ಪಾಕಿಸ್ತಾನಕ್ಕೆ ಬಲೂಚಿಸ್ತಾನ 1947ರಿಂದಲೂ ಬಿಸಿಬಿಸಿ ಕೆಂಡವಾಗಿ ಮಡಿಲನ್ನು ಸುಡುತ್ತಲೇ ಇದೆ. ಪಾಕ್ ಸ್ವತಂತ್ರಗೊಂಡಾಗ 227 ದಿನಗಳ ಕಾಲ ಬಲೂಚಿಸ್ತಾನವೂ ಸ್ವತಂತ್ರವಾಗಿತ್ತು. ಅನಂತರ ಅದು ಬಲಾತ್ಕಾರವಾಗಿ ಪಾಕ್ ಪಾಲಾಯಿತು. ಅವತ್ತಿನಿಂದಲೇ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟ ಶುರುವಾಯಿತು.
ಬಲೂಚ್‌ನೊಳಗಿನ ಆಂತರಿಕ ಬೇಗುದಿಗೆ ಭಾರತ ಕಾರಣ ಎನ್ನುವ ಅವಿವೇಕಿಗಳಿಗೆಲ್ಲ ಈ ಸತ್ಯ ಗೊತ್ತಿಲ್ಲ. 2024ರಲ್ಲಿ ಆಪರೇಶನ್ ಹೆರೋಫ್-1 ನಡೆಯಿತು. ಆಗ ಬಲೂಚ್‌ನ ಹಲವಾರು ಪ್ರದೇಶ ಗಳು ಬಿಎಲ್‌ಎ ಕೈಗೆ ಸಿಕ್ಕಿತ್ತು. ಕೆಲವು ಪ್ರದೇಶಗಳಲ್ಲಿ 20 ಗಂಟೆ, ಇನ್ನು ಕೆಲವು ಕಡೆ 48 ಗಂಟೆಗಳ ಕಾಲ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ಹಿಡಿತ ಸಾಧಿಸಿದ್ದರು. ಈ ಬಾರಿ ಆಪರೇಶನ್ ಹೆರೋಫ್-2 ನಡೆಯುತ್ತಿದೆ.
ಇದನ್ನೂ ಓದಿ: Vishwavani Editorial: ಮೂಗು ಹಿಡಿದರೆ ಬಾಯಿ ಬಿಟ್ಟೀತು
ಇದು ಬಹಳ ತೀವ್ರವಾಗಿದೆ. ಹಲವು ಪ್ರದೇಶಗಳನ್ನು, ಸೇನಾ ನೆಲೆಗಳನ್ನು ಬಿಎಲ್‌ಎ ವಶಕ್ಕೆ ತೆಗೆದು ಕೊಂಡಿದೆ. ಬಲವಾದ ಹಿಡಿತ ಸಾಧಿಸಿದೆ. ಪಾಕಿಸ್ತಾನ ಸೇನೆ ಸುಸ್ತಾಗುತ್ತಿದೆ. ಈ ಸಮಸ್ಯೆ ಬಿಗಡಾಯಿ ಸಲು ನಿಜವಾದ ಕಾರಣ ಈಗಿನ ಮುಖ್ಯಮಂತ್ರಿ ಅಕ್ಬರ್ ಬುಗ್ತಿ. ಅವರ ಪ್ರಕಾರ ಇದೊಂದು ರಾಜಕೀಯ ಸಮಸ್ಯೆ ಅಲ್ಲ, ಹಾಗಾಗಿ ಅದನ್ನು ಸೇನೆಯನ್ನೇ ಬಳಸಿಯೇ ಸರಿ ಮಾಡಬೇಕು
ಎನ್ನುವುದು. ಸತ್ಯವೆಂದರೆ ಸ್ವತಃ ಬುಗ್ತಿಯ ಆಯ್ಕೆಯ ಒಂದು ಸುಳ್ಳು. ಭಾರೀ ಮೋಸ ನಡೆಸಿ, ಅವಿರೋಧವಾಗಿ ಬುಗ್ತಿಯನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ. ಆ ಪ್ರದೇಶದ ಜನರಿಗೆ ಅದು ಮೋಸದಾಟ ಎನ್ನುವುದು ಚೆನ್ನಾಗಿ ಗೊತ್ತಿದೆ. ಆತ ಬಲೂಚಿಗಳ ಮೇಲೆ ನಡೆದಿರುವ ದಬ್ಬಾಳಿಕೆ ಗಳನ್ನು ಮುಚ್ಚಿಡುತ್ತಿದ್ದಾರೆ.
ಪಾಕಿಸ್ತಾನಕ್ಕೆ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಬಲೂಚಿಗಳ ಸಮಸ್ಯೆ ಕೇಳಲು ಪ್ರಾಮಾಣಿಕ ಯತ್ನ ನಡೆಸಿದ್ದರು. ಅಲ್ಲಿನ ಹೋರಾಟಗಾರರೊಂದಿಗೆ ಮಾತನಾಡಿ ನೂರಾರು ಕೋಟಿ ರು. ಪ್ಯಾಕೇಜ್ ಘೋಷಿಸಿದ್ದರು. ಅದು ಜಾರಿಯಾಗಬೇಕು ಎನ್ನುವಾಗ ಅಲ್ಲಿನ ಸೇನೆ, ಐಎಸ್‌ಐ ನಾಯಕರು ಸೇರಿ ಇಮ್ರಾನ್‌ರನ್ನು ಕೆಳಕ್ಕಿಳಿಸಿ, ಬಂಧಿಸಿ ಬಿಟ್ಟರು.
ಈಗ ಸೇನೆಯ ಹಿಡಿತದಲ್ಲಿರುವ ಪಾಕ್ ಬಲೂಚಿಗಳಿಗೆ ನ್ಯಾಯ ಕೊಡುವುದಂತೂ ಸಾಧ್ಯವಿಲ್ಲ. ಅದರ ಬದಲು ಭಾರತದ ಮೇಲೆ ದೂಷಿಸುವ ಕೆಲಸ ನಡೆಯುತ್ತಿದೆ.