‌Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ

ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿತಲ್ಲ ಎಂದು ಮಮ್ಮಲ ಮರುಗಿದನು. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಿ

Loss
Profile Ashok Nayak January 22, 2025

Source : Vishwavani Daily News Paper

ಒಂದೊಳ್ಳೆ ಮಾತು

Roopa Gururaj

ರೂಪಾ ಗುರುರಾಜ್

ಪಾಪಯ್ಯ ಬಟ್ಟೆಗಳ ವ್ಯಾಪಾರಿ, ಪರಮಲೋಭಿ, ಮತ್ತು ಮಹಾ ಜಿಪುಣ.ಒಂದು ದಿನ ಆ ಊರಿನ ಜಮೀನ್ದಾರನ ಮಗನ ಮದುವೆಗೆ ಪಾಪಯ್ಯನಿಗೂ ಆಹ್ವಾನ ಪತ್ರಿಕೆ ಬಂತು. ಎಲ್ಲರೂ ಜಮೀನ್ದಾ ರರ ಮೇಲಿರುವ ಗೌರವದಿಂದ ಬೆಲೆ ಬಾಳುವ ಕಾಣಿಕೆಗಳನ್ನು ಕೊಳ್ಳುತ್ತಿದ್ದರು.

ಪಾಪಯ್ಯ ಕಾಣಿಕೆ ಕೊಡದೆ ಮದುವೆಗೆ ಹೋಗಬೇಕೆಂದು ಆಲೋಚಿಸಲು ಆರಂಭಿಸಿದನು. ಹೇಗಾ ದರೂ ಹಣ ಉಳಿಸಬೇಕು ಆದರೆ ಜಮೀನ್ದಾರರಿಗೆ ಗೊತ್ತಾಗಬಾರದು ಎಂದುಕೊಂಡನು. ಕಡೆಗೆ ಒಂದು ಉಪಾಯ ತೋರಿತು. ಮದುವೆಗೆ ತುಂಬ ಜನ ಬರುತ್ತಾರೆ. ಆ ಗಡಿಬಿಡಿಯಲ್ಲಿ ಯಾರು ಯಾವ ಕಾಣಿಕೆ ತಂದಿದ್ದಾರೆಂದು ತಿಳಿಯುವುದಿಲ್ಲ.

ಅದರ ಬಗ್ಗೆ ಲಕ್ಷ್ಯ ಕೊಡುವುದೂ ಇಲ್ಲ. ಅದರಿಂದ ತನ್ನ ಸ್ನೇಹಿತ ರಾಮಯ್ಯ ಹೇಗೂ ಮದುವೆಗೆ ಕಾಣಿಕೆ ಕೊಂಡುಕೊಂಡೇ ಇರುತ್ತಾನೆ. ಆ ಕಾಣಿಕೆಯೊಂದಿಗೆ ತನಗೆ ತೋಚಿದ ಯಾವುದಾದರೂ ಚಿಕ್ಕ ವಸ್ತುವನ್ನು ಕಾಣಿಕೆಯಾಗಿಟ್ಟು ಇಬ್ಬರದ್ದೂ ಸೇರಿಸಿ ಕೊಟ್ಟರೆ ಮುಗಿಯಿತು ಎಂದುಕೊಂಡನು.

ಅಂದುಕೊಂಡ ಹಾಗೇನೇ ರಾಮಯ್ಯನ ಹತ್ತಿರ ಹೋಗಿ ಕೇಳಿದನು. ಅದಕ್ಕೆ ಆತನು ಜಮೀನ್ದಾರರು ನನ್ನನ್ನು ಮಂಚಿತವಾಗಿಯೇ ಬಂದು ಮದುವೆ ಕಲಸಗಳನ್ನು ನೋಡಿಕೊಳ್ಳಲು ಹೇಳಿದ್ದಾರೆ. ದರಿಂದ ನಾನು ಮೊದಲೇ ಹೋಗುತ್ತೇನೆ. ನೀನು ನಮ್ಮಿಬ್ಬರ ಕಾಣಿಕೆಗಳನ್ನು ಸೇರಿಸಿ ತೆಗೆದುಕೊಂಡು ಬಾ ಎಂದನು.

ಪಾಪಯ್ಯ ಮನೆಗೆ ಬಂದು ರಾಮಯ್ಯ ಕೊಟ್ಟ ಕಾಣಿಕೆ ಪೆಟ್ಟಿಯನ್ನು ತೆರೆದು ನೋಡಿದನು. ದರಲ್ಲಿ ಅಮೃತ ಶಿಲೆಯಿಂದ ಮಾಡಿದ ಕೃಷ್ಣನ ವಿಗ್ರಹವಿತ್ತು. ಅಷ್ಟರಲ್ಲಿ ಪಾಪಯ್ಯನ ಚಿಕ್ಕ ಮಗ ಓಡುತ್ತಾ ಬಂದು ಬೊಂಬೆ ತುಂಬ ಚೆನ್ನಾಗಿದೆ. ನಾನು ಆಡಿಕೊಳ್ಳುತ್ತೇನೆ ಎಂದು ಕೇಳಿದನು.

ಪಾಪಯ್ಯನ ಮಗುವಿನೊಂದಿಗೆ ‘ಇದು ನಮ್ಮ ವಸ್ತು ಅಲ್ಲ, ಇದರೊಂದಿಗೆ ಆಡಿಕೊಳ್ಳುವಾಗ ಕೈ ಜಾರಿ ಕೆಳಗೆ ಬಿದ್ದರೆ ಮುರಿದು ಹೋಗುತ್ತದೆ. ನಾನು ಹೊಸ ಬೊಂಬೆಯನ್ನು ತೆಗೆದು ಕೊಡುತ್ತೇನೆ’ ಎಂದನು. ಆದರೂ ಮಗು ಕೇಳದೆ, ಪಾಪಯ್ಯನ ಕೈಯಲ್ಲಿರುವ ಬೊಂಬೆಯನ್ನು ಕಿತ್ತುಕೊಂಡು ಪಕ್ಕದ ಕೋಣೆಗೆ ಓಡಿ ಹೋಯಿತು. ಬೊಂಬೆ ಎಲ್ಲಿ ಮುರಿದು ಹೋಗುವುದೋ ಎಂಬ ಭಯದಿಂದ ಪಾಪಯ್ಯ ಓಡಿ ಹೋಗಿ ಮಗುವನ್ನು ಮುದ್ದಿಸಿ, ಮೆಲ್ಲನೆ ಬೊಂಬೆಯನ್ನು ತೆಗೆದುಕೊಂಡು ಬೇಗ ಬೇಗ ಪೆಟ್ಟಿಗೆಯಲ್ಲಿಟ್ಟು ಅದರ ಸುತ್ತಲೂ ಹುಲ್ಲನ್ನು ಹರಡಿ, ಮೇಲೆ ಬಣ್ಣದ ಕಾಗದಗಳಿಂದ ಅಲಂ ಕರಿಸಿ, ಅದರ ಮೇಲೆ ಪಾಪಯ್ಯ, ರಾಮಯ್ಯ ಎಂದು ಇಬ್ಬರ ಹೆಸರು ಬರೆದು ಮದುವೆಗೆ ಹೊರಟನು.

ಮದುವೆ ಮನೆಯಲ್ಲಿ ಎಲ್ಲರಿಗಿಂತ ಮುಂಚೆ ಹೋಗಿ ತಾನೇ ವಧುವರರಿಗೆ ಕಾಣಿಕೆ ಕೊಟ್ಟನು. ಜಮೀನ್ದಾರರ ಗುಮಾಸ್ತ ಯಾರ ಯಾರ ಹೆಸರಿನಲ್ಲಿ ಏನೇನು ಕಾಣಿಕೆಗಳು ಬಂದಿದೆ ಎಂದು ತಿಳಿದು ಕೊಳ್ಳಲು ಪೆಟ್ಟಿಗೆಗಳನ್ನೆಲ್ಲ ಬಿಚ್ಚಿತೊಡಗಿದನು. ಆದರೆ ಪೆಟ್ಟಿಗೆಯನ್ನು ಪೂರ್ತಿಯಾಗಿ ಬಿಚ್ಚಿದ ಮೇಲೆ ಪಾಪಯ್ಯನ ಗುಂಡಿಗೆ ಹಠಾತ್ತನೆ ನಿಂತಂತಾಯಿತು. ಆ ಸಮಯಕ್ಕೆ ರಾಮಯ್ಯ ಸಹ ಅಲ್ಲಿಗೆ ಬಂದನು.

ಗುಮಾಸ್ತ ಪೆಟ್ಟಿಗೆಯಿಂದ ಅಮೃತ ಶಿಲೆಯ ಕೃಷ್ಣನ ಬೊಂಬೆ ತೆಗೆದನು. ಬೊಂಬೆಯ ಕೊರಳಲ್ಲಿ ತಳತಳನೆ ಹೊಳೆಯುತ್ತಿರುವ ಚಿನ್ನದ ಸರ ಇದೆ. ರಾಮಯ್ಯ ಗುಮಾಸ್ತೆಯೊಂದಿಗೆ ಆ ಅಮೃತ ಶಿಲೆಯ ಕೃಷ್ಣ ನನ್ನ ಕಾಣಿಕೆ, ಆ ಚಿನ್ನದ ಸರ ಪಾಪಯ್ಯನ ಕಾಣಿಕೆ ಎಂದು ಹೇಳಿದನು. ಆಗ ಪಾಪಯ್ಯ ಕೆಂಡ ತುಳಿದವನಂತೆ ಬೆಚ್ಚಿದನು. ಆ ಮಾಲೆಯನ್ನು ನೋಡಿ ಆತನ ಮುಖದಲ್ಲಿ ರಕ್ತ ಬತ್ತಿ ಹೋಯಿತು.

ಅದು ತನ್ನ ಮಗನ ಕುತ್ತಿಗೆಯಲ್ಲಿದ್ದ ಚಿನ್ನದ ಸರ. ಬೊಂಬೆಯೊಂದಿಗೆ ಆಡಿಕೊಳ್ಳುತ್ತಿರುವಾಗ ಆ ಸರವನ್ನು ತೆಗೆದು ವಿಗ್ರಹಕ್ಕೆ ಹಾಕಿರಬೇಕು. ತಾನು ಭಯ, ಗಡಿಬಿಡಿ, ಆತುರಗಳಲ್ಲಿ ಆ ಬೊಂಬೆ ಯನ್ನು ತೆಗೆದು ಪೆಟ್ಟಿಗೆಯಲ್ಲಿಟ್ಟು ಹುಲ್ಲು ಮುಚ್ಚಿ, ಬಣ್ಣ ಬಣ್ಣದ ಕಾಗದಗಳೊಂದಿಗೆ ಸುತ್ತಿ ಅಲಂಕರಿಸಿಬಿಟ್ಟಿದ್ದಾನೆ.

ಅಯ್ಯೋ! ಎಂತಹ ಮನೆ ಹಾಳು ಕೆಲಸವಾಯಿತು. ಅನ್ಯಾಯವಾಗಿ ಚಿನ್ನದ ಸರ ಕೈ ಬಿಟ್ಟು ಹೋಯಿತಲ್ಲ ಎಂದು ಮಮ್ಮಲ ಮರುಗಿದನು. ಅತಿಯಾದ ಬುದ್ಧಿವಂತಿಕೆ ಉಪಯೋಗಿಸಿ ಹಣ ಉಳಿಸಲು ವಾಮಮಾರ್ಗಕ್ಕೆ ಇಳಿದರೆ, ಅದರ ಎರಡರಷ್ಟು ಖರ್ಚಾಗಿರುತ್ತದೆ. ಹಣದ ಮೋಹ ಒಳ್ಳೆಯದಲ್ಲ, ಸಂಬಂಧಗಳಿಗೆ ಬೆಲೆ ಕೊಡಿ.

ಇದನ್ನೂ ಓದಿ: Roopa Gururaj Column: ಚಮತ್ಕಾರ ಮತ್ತು ಆಧ್ಯಾತ್ಮಿಕತೆ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ