ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಎರಡು ಅತಿರೇಕಗಳ ಸುತ್ತ

ಮೊದಲನೆಯದಕ್ಕೆ ಕಾರಣಕರ್ತರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದ ಬೆನ್ನಿಗೆ ಅಂಟಿಕೊಂಡಿರುವ ಕೆನಡಾ ರಾಷ್ಟ್ರದ ಮೇಲೆಯೇ ಕೆಂಗಣ್ಣು ಬೀರಿರುವ ಟ್ರಂಪ್, ಅದರ ಮೇಲೆಯೂ ಶೇ.100ರ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ; ಚೀನಾ ದೊಂದಿಗಿನ ವ್ಯಾಪಾರ ಸಂಬಂಧವನ್ನು ಕೆನಡಾ ಮುಂದು ವರಿಸಿರುವುದೇ ಟ್ರಂಪ್ ಮಹಾ ಶಯರ ಈ ಕಡುಕೋಪಕ್ಕೆ ಕಾರಣವಂತೆ. ಈ ಐಲುದೊರೆಯ ಆಟಾಟೋಪ ಯಾವಾಗ ನಿಲ್ಲುವುದೋ ಭಗವಂತನೇ ಬಲ್ಲ!

Vishwavani Editorial: ಎರಡು ಅತಿರೇಕಗಳ ಸುತ್ತ

-

Ashok Nayak
Ashok Nayak Jan 27, 2026 8:37 AM

ಯಾವುದೇ ವಿಷಯ, ವಸ್ತು ಅಥವಾ ಕ್ರಿಯೆಯು ಅಗತ್ಯಕ್ಕಿಂತ ಅಥವಾ ಮಿತಿಗಿಂತ ಹೆಚ್ಚಾ ಗಿರುವ ಸ್ಥಿತಿಯನ್ನು ‘ಅತಿರೇಕ’ ಎನ್ನಲಾಗುತ್ತದೆ. ಒಂದೊಮ್ಮೆ ಇಂಥ ಸಂದರ್ಭಗಳಲ್ಲಿ ‘ಅತಿರೇಕದ ಪರಮಾವಧಿ’ ಎಂಬ ಪದಪ್ರಯೋಗವಾದರೆ, ಅದು ಪರಿಸ್ಥಿತಿಯು ಕೈಮೀರಿರು ವುದರ ದ್ಯೋತಕವಾಗುತ್ತದೆ. ಈ ಪರಿಕಲ್ಪನೆಯನ್ನು ನೆನಪಿಸುವ ಎರಡು ಘಟನೆಗಳು ಇತ್ತೀಚೆಗೆ ವರದಿಯಾಗಿವೆ.

ಮೊದಲನೆಯದಕ್ಕೆ ಕಾರಣಕರ್ತರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದ ಬೆನ್ನಿಗೆ ಅಂಟಿಕೊಂಡಿರುವ ಕೆನಡಾ ರಾಷ್ಟ್ರದ ಮೇಲೆಯೇ ಕೆಂಗಣ್ಣು ಬೀರಿರುವ ಟ್ರಂಪ್, ಅದರ ಮೇಲೆಯೂ ಶೇ.100ರ ಪ್ರಮಾಣದ ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ; ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಕೆನಡಾ ಮುಂದುವರಿಸಿರು ವುದೇ ಟ್ರಂಪ್ ಮಹಾಶಯರ ಈ ಕಡುಕೋಪಕ್ಕೆ ಕಾರಣವಂತೆ. ಈ ಐಲುದೊರೆಯ ಆಟಾಟೋಪ ಯಾವಾಗ ನಿಲ್ಲುವುದೋ ಭಗವಂತನೇ ಬಲ್ಲ!

ಇದನ್ನೂ ಓದಿ: Vishwavani Editorial: ಗಣತಂತ್ರದ ಸಾರ್ಥಕತೆ

ಮತ್ತೊಂದೆಡೆ, ನೆರೆಯ ಬಾಂಗ್ಲಾದೇಶದಲ್ಲಿ ಇನ್ನೊಬ್ಬ ಹಿಂದೂವಿನ ಸಜೀವ ದಹನವಾಗಿದೆ. ಗ್ಯಾರೇಜ್‌ನಲ್ಲಿ ಮಲಗಿದ್ದಾಗ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ ಎಂಬ ಸುದ್ದಿಯೇ ಬಾಂಗ್ಲಾದಲ್ಲಿ ಕಾಣಬರುತ್ತಿರುವ ಅಸಹಿಷ್ಣುತೆಯನ್ನು, ಅದರ ‘ಅತಿರೇಕದ ಪರಮಾವಧಿ’ಯನ್ನು ಧ್ವನಿಸುತ್ತದೆ.

ಕಳೆದೊಂದು ತಿಂಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಹತ್ಯೆಯ ಸಂಖ್ಯೆಯು 15ಕ್ಕೆ ಏರಿದೆ ಎನ್ನಲಾಗುತ್ತಿರುವುದು ಇದಕ್ಕೆ ಪುಷ್ಟಿ ನೀಡೀತು. ಒಟ್ಟಿನಲ್ಲಿ ಇಂಥ ಹುಚ್ಚಾಟಗಳು, ಅಸಹಿಷ್ಣುತೆಗಳು ಯಾವಾಗ ತಹಬಂದಿಗೆ ಬರುವುದೋ ಎಂದು ಶಾಂತಿಪ್ರಿಯರು ಮರುಗು ವಂತಾಗಿದೆ...