Vastu Tips: ನಿಮ್ಮ ವಾಸಸ್ಥಳ ಮತ್ತು ಕಚೇರಿ ವಾತಾವರಣವನ್ನು ಪಾಸಿಟಿವ್ ಎನರ್ಜಿಭರಿತವನ್ನಾಗಿಸಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್
Feng Shui Vastu Tips: ವಾಸ್ತು, ಶೆಂಗ್ ಶೂಯ್ ಅಂತಹ ಪ್ರಾಚೀನ ವಿಧಾನಗಳನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಪ್ರೀತಿಪಾತ್ರರನ್ನು ಮತ್ತು ನಮ್ಮ ಕುಟುಂಬವನ್ನು ಸುಖ ನೆಮ್ಮದಿ ಸಾಮರಸ್ಯದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸಹಕಾರಿ ಆಗಲಿದೆ. ಆ ಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಇಂದಿನ ಒತ್ತಡಯುಕ್ತ ಜೀವನ ಶೈಲಿಯಲ್ಲಿ ನಮ್ಮ ಮಾನಸಿಕ, ದೈಹಿಕ ಆರೋಗ್ಯ ಮತ್ತು ಮನಃಶಾಂತಿಯನ್ನು ಕಾಪಾಡಿಕೊಳ್ಳುವುದು ಹಾಗೂ ಸಾಂಸಾರಿಕ ಜೀವನದಲ್ಲಿ ಮತ್ತು ಕುಟುಂಬದಲ್ಲಿ ಸಾಮರಸ್ಯವನ್ನು ಸಾಧಿಸುವುದು ಸವಾಲಿನ ಕೆಲಸವೇ ಸರಿ. ಇದಕ್ಕಾಗಿ ನಮಗೆ ಸರಿಯಾದ ವಾಸ್ತು ಟಿಪ್ಸ್(Vastu Tips) ದೊರಕಿದರೆ ನೆಮ್ಮದಿಯ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ.
ವಾಸ್ತು, ಶೆಂಗ್ ಶೂಯ್(Feng Shui Tips) ನಂತಹ ಪ್ರಾಚೀನ ವಿಧಾನಗಳನ್ನು ಸರಿಯಾಗಿ ಅರ್ಥೈಸಿಕೊಂಡು ಬಳಸುವುದರಿಂದ ನಮ್ಮ ಪ್ರೀತಿಪಾತ್ರರನ್ನು ಮತ್ತು ನಮ್ಮ ಕುಟುಂಬವನ್ನು ಸಾಮರಸ್ಯದ ಹಾದಿಯಲ್ಲಿ ನಡೆಸಿಕೊಂಡು ಹೋಗಲು ಸಾಧ್ಯ ಎಂಬುದು ಕಂಡುಕೊಂಡಿರುವ ಸತ್ಯವಾಗಿದೆ.
ಇಂತಹ ಪ್ರಾಚೀನ ವಿಧಾನಗಳಿಂದ ಧನಾತ್ಮಕ ಶಕ್ತಿ (Positive Energy) ಉದ್ದೀಪನಗೊಂಡು, ಋಣಾತ್ಮಕ ಶಕ್ತಿಗಳನ್ನು (Negative Energy) ದೂರವಿಡಲು ಸಾಧ್ಯ. ಇದಕ್ಕಾಗಿ ನೀವು ಹೆಚ್ಚಿನದ್ದೇನೂ ಮಾಡಬೇಕಾಗಿಲ್ಲ. ನಿಮ್ಮ ಈಗಿರುವ ಮನೆಯ ಸೆಟಪ್ ನಲ್ಲೇ ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಮನೆ ಅಥವಾ ಕಚೇರಿಯನ್ನು ಪಾಸಿಟಿವ್ ಎನರ್ಜಿಯಿಂದ ಆವರಿಸುವಂತೆ ಮಾಡಲು ಸಾಧ್ಯವಿದೆ. ಅದಕ್ಕಾಗಿ ಕೆಲವೊಂದು ಸಿಂಪಲ್ ಸೂತ್ರಗಳು(Vastu Tips) ಇಲ್ಲಿವೆ.
ಪ್ರವೇಶ ದ್ವಾರದಲ್ಲಿ ಬುದ್ಧನ ಪ್ರತಿಮೆ:
ನಿಮ್ಮ ಮನೆಯನ್ನು ಸಮೃದ್ಧಭರಿತನವನ್ನಾಗಿ ಮಾಡಲು ಅನುಸರಿಸಬಹುದಾದ ಸಿಂಪಲ್ ವಿಧಾನದಲ್ಲಿ, ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸುವುದೂ ಒಂದು ವಿಧಾನವಾಗಿದೆ. ವಾಸ್ತುಶಾಸ್ತ್ರದ ಪ್ರಕಾರ, ಬುದ್ಧ ಬುದ್ಧಿವಂತಿಕೆ, ಶಾಂತಿ ಮತ್ತು ಸಮೃದ್ಧಿದಯನ್ನು ತರುತ್ತದೆ ಎಂಬ ನಂಬಿಕೆಯಿದೆ. ನಿಮ್ಮ ಮನೆ-ಮನಗಳನ್ನು ಬಾಧಿಸಬಹುದಾಗಿರುವ ನೆಗೆಟಿವ್ ಎನರ್ಜಿಗಳನ್ನು ತಡೆದು ಪಾಸಿಟಿವ್ ಎನರ್ಜಿ ಪ್ರವೇಶಿಸುವಂತೆ ಮಾಡುವಲ್ಲಿಯೂ ಬುದ್ಧನ ಮೂರ್ತಿ ಸಹಕಾರಿಯಾಗಲಿದೆ.
ಪಾಸಿಟಿವ್ ಎನರ್ಜಿಗಾಗಿ ವಾಸ್ತು ಪೈಂಟಿಗ್ ಗಳು:
ನಿಮ್ಮ ಮನೆಯ ಗೋಡೆಗಳಲ್ಲಿ ಅಥವಾ ಕಚೇರಿ ಕೊಠಡಿಗಳಲ್ಲಿ ವಾಸ್ತು ಪೈಂಟಿಂಗ್ ಗಳಾದ, ಓಡುತ್ತಿರುವ ಕುದುರೆಗಳು, ಹರಿಯುತ್ತಿರುವ ನದಿ ಅಥವಾ ಸೂರ್ಯೋದಯದ ಪೈಂಟಿಂಗ್ ಗಳು ಮನೆ ವಾತಾವರಣದಲ್ಲಿ ಪಾಸಿಟಿವ್ ಎನರ್ಜಿ ಪ್ರವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಇವುಗಳು ಸ್ಪೂರ್ತಿ ಮತ್ತು ಉತ್ತೇಜನವನ್ನೂ ನೀಡುವಲ್ಲೂ ಸಹಕಾರಿಯಾಗಿದೆ.
ಸಮೃದ್ಧಿಗಾಗಿ ಆಮೆ ಮತ್ತು ಮೇರು ಯಂತ್ರಗಳನ್ನು ಇರಿಸುವುದು:
ಮನೆಯ ಅಥವಾ ಕಚೇರಿಯ ಪ್ರಮುಖ ಜಾಗಗಳಲ್ಲಿ ಆಮೆಯ ಪ್ರತಿಕೃತಿ ಅಥವಾ ಮೇರು ಯಂತ್ರವನ್ನು ಇರಿಸುವುದರಿಂದ ನಿಮ್ಮ ಮನೆ ಮತ್ತು ಕಚೇರಿಯ ಸಮೃದ್ಧಿ ಆಧಿಕ್ಯವಾಗುತ್ತದೆ. ಮಾತ್ರವಲ್ಲದೇ, ಇವುಗಳು ಸಮೃದ್ಧಿಯನ್ನು ಆಕರ್ಷಿಸಿ ಯಾವುದೇ ಅಡೆತಡೆಗಳನ್ನು ದೂರಮಾಡುವಲ್ಲಿ ಸಹಾಯ ಮಾಡುತ್ತವೆ.
ಈ ಸುದ್ದಿಯನ್ನು ಓದಿ: Astro Tips: ಬುಧವಾರ ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಿದರೆ ಹೆಚ್ಚು ಸಂತುಷ್ಟನಾಗುತ್ತಾನೆ..!
ವೈಯಕ್ತಿಕ ಬೆಳವಣಿಗೆಗಾಗಿ ನಿರ್ಧಿಷ್ಟ ಯಂತ್ರಗಳು:
ಮಾರುತಿ ಯಂತ್ರ, ಗುರು ಯಂತ್ರ ಮತ್ತು ನವಗ್ರಹ ಯಂತ್ರಗಳಂತಹ ವಿವಿಧ ರೀತಿಯ ಯಂತ್ರಗಳು ಸಾಮರಸ್ಯ ಮತ್ತು ಸಮತೋಲನವನ್ನು ಸಾಧಿಸಲು ಸಹಕಾರಿಯಾಗಿದೆ. ನಿಮ್ಮ ವ್ಯವಹಾರದಲ್ಲಿ ಯಶಸ್ಸು, ಆರೋಗ್ಯದಲ್ಲಿ ಪ್ರಗತಿ ಅಥವಾ ಧಾರ್ಮಿಕ ಸಾಧನೆಗಾಗಿ ಇಂತಹ ಯಂತ್ರಗಳಿಂದ ನಿಮಗೆ ವಿಶೇಷ ಶಕ್ತಿ ಲಭಿಸುತ್ತದೆ.
ನಿಮ್ಮ ವಾಸ ಸ್ಥಳನವನ್ನು ಚೆನ್ನಾಗಿಡಲು ಫೆಂಗ್ ಶೂಯಿ ಟಿಪ್ಸ್:
ಅದೃಷ್ಟಕ್ಕಾಗಿ ಲಕ್ಕಿ ಬ್ಯಾಂಬೂ:
ಫೆಂಗ್ ಶೂಯಿನಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಲಕ್ಕಿ ಬ್ಯಾಂಬು (ಅದೃಷ್ಟಕಾರಿ ಬಿದಿರು). ಇದು ಅದೃಷ್ಟ ಮತ್ತು ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸುವಲ್ಲಿ ಖ್ಯಾತಿಯನ್ನು ಹೊಂದಿದೆ. ಅತಿ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡಬಹುದಾದ ಈ ಗಿಡ ಅಭಿವೃದ್ಧಿ ಹಾಗೂ ಶಕ್ತಿವರ್ಧಕ ಗುಣವನ್ನು ಹೊಂದಿದೆ.
ರಕ್ಷಣೆಗಾಗಿ ದುಷ್ಟ ನೇತ್ರ (ಇವಿಲ್ ಐ) ಅಲಂಕಾರ:
ನಿಮ್ಮ ಮನೆಯಲ್ಲಿ ದುಷ್ಟ ನೇತ್ರ (ಇವಿಲ್ ಐ) ಅಲಂಕಾರವನ್ನು ಇರಿಸುವುದರಿಂದ ಇದು ನಿಮ್ಮನ್ನು ಮತ್ತು ನಿಮ್ಮ ಪ್ರಿತಿಪಾತ್ರರನ್ನು ನೆಗೆಟಿವ್ ಎನರ್ಜಿಗಳು ಮತ್ತು ಬ್ಯಾಡ್ ಲಕ್ ಗಳ ಪ್ರಭಾವದಿಂದ ರಕ್ಷಿಸುತ್ತದೆ ಎಂಬ ನಂಬಿಕೆಯಿದೆ. ಇದು ಶತಶತಮಾನಗಳಿಂದ ದುಷ್ಟ ಶಕ್ತಿಗಳ ಪ್ರಭಾವದ ವಿರುದ್ಧ ರಕ್ಷಣಾತ್ಮಕವಾಗಿ ಬಳಸಲ್ಪಡುವ ಸಾಧನವಾಗಿ ಪ್ರಚಲಿತದಲ್ಲಿದೆ.
ಪಾಸಿಟಿವ್ ಎನರ್ಜಿಗಾಗಿ ಫೆಂಗ್ ಶೂಯಿ ವಿಂಡ್ ಚೈಮ್ಸ್:
ಫೆಂಗ್ ಶೂಯಿ ವಿಂಡ್ ಚೈಮ್ಸ್ ಗಳನ್ನು ನಿಮ್ಮ ಮನೆ ಅಥವಾ ಕಚೇರಿಯ ನಿರ್ಧಿಷ್ಟ ಸ್ಥಳದಲ್ಲಿ ನೇತುಹಾಕುವುದರಿಂದ ಶಕ್ತಿ ಸಂಚಯವನ್ನು ಸ್ವಚ್ಛಗೊಳಿಸಿ, ತಾಜಾ ಮತ್ತು ಪಾಸಿಟಿವ್ ಎನರ್ಜಿ ಪ್ರವಹಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.
ಶಕ್ತಿ ಪ್ರವಹಿಸುವಿಕೆಯನ್ನು ಉತ್ತೇಜಿಸಲು ಸ್ಪಟಿಕದ ಚೆಂಡುಗಳು (ಕ್ರಿಸ್ಟಲ್ ಬಾಲ್):
ಫೆಂಗ್ ಶೂಯಿ ಕ್ರಿಸ್ಟಲ್ ಗಳಾಗಿರುವ, ಅಮೆಥಿಸ್ಟ್ ಅಥವಾ ಕ್ಲಿಯರ್ ಕ್ವಾರ್ಟ್ಜ್ ಪಾಸಿಟಿವ್ ಎನರ್ಜಿ ಪ್ರವಹಿಸುವಂತೆ ಮಾಡುವ ಸಶಕ್ತ ಸಲಕರಣೆಗಳಾಗಿವೆ. ನಿಮ್ಮ ಲಿವಿಂಗ್ ರೂಂನಲ್ಲಿ ಅಥವಾ ಕಚೇರಿ ಕೋಣೆಯಲ್ಲಿ ಕ್ರಿಸ್ಟಲ್ ಬಾಲ್ ಗಳನ್ನು ಇರಿಸುವುದರಿಂದ ನಿಮ್ಮ ಕೆಲಸದಲ್ಲಿ ಸ್ಪಷ್ಟತೆ, ಕ್ರಿಯಾಶೀಲತೆ ಮತ್ತು ಸ್ಪಿರಿಚ್ಯುವಲ್ ಬ್ಯಾಲೆನ್ಸ್ ಉತ್ತಮಗೊಳಿಸಲು ಸಹಕಾರಿಯಾಗಿದೆ.