ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಕಾರಿನಲ್ಲಿ ದೇವರ ವಿಗ್ರಹ ಇಡುವಾಗ ಪಾಲಿಸಬೇಕಾದ ನಿಯಮಗಳೇನು?

ಸಾಮಾನ್ಯವಾಗಿ ಕಾರಿನಲ್ಲಿ ವಿಗ್ರಹಗಳನ್ನು ಇಡುತ್ತೇವೆ. ಇದು ಸರಿಯೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ? ಎನ್ನುವ ಪ್ರಸ್ನೆ ನಿಮ್ಮಲ್ಲೂ ಉದ್ಬವಿಸಿರಬಹುದು. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹಗಳನ್ನು ಇಡುವಾಗ ಪಾಲಿಸಬೇಕಾದ ನಿಯಮಗಳನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು. ಇದರಿಂದ ಜೀವನದಲ್ಲಿ ಯಾವುದೇ ನಕಾರಾತ್ಮಕ ಪರಿಣಾಮಗಳು ಉಂಟಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.

ಕಾರಿನಲ್ಲಿ ದೇವರ ವಿಗ್ರಹ ಇಡುವುದು ಸರಿಯೇ?

ಬೆಂಗಳೂರು: ಮನೆ, ಕೆಲಸದ ಸ್ಥಳ ಮತ್ತು ವಾಹನಗಳಲ್ಲಿ ಪ್ರತಿಯೊಬ್ಬರು ತಮ್ಮ ಇಷ್ಟ ದೇವರ ವಿಗ್ರಹ ಅಥವಾ ಚಿತ್ರಗಳನ್ನು ಇಡುವುದು ಸಂಪ್ರದಾಯ. ಅದರಲ್ಲೂ ಮನೆಯಲ್ಲಿ ಕಾರಿದ್ದರೆ (Vastu for car) ಅದರ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹವನ್ನು ಇಡುವುದು ಸಾಮಾನ್ಯ. ಹೊಸ ಕಾರು (vastu for new car) ಖರೀದಿಸಿದಾಗ ನಾವು ಅದರಲ್ಲಿ ಗಣೇಶ, ಹನುಮಾನ್, ಶ್ರೀಕೃಷ್ಣ, ಶಿವಲಿಂಗ, ಲಕ್ಷ್ಮೀ, ದುರ್ಗೆ... ಹೀಗೆ ಅವರವರ ಇಷ್ಟ ಮತ್ತು ಭಕ್ತಿಗೆ ಅನುಗುಣವಾಗಿ ವಿಗ್ರಹವನ್ನು ಸ್ಥಾಪಿಸುತ್ತಾರೆ. ಇದು ಕಾರನ್ನು, ಕಾರಿನಲ್ಲಿ ಪ್ರಯಾಣಿಸುವವರನ್ನು ಸುರಕ್ಷಿತವಾಗಿ ಇರಿಸುತ್ತದೆ ಎನ್ನುವ ನಂಬಿಕೆ. ಆದರೆ ವಾಸ್ತು ಶಾಸ್ತ್ರದ (vastu tips) ಪ್ರಕಾರ ಇದು ಸರಿಯೇ? ಈ ಬಗ್ಗೆ ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಅವರು ಹೇಳುವುದು ಹೀಗೆ...

ದೇವರ ವಿಗ್ರಹವನ್ನು ಯಾವುದೇ ಸ್ಥಳದಲ್ಲಿ ಇಡುವ ಮೊದಲು ಕೆಲವು ವಿಶೇಷ ನಿಯಮಗಳನ್ನು ಪಾಲಿಸುವುದು ಅವಶ್ಯಕ. ನಾವು ನಮ್ಮ ಮನೆ ಅಥವಾ ವಾಹನದಲ್ಲಿ ವಿಗ್ರಹವನ್ನು ಸ್ಥಾಪಿಸಿದಾಗ ಅದಕ್ಕೆ ಸರಿಯಾದ ಗೌರವ ಮತ್ತು ಪೂಜೆಯನ್ನು ನೀಡುವುದು ಅಗತ್ಯ. ದೇವರ ವಿಗ್ರಹವನ್ನು ಕಾರಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಅಪಘಾತಗಳಿಂದ ರಕ್ಷಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ವಾಹನದಲ್ಲಿ ಪ್ರಯಾಣಿಸುವವರಿಗೆ ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ಅಪಘಾತವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ದೇವರ ವಿಗ್ರಹವನ್ನು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟರೆ ಅದು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

car11

ಯಾವ ದೇವರು ಸೂಕ್ತ?

ಕಾರಿನಲ್ಲಿ ಕೆಲವೊಂದು ದೇವರ ವಿಗ್ರಹಗಳನ್ನು ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಗಣೇಶನ ವಿಗ್ರಹವನ್ನು ಇಟ್ಟರೆ ಅಡೆತಡೆಗಳು ಪ್ರಯಾಣದಲ್ಲಿ ದೂರವಾಗುತ್ತದೆ. ಹನುಮಾನ್ ಚಿತ್ರವನ್ನು ಇಡುವುದರಿಂದ ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಶ್ರೀ ಹರಿಯನ್ನು ವಾಹನದಲ್ಲಿ ಇಡುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಶಿವಲಿಂಗವನ್ನು ಕಾರಿನಲ್ಲಿ ಇಡುವುದರಿಂದ ಶಾಂತಿ ದೊರೆಯುತ್ತದೆ. ಲಕ್ಷ್ಮಿ ದೇವಿಯನ್ನು ವಾಹನದಲ್ಲಿ ಇಡುವುದರಿಂದ ಆರ್ಥಿಕ ಬೆಳವಣಿಗೆಯಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ನಿಯಮಗಳೇನು ?

ಕಾರಿನಲ್ಲಿ ದೇವರ ವಿಗ್ರಹ ಇಡುವುದಾದರೆ ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ ವಿಗ್ರಹವನ್ನು ಸ್ವಚ್ಛಗೊಳಿಸಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ದೇವರ ವಿಗ್ರಹವನ್ನು ಕೊಳಕು ಅಥವಾ ಅಶುದ್ಧ ಸ್ಥಳದಲ್ಲಿ ಇಡಬಾರದು. ಯಾವಾಗಲೂ ಸ್ವಚ್ಛ ಮತ್ತು ಗೌರವಾನ್ವಿತ ಸ್ಥಳದಲ್ಲಿ ಇರಿಸಬೇಕು.

ಕಾರಿನೊಳಗೆ ಇರಿಸಲಾಗಿರುವ ವಿಗ್ರಹದ ಬಳಿ ಎಂದಿಗೂ ದೀಪ ಅಥವಾ ಧೂಪದ್ರವ್ಯವನ್ನು ಬೆಳಗಿಸಬಾರದು. ಇದು ಅಪಾಯವನ್ನು ಹೆಚ್ಚಿಸುತ್ತದೆ. ವಾಹನದಲ್ಲಿ ವಿಗ್ರಹ ಅಥವಾ ಫೋಟೊಗಳನ್ನು ಮಾತ್ರ ಇಡುವುದು ಸೂಕ್ತ.

ಕಾರಿನಲ್ಲಿ ಇಡುವ ವಿಗ್ರಹದ ಗಾತ್ರ ಚಿಕ್ಕದಾಗಿರಬೇಕು. ದೊಡ್ಡ ಗಾತ್ರದ ವಿಗ್ರಹಗಳು ಚಾಲಕರ ಗಮನವನ್ನು ಸೆಳೆದು ಅಪಾಯವನ್ನು ಉಂಟು ಮಾಡಬಹುದು.

ಇದನ್ನೂ ಓದಿ: Vastu Tips: ಕಾರಿನಲ್ಲಿ ಯಾವ ದೇವರ ವಿಗ್ರಹ ಇಡಬೇಕು?

ದೇವರ ವಿಗ್ರಹವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಮುಖ್ಯ. ದೇವರ ವಿಗ್ರಹದ ಮೇಲೆ ಧೂಳು ಅಥವಾ ಕೊಳಕು ಉಂಟಾಗಲು ಬಿಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು.

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಒಂದು ಅಥವಾ ಎರಡು ಪ್ರತಿಮೆಗಳನ್ನು ಮಾತ್ರ ಇಡಬೇಕು. ಹೆಚ್ಚು ಪ್ರತಿಮೆಗಳನ್ನು ಇಡುವುದರಿಂದ ಶಕ್ತಿಯಲ್ಲಿ ಅಸಮತೋಲನ ಉಂಟಾಗುತ್ತದೆ.

ಅಪಘಾತಕ್ಕೆ ತಡೆ?

ವಾಹನದಲ್ಲಿ ದೇವರ ವಿಗ್ರಹವನ್ನು ಇಡುವುದರಿಂದ ಅಪಘಾತಗಳಿಂದ ರಕ್ಷಿಸುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ ಇದು ಸಂಪೂರ್ಣವಾಗಿ ನಮ್ಮ ನಂಬಿಕೆಯನ್ನು ಅವಲಂಬಿಸಿರುತ್ತದೆ. ವಿಗ್ರಹವನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು. ಚಾಲಕರಿಗೆ ಅಗತ್ಯವಾಗಿ ಬೇಕಾಗಿರುವ ಮಾನಸಿಕ ಶಾಂತಿಯನ್ನು ಇದು ಒದಗಿಸುತ್ತದೆ.