ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ನಿಮ್ಮ ಮನೆಯ ಮುಂದೆ ಈ 1 ಗಿಡ ಇದ್ದರೂ ಆರ್ಥಿಕ ನಷ್ಟ ತಪ್ಪಿದ್ದಲ್ಲ

Vastu Tips For Plant: ವಾಸ್ತು ಶಾಸ್ತ್ರದಲ್ಲಿ ಮನೆ ಮುಂದೆ ಗಿಡ ನೆಡುವುದಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ. ಹೀಗಾಗಿ ಮನೆ ಮುಂದೆ ಶುಭ ತರುವ ಗಿಡಗಳಿರಬೇಕು ಎಂದು ಶಾಸ್ತ್ರ ಹೇಳುತ್ತದೆ. ಈ ವಿಷಯಕ್ಕೂ ಸಂಬಂಧಪಟ್ಟಂತೆ ಕೆಲ ನಿಯಮಗಳು ಇದ್ದು, ವಾಸ್ತುವಿನಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ದೊಡ್ಡ ಮರಗಳನ್ನು ನೆಡುವುದನ್ನು ನಿಷೇಧಿಸಲಾಗಿದೆ. ಕೆಲ ಗಿಡಗಳನ್ನು ಮನೆಯ ನೆಡುವುದರಿಂದ ಕೆಡಕು ಆಗಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ವಾಸ್ತು ಶಾಸ್ತ್ರದಲ್ಲಿ(Vastu Shastra) ಮನೆಯಲ್ಲಿ ದಿಕ್ಕುಗಳು, ಮನೆಯಲ್ಲಿಡುವಂತಹ ವಸ್ತುಗಳು ಮಾತ್ರವಲ್ಲದೇ ಈ ಮನೆ ಮುಂದೆ ಇರಬೇಕಾದ, ಇರಬಾರದ ವಸ್ತುಗಳ ಬಗ್ಗೆಯೂ ವಿವರಿಸಲಾಗಿದೆ. ಇದಕ್ಕೆ ಹೂದೋಟ, ಸಸ್ಯಗಳು(Plants) ಹೊರತಾಗಿಲ್ಲ.
ವಾಸ್ತು ಶಾಸ್ತ್ರದಲ್ಲಿ ಮನೆ ಮುಂದೆ ಗಿಡ ನೆಡುವುದಕ್ಕೆ ತುಂಬಾನೇ ಮಹತ್ವ ನೀಡಲಾಗಿದ್ದು, ಶುಭ ತರುವ ಗಿಡಗಳಿರಬೇಕು ಎಂದು ಹೇಳುತ್ತದೆ.

ಈ ವಿಷಯಕ್ಕೂ ಸಂಬಂಧಪಟ್ಟಂತೆ ಕೆಲ ನಿಯಮಗಳು ಇದ್ದು, ವಾಸ್ತುವಿನಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ದೊಡ್ಡ ಮರಗಳನ್ನು ನೆಡುವುದನ್ನು ನಿಷೇಧಿಸಲಾಗಿದೆ. ಹಾಗೇ ಕೆಲ ಗಿಡಗಳನ್ನು ಮನೆಯ ನೆಡುವುದರಿಂದ ಕೆಡಕು ಆಗಲಿದ್ದು, ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ ಹಾಗೂ ಜೀವನದಲ್ಲಿ ಸಾಕಷ್ಟು ದುರದೃಷ್ಟದ ಘಟನೆ ನಡೆಯುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ವಾಸ್ತು ಶಾಸ್ತ್ರ ಪ್ರಕಾರ ಮನೆಯ ಮುಂದೆ ಯಾವ ಗಿಡಗಳನ್ನು ನೆಡಬಾರದು? ಎಂಬುದನ್ನು ನೋಡೋಣ.

ಹತ್ತಿ ಗಿಡ

ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಅಥವಾ ಮನೆಯ ಮುಂದೆ ಹತ್ತಿ ಗಿಡವನ್ನು ನೆಡುವುದು ಸೂಕ್ತವಲ್ಲ. ಹತ್ತಿ ಗಿಡ ನೆಟ್ಟ ಮನೆಯಲ್ಲಿ ನಿರಂತರವಾಗಿ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ಜತೆಗೆ ಕೈ ಹಿಡಿದ ಕೆಲಸಗಳು ಸಂಪೂರ್ಣಗೊಳ್ಳದೇ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಕಳ್ಳಿ ಅಥವಾ ಮುಳ್ಳಿನ ಸಸ್ಯಗಳು

ಇತ್ತೀಚಿನ ದಿನಗಳಲ್ಲಿ ಅಲಂಕಾರಕ್ಕಾಗಿ ಮನೆಯ ಮುಂದೆ ಅಥವಾ ಹೂಕುಂಡಗಳಲ್ಲಿ ಕಳ್ಳಿ ಅಥವಾ ಮುಳ್ಳಿನ ಸಸ್ಯಗಳನ್ನು ನೆಡುತ್ತಾರೆ. ಈ ಗಿಡಗಳು ಬಹಳ ಆಕರ್ಷಕವಾಗಿ ಕಾಣುತ್ತವೆ ಎನ್ನುವ ಕಾರಣಕ್ಕೆ ಮನೆಯ ತೋಟಗಳು ಮತ್ತು ಬಾಲ್ಕನಿಗಳಲ್ಲಿ ಕಳ್ಳಿ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಕಳ್ಳಿ ಅಥವಾ ಯಾವುದೇ ಮುಳ್ಳಿನ ಗಿಡವನ್ನು ಮನೆಯ ಮುಂದೆ ಬೆಳೆಸಬಾರದು. ವಾಸ್ತವವಾಗಿ ಈ ಮುಳ್ಳಿನ ಗಿಡಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಕಳ್ಳಿ ಇರುವ ಮನೆಯಲ್ಲಿ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕುತ್ತಾರೆ.

ಗುರುವಾರ ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ಜೊತೆಯಾಗುತ್ತದೆ

ಬೋನ್ಸಾಯ್ ಗಿಡ

ಬೋನ್ಸಾಯ್ ಗಿಡವು ಕಣ್ಣಿಗೆ ಆಕರ್ಷಕವಾಗಿ ಕಂಡರೂ, ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಇಡುವುದು ಸೂಕ್ತವಲ್ಲ. ಇಂತಹ ಸಸ್ಯಗಳು ಹೊರಗೆ ಸುಂದರವಾಗಿ ಕಾಣಿಸಿದರೂ, ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಕರೆತರುತ್ತವೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಬೋನ್ಸಾಯ್ ಗಿಡವನ್ನು ಮುಖ್ಯ ದ್ವಾರ ಎದುರು ಇಡುವುದು ಉದ್ಯೋಗದಲ್ಲಿ ತೊಂದರೆಗಳು ಮತ್ತು ಆರ್ಥಿಕ ಹಿನ್ನಡೆಗಳನ್ನು ಉಂಟು ಮಾಡಬಹುದು.

ಮೆಹೆಂದಿ ಅಥವಾ ಗೋರಂಟಿ ಗಿಡ

ಮನೆಯಲ್ಲಿ ಮೆಹೆಂದಿ ಅಥವಾ ಗೋರಂಟಿ ಗಿಡ ನೆಡುವುದು ಶುಭವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ದುಷ್ಟ ಶಕ್ತಿಗಳು ಈ ಸಸ್ಯದಲ್ಲಿ ನೆಲೆಸಿರುತ್ತವೆಯಂತೆ. ಮನೆಯಲ್ಲಿ ಗೋರಂಟಿ ಗಿಡವನ್ನು ನೆಡುವುದರಿಂದ ನಕಾರಾತ್ಮಕತೆ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅಲ್ಲದೆ ಎಷ್ಟೇ ದುಡಿದರೂ ಹಣ ಉಳಿಸುವುದು ಸಾಧ್ಯವಾಗುವುದಿಲ್ಲವಂತೆ.