೂ ಸಿಂಕ್‌ನಲ್ಲಿ ಇತರ ಕೊಳಕು ಪಾತ್ರೆಗಳೊಂದಿಗೆ ಹೆಚ್ಚು ಹೊತ್ತು ಇಡಬಾರದು ಎನ್ನುತ್ತಾರೆ ವಾಸ್ತು ತಜ್ಞರು.

ವಿದ್ಯಾ ಇರ್ವತ್ತೂರು

View all posts by this author