ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಪ್ರಾಪ್ತರ ಅಪರಾಧ; ಕಠಿಣ ಶಿಕ್ಷೆ ನೀಡಿ

ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯವು ಅಪ್ರಾಪ್ತರು ಎಂಬ ಕಾರಣಕ್ಕೆ ಇಂತಹವರಿಗೆ ಕಠಿಣ ವಾದ ಶಿಕ್ಷೆಯನ್ನು ಪ್ರಕಟಿಸುವುದಿಲ್ಲ. ಇದೇ ಕಾರಣಕ್ಕೆ ಕೆಲವು ದೇಶವಿರೋಧಿ ಸಂಘಟನೆಗಳು ಕಾನೂನಿನ ಕುಣಿಕೆಯಿಂದ ಪಾರಾಗಲು ಮಕ್ಕಳಿಂದ ಇಂತಹ ಕೃತ್ಯಗಳನ್ನು ಮಾಡಿಸುತ್ತಿರಬಹುದಾದ ಸಾಧ್ಯತೆ ಬಹಳಷ್ಟಿದೆ

ಅಪ್ರಾಪ್ತರ ಅಪರಾಧ; ಕಠಿಣ ಶಿಕ್ಷೆ ನೀಡಿ

ಮೈಸೂರಿನ ಉದಯಗಿರಿ ಠಾಣೆ ಮತ್ತು ಪೊಲೀಸರ ಮೇಲೆ ಕಲ್ಲೆಸೆತ ಪ್ರಕರಣ

Profile Ashok Nayak Feb 15, 2025 7:06 AM

ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕಾರಣಕ್ಕೆ ಮೈಸೂರಿನ ಉದಯಗಿರಿ ಠಾಣೆ ಮತ್ತು ಪೊಲೀಸರ ಮೇಲೆ ಕಲ್ಲೆಸೆತ ಪ್ರಕರಣ ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೂ 16 ಆರೋಪಿ ಗಳನ್ನು ಬಂಧಿಸಿದ್ದು, ಒಂದು ಸಾವಿರ ಜನರ ಮೇಲೆ ಎಫ್‌ ಐಆರ್ ದಾಖಲಿಸಿದ್ದಾರೆ. ಪೊಲೀಸರು ಮತ್ತು ಠಾಣೆಯ ಮೇಲೆ ಕಲ್ಲು ಬಿಸಾಡಿದವರಲ್ಲಿ 18 ವರ್ಷದೊಳಗಿನವರೂ ಇದ್ದಾರೆ ಎನ್ನಲಾಗಿದೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲೂ ಅಪ್ರಾಪ್ತ ವಯಸ್ಸಿನವರೇ ಅತಿ ಹೆಚ್ಚು ಇದ್ದರು.

ಅಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಕಲ್ಲು ತೂರಾಟ, ಗುಂಪು ಗಲಭೆಯಂತಹ ಪ್ರಕರಣಗಳಲ್ಲಿ 14- 15 ವರ್ಷದ ಮಕ್ಕಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರು ವುದು ಕಂಡುಬರುತ್ತಿದೆ.

ಇದನ್ನೂ ಓದಿ: Vishwavani Editorial: ಬಾಲ್ಯ ವಿವಾಹಗಳಿಗೆ ಕಡಿವಾಣ ಬೀಳಲಿ

ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯವು ಅಪ್ರಾಪ್ತರು ಎಂಬ ಕಾರಣಕ್ಕೆ ಇಂತಹವರಿಗೆ ಕಠಿಣ ವಾದ ಶಿಕ್ಷೆಯನ್ನು ಪ್ರಕಟಿಸುವುದಿಲ್ಲ. ಇದೇ ಕಾರಣಕ್ಕೆ ಕೆಲವು ದೇಶವಿರೋಧಿ ಸಂಘಟನೆಗಳು ಕಾನೂನಿನ ಕುಣಿಕೆಯಿಂದ ಪಾರಾಗಲು ಮಕ್ಕಳಿಂದ ಇಂತಹ ಕೃತ್ಯಗಳನ್ನು ಮಾಡಿಸುತ್ತಿರಬಹು ದಾದ ಸಾಧ್ಯತೆ ಬಹಳಷ್ಟಿದೆ.

ಸಮಾಜದ್ರೋಹಿ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಈ ಮಕ್ಕಳಿಗೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇರುವು ದಿಲ್ಲ. ಆದ್ದರಿಂದ ಭವಿಷ್ಯದ ಪ್ರಜೆಗಳಾದ ಈ ಮಕ್ಕಳು ನೈತಿಕ ಮೌಲ್ಯ ಹೊಂದುವಂತೆ ಮಾಡಿ, ಪ್ರಜ್ಞಾವಂತ ನಾಗರಿಕರನ್ನಾಗಿ ಅವರನ್ನು ರೂಪಿಸುವುದು ಪೋಷಕರು, ಸರಕಾರ ಹಾಗೂ ಸಮಾಜದ ಪ್ರಧಾನ ಕರ್ತವ್ಯ.

ಸಮಾಜದ ಸ್ವಾಸ್ಥ್ಯ ಕದಡುವ ಕೃತ್ಯಗಳಲ್ಲಿ ಪಾಲ್ಗೊಳ್ಳುವವರ ವಯಸ್ಸನ್ನು ಪರಿಗಣಿಸದೆ, ಅವರು ಎಸಗುವ ಕೃತ್ಯ ಗಳನ್ನು ಆಧರಿಸಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ಈ ಮೂಲಕ ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಪೂರಕವಾಗಿ ಕಾನೂನಿಗೆ ತಿದ್ದುಪಡಿಯನ್ನು ಸರಕಾರ ತರ ಬೇಕು. ಈ ನೆಲದ ಕಾನೂನಿಗೆ ಗೌರವ ಕೊಡದ ಯಾರೇ ಆದರೂ, ಯಾವ ವಯಸ್ಸಿನವರೇ ಆದರೂ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡುವಂತಾಗ ಬೇಕು.

ಇಲ್ಲವಾದಲ್ಲಿ ಕಾನೂನಿನಲ್ಲಿರುವ ಸಡಿಲಿಕೆಗಳೇ ಯುವ ಸಮುದಾಯವನ್ನು ದುರ್ಮಾರ್ಗದತ್ತ ಕೊಂಡೊಯ್ಯುತ್ತವೆ.