Chanakya Niti: ನಿಮ್ಮ ಈ ಗುಣಗಳು ಯಶಸ್ಸಿಗೆ ಅಡ್ಡಿಯಾಗುತ್ತವೆ ಎಂದಿದ್ದಾರೆ ಚಾಣಕ್ಯ
ಓರ್ವ ವ್ಯಕ್ತಿ ಯಶಸ್ಸನ್ನು ಸಾಧಿಸಲು ಆತನ ಕಠಿಣ ಪರಿಶ್ರಮ ಮಾತ್ರವಲ್ಲ, ಈ ಎಲ್ಲಾ ದುರ್ಗುಣಗಳನ್ನು ತ್ಯಜಿಸುವುದು ಕೂಡ ಅವಶ್ಯಕವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಬಯಸುವವರು ಚಾಣಕ್ಯ ನೀತಿಯಲ್ಲಿ (Chanakya Niti) ಉಲ್ಲೇಖಿಸಿರುವ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ.
ಆಚಾರ್ಯ ಚಾಣಕ್ಯ -
ಆಚಾರ್ಯ ಚಾಣಕ್ಯರು (Chanakya) ಅಪಾರ ಬುದ್ಧಿ ಶಕ್ತಿವುಳ್ಳ ಹಾಗೂ ಜ್ಞಾನಸಂಪನ್ನ ವಿದ್ವಾಂಸರಾಗಿ ಖ್ಯಾತಿಯನ್ನು ಪಡೆದಿದ್ದಾರೆ. ನಮ್ಮ ನಿಮ್ಮೆಲ್ಲರ ಪೂರ್ವಜರ ಕಾಲದಿಂದಲೂ ಅವರ ತತ್ವಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಅವರ ಜೀವನದಲ್ಲಿ ಪಾಲಿಸಿದ ಅನೇಕ ನೀತಿಗಳು ಇಂದು ‘ಚಾಣಕ್ಯ ನೀತಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಬಯಸುವವರು ಚಾಣಕ್ಯ ನೀತಿಯಲ್ಲಿ (Chanakya ನೀತಿ) ಉಲ್ಲೇಖಿಸಿರುವ ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆದ್ದರೆ ಯಶಸ್ಸಿನ(SuccessTips) ಉತ್ತುಂಗಕ್ಕೆ ಏರಬಹುದಾಗಿದೆ.
ಹಾಗೇ ಓರ್ವ ವ್ಯಕ್ತಿ ಯಶಸ್ಸನ್ನು ಸಾಧಿಸಲು ಆತನ ಕಠಿಣ ಪರಿಶ್ರಮ ಮಾತ್ರವಲ್ಲ, ಈ ಎಲ್ಲಾ ಗುಣಗಳನ್ನು ಕೂಡ ಅವಶ್ಯಕವಾಗಿ ತ್ಯಜಿಸ ಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಸೋಮಾರಿತನ
ಚಾಣಕ್ಯರ ದೃಷ್ಟಿಯಲ್ಲಿ, ಯಶಸ್ಸು ಮತ್ತು ಸಮೃದ್ಧಿಯನ್ನು ಬಯಸುವವರು ಮೊದಲು ಸೋಮಾರಿತನವನ್ನು ಬಿಟ್ಟುಬಿಡಬೇಕು. ಸೋಮಾರಿತನ ಆ ವ್ಯಕ್ತಿಯ ಪ್ರಗತಿಯನ್ನು ಕುಂಠಿತ ಮಾಡಲಿದ್ದು, ಇದು ಆ ವ್ಯಕ್ತಿಯನ್ನು ನಿಧಾನವಾಗಿ ಪತನದತ್ತ ಕರೆದೊಯ್ಯುತ್ತದೆ. ಶ್ರಮ ಮತ್ತು ಚುರುಕುತನದಿಂದ ಮಾತ್ರ ಬದುಕಿನಲ್ಲಿ ಗುರಿಗಳನ್ನು ಸಾಧಿಸಬಹುದು ಎಂದು ಚಾಣಕ್ಯ ಹೇಳುತ್ತಾರೆ.
ಅಹಂಕಾರ
ಚಾಣಕ್ಯ ನೀತಿಯ ಪ್ರಕಾರ ಯಾವ ವ್ಯಕ್ತಿ ಅಹಂಕಾರ ಗುಣವನ್ನು ಹೊಂದಿರುತ್ತಾನ್ನೋ ಅವನು ಎಂದಿಗೂ ತನ್ನ ಜೀವನದಲ್ಲಿ ಗೆಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಯಾವ ವ್ಯಕ್ತಿ ಯಶಸ್ಸನ್ನು ಪಡೆದುಕೊಳ್ಳುವ ಗುರಿಯನ್ನು ಇಟ್ಟುಕೊಂಡಿರುತನೋ ಅವನು ಮೊದಲು ‘ನಾನು’ ಎಂಬ ಅಹಂ ಭಾವನೆ ಹಾಗೂ ಸ್ವಾರ್ಥವನ್ನು ದೂರ ಮಾಡಬೇಕು. ಅಹಂಕಾರವು ಮನುಷ್ಯನನ್ನು ಸಂಬಂಧಗಳಿಂದ ಮತ್ತು ಅವಕಾಶಗಳಿಂದ ದೂರ ಮಾಡುತ್ತದೆ. ವಿನಯಶೀಲತೆಯ ಮೂಲಕವೇ ಸಾಧನೆ ಸಾಧ್ಯ ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ.
ಈ ಸುದ್ದಿಯನ್ನು ಓದಿ: Vastu Tips: ನಿಮ್ಮ ಮನೆಯ ಮುಂದೆ ಈ 1 ಗಿಡ ಇದ್ದರೂ ಆರ್ಥಿಕ ನಷ್ಟ ತಪ್ಪಿದ್ದಲ್ಲ
ದುರಾಸೆ
ಚಾಣಕ್ಯ ನೀತಿ ಹೇಳುವುದೇನಂದರೆ, ದುರಾಸೆ ಮನೋಭಾವ ಉಳ್ಳವರು ಬೇಗನೆ ಹಿನ್ನಡೆಗೆ ಯಾಗುತ್ತಾರೆ. ದುರಾಸೆ ಮನುಷ್ಯನ ಮನಸ್ಸನ್ನು ಅಶಾಂತಗೊಳಿಸಲ್ಲಿದ್ದು, ಮನಸ್ಸಿನಲ್ಲಿ ತೃಪ್ತಿ ಮತ್ತು ಹಂಚಿಕೊಳ್ಳುವ ಗುಣ ಇದ್ದಾಗ ಮಾತ್ರ ಸಂತೋಷ ಹಾಗೂ ಯಶಸ್ಸು ಸಾಧ್ಯವಾಗುತ್ತದೆ.
ಸುಳ್ಳು ಹೇಳುವ ಅಭ್ಯಾಸ
ಜೀವನದಲ್ಲಿ ಶಾಶ್ವತ ಯಶಸ್ಸನ್ನು ಬಯಸುವವರು ಸುಳ್ಳಿನ ಮೇಲೆ ತಮ್ಮ ಜೀವನವನ್ನು ಕಟ್ಟಬಾರದು. ಸುಳ್ಳು ತಾತ್ಕಾಲಿಕವಾಗಿ ಗೆಲವು ಖುಷಿಯನ್ನು ಕೊಡಲಿದ್ದು, ದೀರ್ಘಾವಧಿಯಲ್ಲಿ ಅದು ಹಾನಿಯಷ್ಟೇ ಮಾಡುತ್ತದೆ. ನಿಷ್ಠೆ ಮತ್ತು ಸತ್ಯವಂತಿಕೆಯಿಂದ ನಡೆದುಕೊಂಡಾಗ ಮಾತ್ರ ನಿಜವಾದ ಗೌರವ ಸಿಗುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಆಡಂಬರ
ಚಾಣಕ್ಯ ನೀತಿಯಲ್ಲಿ ವಿವರಿಸಲಾದ ಮಾಹಿತಿಯ ಪ್ರಕಾರ ಯಾವ ವ್ಯಕ್ತಿ ಅತಿಯಾದ ಹೊಗಳಿಕೆಯನ್ನು ಬಯಸುತ್ತನಾಯೋ, ಆಡಂಬರವನ್ನು ಅಪೇಕ್ಷೆಸುತಾನೋ ಅವನಿಗೆ ಯಶಸ್ಸು ಸುಲಭವಾಗಿ ದೊರೆಯುವುದಿಲ್ಲ ಚಾಣಕ್ಯರು ಹೇಳಿರುವಂತೆ, ಅತಿಯಾದ ಆಡಂಬರ ಹಾಗೂ ಹೊಗಳಿಕೆ ಮನುಷ್ಯನಲ್ಲಿ ಅಹಂ ಭಾವನೆಯನ್ನು ಹುಟ್ಟಿ ಹಾಕುತ್ತದೆ. ಇದು ಆ ವ್ಯಕ್ತಿಯ ಏಳಿಗೆ ಮೇಲೆ ಪ್ರಭಾವ ಬೀರುತ್ತದೆ. ಅದೇ ಯಾವ ವ್ಯಕ್ತಿ ತನ್ನ ಜೀವನದಲ್ಲಿ ವಿನಯಶೀಲ ನಿಯಮವನ್ನು ಅಳವಡಿಸಿಕೊಳ್ಳುತ್ತಾನೋ ಆತ ಯಶಸ್ಸಿನತ್ತ ಹೆಜ್ಜೆ ಹಾಕುತ್ತಾನೆ. ಆಡಂಬರದ ಸ್ವಭಾವ ಇರುವ ಮನುಷ್ಯನನ್ನು ನಿಧಾನವಾಗಿ ಸೋಲಿನ ಹಂಚಿಗೆ ದೂಡುತ್ತದೆ.