ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬಿಹಾರದಲ್ಲಿ ಕದನ ಕುತೂಹಲ

ತಾವು ಮುಖ್ಯಮಂತ್ರಿಯ ಗದ್ದುಗೆಯನ್ನು ಕಳೆದುಕೊಂಡ ನಂತರವೂ, ಚಾಣಾಕ್ಷತನದಿಂದ ಅದರ ಮೇಲೆ ಪತ್ನಿಯನ್ನು ಕೂರಿಸಿದವರು, ತರುವಾಯದಲ್ಲಿ ಮಗನನ್ನು ಮುಂಚೂಣಿಗೆ ತಂದವರು ಇದೇ ಲಾಲು. ನಂತರದಲ್ಲಿ, ಬದಲಾದ ರಾಜಕೀಯ ಸಮೀಕರಣಗಳ ಕಾರಣದಿಂದಾಗಿ ಹಾಗೂ ಮತದಾರರೂ ಕೈಹಿಡಿ ಯದಿದ್ದುದಕ್ಕೆ ಲಾಲು ಪ್ರಸಾದರು ಬಿಹಾರದ ಗದ್ದುಗೆಯನ್ನು ಸ್ವತಃ ಅಲಂಕರಿಸಲಾಗಲಿಲ್ಲ ಎನ್ನಿ.

ಬಿಹಾರ ರಾಜ್ಯವು ಕಳೆದ ಕೆಲವು ದಶಕಗಳಿಂದ ಒಂದಲ್ಲಾ ಒಂದು ಕಾರಣಕ್ಕೆ ಜನರ ಕುತೂಹಲಕ್ಕೆ ಗ್ರಾಸವನ್ನು ಒದಗಿಸುತ್ತಲೇ ಬಂದಿದೆ. ಮೇವು ಹಗರಣದಿಂದಾಗಿ ಕುಖ್ಯಾತಿಯನ್ನು ಪಡೆದ ಮತ್ತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಪಕ್ಷದ ಸಂಸ್ಥಾಪಕರೂ ಆದ ಲಾಲು ಪ್ರಸಾದ್ ಯಾದವ್ ಅವರು, ‘ಜಬ್ ತಕ್ ಸಮೋಸೇ ಮೆ ರಹೇಗಾ ಆಲೂ, ತಬ್ ತಕ್ ಬಿಹಾರ್ ಮೆ ರಹೇಗಾ ಲಾಲು’ ಎಂದು ಹೇಳಿಕೊಂಡು ಜನಮನವನ್ನು ವಿಲಕ್ಷಣ ರೀತಿಯಲ್ಲಿ ಸೆಳೆದಿದ್ದುಂಟು.

ತಾವು ಮುಖ್ಯಮಂತ್ರಿಯ ಗದ್ದುಗೆಯನ್ನು ಕಳೆದುಕೊಂಡ ನಂತರವೂ, ಚಾಣಾಕ್ಷತನದಿಂದ ಅದರ ಮೇಲೆ ಪತ್ನಿಯನ್ನು ಕೂರಿಸಿದವರು, ತರುವಾಯದಲ್ಲಿ ಮಗನನ್ನು ಮುಂಚೂಣಿಗೆ ತಂದವರು ಇದೇ ಲಾಲು. ನಂತರದಲ್ಲಿ, ಬದಲಾದ ರಾಜಕೀಯ ಸಮೀಕರಣಗಳ ಕಾರಣದಿಂದಾಗಿ ಹಾಗೂ ಮತದಾ ರರೂ ಕೈಹಿಡಿಯದಿದ್ದುದಕ್ಕೆ ಲಾಲು ಪ್ರಸಾದರು ಬಿಹಾರದ ಗದ್ದುಗೆಯನ್ನು ಸ್ವತಃ ಅಲಂಕರಿಸ ಲಾಗಲಿಲ್ಲ ಎನ್ನಿ.

ಇದನ್ನೂ ಓದಿ: Vishwavani Editorial: ಕುವರಿಯಾದೊಡೆ ಕುಂದೇನು?

ನಂತರದಲ್ಲಿ ಅಧಿಕಾರಕ್ಕೆ ಬಂದ ನಿತೀಶ್ ಕುಮಾರ್ ಯಾದವ್ ಅವರು, ಬೇರೆಯದೇ ಕಾರಣಕ್ಕೆ ಜನರ ಗಮನವು ಬಿಹಾರದತ್ತ ಹರಿಯುವುದಕ್ಕೆ ಕಾರಣರಾದರು. ರಾಜಕೀಯ ಮೈತ್ರಿಕೂಟದೆಡೆಗಿನ ತಮ್ಮ ನಿಷ್ಠೆಯನ್ನು ಮತ್ತೆ ಮತ್ತೆ ಬದಲಿಸುತ್ತಾ ‘ಪಲ್ಟೂರಾಂ’ ಎಂದೇ ಕರೆಸಿಕೊಂಡವರು ಈ ನಿತೀಶರು.

ಹೀಗೆ ವರ್ಣರಂಜಿತ ರಾಜಕೀಯ ವ್ಯಕ್ತಿತ್ವಗಳಿರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ರಾಷ್ಟ್ರ ರಾಜಕಾರಣದ ದಿಕ್ಕನ್ನು ಬದಲಿಸಬಲ್ಲ ಶಕ್ತಿ ಬಿಹಾರಕ್ಕಿದೆ ಎನ್ನುತ್ತಾರೆ ಬಲ್ಲವರು. ಅಲ್ಲಿನ ಜನರು ಈ ಸಲವೂ ನಿತೀಶರ ಕೈಹಿಡಿಯಲಿದ್ದಾರೆ ಎನ್ನುತ್ತವೆ ಚುನಾವಣಾ ಸಮೀಕ್ಷೆಗಳು. ಚುನಾವಣೆಯಲ್ಲಿ ಗೆಲ್ಲುವವರು ಯಾರೇ ಆಗಿರಲಿ, ಅವರು ಜನರ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಬೇಕು ಎಂಬುದು ಸಾರ್ವಕಾಲಿಕ ನಿರೀಕ್ಷೆಯಾಗಿರುತ್ತದೆ. ಕಾದು ನೋಡೋಣ, ಅಷ್ಟೇ...