Roopa Gururaj Column: ಚಮತ್ಕಾರ ಮತ್ತು ಆಧ್ಯಾತ್ಮಿಕತೆ
ರಾಮಕೃಷ್ಣರು, ದಕ್ಷಿಣೇಶ್ವರದ ಗಂಗಾನದಿಯ ತಟದಲ್ಲಿ ಕುಳಿತು ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುತ್ತಿದ್ದರು. ಪರಮಹಂಸರ ಧಾರ್ಮಿಕತೆ, ತನ್ನ ಚಮತ್ಕಾರದ ಮುಂದೆ ಏನೂ ಲೆಕ್ಕಕ್ಕಿಲ್ಲ ವೆಂದು ತಿಳಿದು ನೀರಿನಲ್ಲಿ ನೆಡೆಯುವ ತನ್ನ ಚಮತ್ಕಾರವನ್ನು ಅವರಲ್ಲಿ ಪ್ರದರ್ಶಿಸಬೇಕೆಂಬ ಆಸೆ ಈ ಮನುಷ್ಯನಿಗೆ. ಆತ ಬಲು ಗರ್ವದಿಂದ ಪರಮಹಂಸರನ್ನು ಕೇಳಿ


ಒಂದೊಳ್ಳೆ ಮಾತು
ರೂಪಾ ಗುರುರಾಜ್
ಅತ್ಯಂತ ಸರಳ ವ್ಯಕ್ತಿಯಾದ ರಾಮಕೃಷ್ಣ ಪರಮಹಂಸರ ಬಳಿಗೆ, ಒಂದು ಸಲ ಸ್ವಲ್ಪ ಚಮತ್ಕಾರ ಗಳನ್ನೆಲ್ಲ ಬಲ್ಲ ವ್ಯಕ್ತಿಯೊಬ್ಬ ಬಂದ. ಅವನಿಗೆ ಪರಮಹಂಸರ ಎದಿರು ತಾನು ಕಲಿತ ಚಮತ್ಕಾ ರದ ಪ್ರದರ್ಶನ ಮಾಡಿ, ಅವರಿಗಿಂತ ತಾನೇನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿ ಕೊಳ್ಳುವ ಆಸೆ.
ರಾಮಕೃಷ್ಣರು, ದಕ್ಷಿಣೇಶ್ವರದ ಗಂಗಾನದಿಯ ತಟದಲ್ಲಿ ಕುಳಿತು ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುತ್ತಿದ್ದರು. ಪರಮಹಂಸರ ಧಾರ್ಮಿಕತೆ, ತನ್ನ ಚಮತ್ಕಾರದ ಮುಂದೆ ಏನೂ ಲೆಕ್ಕಕ್ಕಿಲ್ಲ ವೆಂದು ತಿಳಿದು ನೀರಿನಲ್ಲಿ ನೆಡೆಯುವ ತನ್ನ ಚಮತ್ಕಾರವನ್ನು ಅವರಲ್ಲಿ ಪ್ರದರ್ಶಿಸಬೇಕೆಂಬ ಆಸೆ ಈ ಮನುಷ್ಯನಿಗೆ. ಆತ ಬಲು ಗರ್ವದಿಂದ ಪರಮಹಂಸರನ್ನು ಕೇಳಿದ.
‘ಆಗಿನಿಂದ ಈ ಮರದ ಕೆಳಗೆ ಕುಳಿತು ನೀವೇನು ಮಾಡುತ್ತಿರುವಿರಿ? ಗಂಗಾ ನದಿಯ ನೀರಿನಲ್ಲಿ ಇಬ್ಬರೂ ನಡೆದಾಡುತ್ತಾ ಆಚೆ ದಡಕ್ಕೆ ಹೋಗೋಣ ಬನ್ನಿ’ ಎಂದು ಕರೆದ. ‘ಆಗ ಪರಮಹಂಸರು ನೀವು ಬಹಳ ದೂರದಿಂದ ಬಂದಿರುವಿರಿ ಸ್ವಲ್ಪ ಸಮಯ ಸುಧಾರಿಸಿಕೊಳ್ಳಿ ನಂತರ ಗಂಗಾ ನದಿಯ ಮೇಲೆ ಓಡಾಡುವುದು ಇದ್ದೇ ಇದೆ’ ಎಂದು ಹೇಳಿದರು.
ನಿಜವಾದ ಆಧ್ಯಾತ್ಮಿಕ ಗುರುಗಳ್ಯಾರೂ, ಚಮತ್ಕಾರ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗುವುದಿಲ್ಲ. ಹಾಗೇ ನಾದರೂ ಅವರಿಗೆ ಚಮತ್ಕಾರ ಗೊತ್ತಿದ್ದರೂ ಅವರು ಅದನ್ನು ಎಲ್ಲರೆ ದುರು ರುಜುವಾತು ಪಡಿಸಲು ಹೋಗುವುದಿಲ್ಲ. ಇಂಥ ಸೂಕ್ಷ್ಮ ವಿಷಯಗಳನ್ನ ತಿಳಿದು ಕೊಂಡಾಗ ನಾವು ನಮ್ಮ ಆಧ್ಯಾತ್ಮ ಗುರುಗಳನ್ನ ಆರಿಸುವುದರಲ್ಲಿ ಹೆಚ್ಚು ಎಚ್ಚರವಹಿಸುತ್ತೇವೆ. ಯಾವುದೇ ಗುರುಗಳು ಜೀವನದಲ್ಲಿ ನಮಗೆ ಭಗವಂತನನ್ನು ತಲುಪಲು ಅವನ ಕೃಪೆಯನ್ನು ಪಡೆಯಲು ಸರಿಯಾದ ಮಾರ್ಗವನ್ನು ಸೂಚಿಸುತ್ತಾರೆ.ನ್ನಿಂದ ಕೇಳುವುದಿಲ್ಲ. ನಾನೊಬ್ಬ ಬಡವನೆಂದು ಅವನಿಗೆ ಗೊತ್ತಿದೆ. ನೀವು ಮೂವತ್ತಾರು ವರ್ಷ ಕಷ್ಟಪಟ್ಟು ಕಲಿತ ಈ ನದಿ ದಾಟುವ ಚಮತ್ಕಾರದ ವಿದ್ಯೆಗೆ ಇಲ್ಲಿ ಎರಡು ಪೈಸೆಯ ಬೆಲೆಯೂ ಇಲ್ಲವಲ್ಲ’ ಎಂದು ಹೇಳಿದರು.
ನಿಮಗೆ ಕೇವಲ ನದಿಯ ನೀರಿನ ಮೇಲೆ ನಡೆದಾಡುವ ಚಮತ್ಕಾರದ ಕಲೆ ಗೊತ್ತಿದೆ ಎಂದ ಮಾತ್ರಕ್ಕೆ ಒಬ್ಬ ಮಹಾ ಅಧ್ಯಾತ್ಮಿಕ ವ್ಯಕ್ತಿ ಎಂದೇನೂ ಭಾವಿಸಬೇಡಿ. ನಿಮ್ಮ ಚಮತ್ಕಾರದ ಕಲೆಯಲ್ಲಿ ದಿವ್ಯತೆ ಯ ಹೊಳಪಾಗಲಿ ಧಾರ್ಮಿಕತೆಯ ಇಣುಕು ನೋಟವಾಗಲಿ ಇರುವುದಿಲ್ಲ. ಈ ನಿಮ್ಮ ಚಮತ್ಕಾರ ದ ಕಲೆ ನಿಮ್ಮ ಅಹಂಕಾರಕ್ಕೆ ಇನ್ನಷ್ಟು ಪುಷ್ಟಿಯನ್ನು ಕೊಡ ಬಹುದಷ್ಟೇ. ಅದರಿಂದ ಬೇರೆ ಯಾವ ಉಪಯೋಗವೋ ಇಲ್ಲ. ಬೇರೆ ಯಾರೂ ಮಾಡದಿರುವ ಚಮತ್ಕಾರವನ್ನು ನೀವು ಮಾಡುತ್ತಿರುವಿರಿ ಎಂಬ ಗರ್ವ ನಿಮ್ಮ ಮನದಲ್ಲಿ ನೆಲೆಯೂರಿ ಬಿಟ್ಟಿದೆ.
ಪರಮಾತ್ಮನ ಬಳಿಗೆ ಸಾಗುವ ವಿಷಯವಂತೂ ಇನ್ನು ನಿಮಗೆ ಬಲು ದೂರದ ಮಾತಾಯಿತು ಎಂದರು. ತಾನು ಮಹಾ ಚಮತ್ಕಾರಿ ವಿದ್ಯೆಯನ್ನು ಕಲಿತ ಮನುಷ್ಯನೆಂದು ಅಹಂಕಾರ ಪಡುತ್ತಿದ್ದ ಆ ವ್ಯಕ್ತಿಗೆ, ಪರಮಹಂಸರ ಮಾತಿನಿಂದ ಅಹಂಕಾರಕ್ಕೆ ಪೆಟ್ಟು ಬಿದ್ದು ತಲೆತಗ್ಗಿಸುವಂತಾಯಿತು.
ನಿಜವಾದ ಆಧ್ಯಾತ್ಮಿಕ ಗುರುಗಳ್ಯಾರೂ, ಚಮತ್ಕಾರ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಹೋಗುವುದಿಲ್ಲ. ಹಾಗೇನಾದರೂ ಅವರಿಗೆ ಚಮತ್ಕಾರ ಗೊತ್ತಿದ್ದರೂ ಅವರು ಅದನ್ನು ಎಲ್ಲರೆ ದುರು ರುಜುವಾತು ಪಡಿಸಲು ಹೋಗುವುದಿಲ್ಲ. ಇಂಥ ಸೂಕ್ಷ್ಮ ವಿಷಯಗಳನ್ನ ತಿಳಿದು ಕೊಂಡಾಗ ನಾವು ನಮ್ಮ ಆಧ್ಯಾತ್ಮ ಗುರುಗಳನ್ನ ಆರಿಸುವುದರಲ್ಲಿ ಹೆಚ್ಚು ಎಚ್ಚರವಹಿಸುತ್ತೇವೆ. ಯಾವುದೇ ಗುರುಗಳು ಜೀವನದಲ್ಲಿ ನಮಗೆ ಭಗವಂತನನ್ನು ತಲುಪಲು ಅವನ ಕೃಪೆಯನ್ನು ಪಡೆಯಲು ಸರಿಯಾದ ಮಾರ್ಗವನ್ನು ಸೂಚಿಸುತ್ತಾರೆ.
ಸುಖ ಶಾಂತಿ, ನೆಮ್ಮದಿ ಸಂತೃಪ್ತಿಯಿಂದ ಬದುಕುವ ದಾರಿಯನ್ನು ಆಧ್ಯಾತ್ಮದಡೆಗೆ ನಮಗೆ ಸಿಗಬಹು ದಾದ ದಾರಿಯನ್ನು ತೋರಿಸಿ ನಮ್ಮನ್ನು ಆ ದಿಕ್ಕಿನಲ್ಲಿ ನಡೆಯಲು ಪ್ರೇರೇಪಿಸುತ್ತಾರೆ. ವಿಶೇಷವಾಗಿ ಭಾರತದಲ್ಲಿ ಆಧ್ಯಾತ್ಮದ ಗುರುಗಳು ಎಂದು ಜನರನ್ನು ಮರಳು ಮಾಡುವ ಮಂದಿಯೇ ಹೆಚ್ಚಿರು ವಾಗ, ಇಂತಹ ಗುರುಗಳನ್ನ ಆರಿಸುವಾಗ ಎಚ್ಚರವಿರಲಿ.