ಕ್ರೀಡಾ ವ್ಯವಸ್ಥೆ ಬಿಸಿಸಿಐ ಕೈಗೆ ಸಿಕ್ಕರೆ...
ಇಡೀ ದೇಶದಲ್ಲಿ ಶಿಸ್ತುಬದ್ಧವಾಗಿ ಕ್ರೀಡಾವ್ಯವಸ್ಥೆಯನ್ನು ರೂಪಿಸಿದ ಶ್ರೇಯಸ್ಸು ಬಿಸಿಸಿಐಗೆ ಸಲ್ಲುತ್ತದೆ. ಇಲ್ಲಿ ಕ್ರಿಕೆಟನ್ನು ವೃತ್ತಿಯೆಂಬಂತೆಯೇ ನೋಡಲಾಗುತ್ತದೆ. ಹಾಗಾಗಿ ಆಟಗಾರರು ಮತ್ತೊಂದು ವೃತ್ತಿಯತ್ತ ಹೋಗುವ ಅಗತ್ಯವಿಲ್ಲ. ಹೀಗೆ ಒಂದು ಸುಭದ್ರ ಕ್ರೀಡಾ ವ್ಯವಸ್ಥೆಯನ್ನು ಭಾರತದಲ್ಲಿ ಇತರೆ ಕ್ರೀಡೆಗಳಿಗೂ ರೂಪಿಸುವ ಶಕ್ತಿಯಿರುವುದು ಬಿಸಿಸಿಐಗೆ ಮಾತ್ರ. ಕೇಂದ್ರ ಸರಕಾರ ಅಂತಹ ಅಧಿಕಾರವನ್ನು ಬಿಸಿಸಿಐಗೆ ನೀಡಬೇಕು.
-
2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ 125 ಕೋಟಿ ರು.ಗಳನ್ನು ನಗದು ಬಹುಮಾನವಾಗಿ ಘೋಷಿಸಿತ್ತು. ಮೊನ್ನೆ ಮೊನ್ನೆ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ಮತ್ತೆ ಕಪ್ ಗೆದ್ದ ಬೆನ್ನಲ್ಲೇ 131 ಕೋಟಿ ರು.ಗಳನ್ನು ಘೋಷಿಸಿತು. ಐಸಿಸಿ ಇಡೀ ಕೂಟದಲ್ಲಿ ತಂಡಗಳಿಗೆ ನೀಡಲು ವ್ಯಯಿಸಿದ ಪ್ರಶಸ್ತಿ ಮೊತ್ತವೇ 101 ಕೋಟಿ ರು. ಇಲ್ಲಿ ಬರೀ ಭಾರತ ತಂಡಕ್ಕೆ 131 ಕೋಟಿ ರು. ಸಿಕ್ಕಿದೆ!
ಬಿಸಿಸಿಐನಲ್ಲಿ ಬೇಕಾದಷ್ಟು ಹಣವಿದೆ ಎನ್ನುವುದಕ್ಕೆ ಯಾವುದೇ ಆಧಾರಗಳನ್ನು ನೀಡುವ ಅಗತ್ಯವಿಲ್ಲ. ಅಂತಹ ಬಿಸಿಸಿಐ ಕೈಯಲ್ಲಿ ಭಾರತದ ಫುಟ್‌ಬಾಲ್, ಕಬಡ್ಡಿ, ಹಾಕಿ, ಒಲಿಂಪಿಕ್ಸ್ ಕ್ರೀಡೆಗಳು ಸಿಕ್ಕರೆ ಬಹುಶಃ ಕ್ರೀಡಾ ಕ್ರಾಂತಿಯೇ ನಡೆದು ಹೋಗುತ್ತದೆ.
ಇಡೀ ದೇಶದಲ್ಲಿ ಶಿಸ್ತುಬದ್ಧವಾಗಿ ಕ್ರೀಡಾವ್ಯವಸ್ಥೆಯನ್ನು ರೂಪಿಸಿದ ಶ್ರೇಯಸ್ಸು ಬಿಸಿಸಿಐಗೆ ಸಲ್ಲುತ್ತದೆ. ಇಲ್ಲಿ ಕ್ರಿಕೆಟನ್ನು ವೃತ್ತಿಯೆಂಬಂತೆಯೇ ನೋಡಲಾಗುತ್ತದೆ. ಹಾಗಾಗಿ ಆಟಗಾರರು ಮತ್ತೊಂದು ವೃತ್ತಿಯತ್ತ ಹೋಗುವ ಅಗತ್ಯವಿಲ್ಲ. ಹೀಗೆ ಒಂದು ಸುಭದ್ರ ಕ್ರೀಡಾ ವ್ಯವಸ್ಥೆಯನ್ನು ಭಾರತದಲ್ಲಿ ಇತರೆ ಕ್ರೀಡೆಗಳಿಗೂ ರೂಪಿಸುವ ಶಕ್ತಿಯಿರುವುದು ಬಿಸಿಸಿಐಗೆ ಮಾತ್ರ. ಕೇಂದ್ರ ಸರಕಾರ ಅಂತಹ ಅಧಿಕಾರವನ್ನು ಬಿಸಿಸಿಐಗೆ ನೀಡಬೇಕು.
ಇದನ್ನೂ ಓದಿ:BCCI Meeting: ದ್ವಿತೀಯ ಏಕದಿನ ಪಂದ್ಯಕ್ಕೂ ಮುನ್ನ ಹಿರಿಯ ಕ್ರಿಕೆಟಿಗರ ಸಭೆ ಕರೆದ ಬಿಸಿಸಿಐ
ಕನಿಷ್ಠ ಪಕ್ಷ ಫುಟ್‌ಬಾಲ್, ಹಾಕಿಯಂತಹ ಕ್ರೀಡೆಗಳನ್ನು ಪ್ರಾಯೋಗಿಕವಾಗಿ ಬಿಸಿಸಿಐಗೆ ನೀಡಿದರೆ, ಅದರ ಸ್ವರೂಪವೇ ಬದಲಾಗುತ್ತದೆ. ಫುಟ್‌ಬಾಲ್‌ಗೆ ಜಾಗತಿಕವಾಗಿ ಜನಪ್ರಿಯತೆ ಇದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ಪ್ರತಿಭೆಗಳ ಗಣಿಯೇ ಇದೆ. ಅಂತಹ ಪ್ರತಿಭೆಗಳಿಗೆ ಸೂಕ್ತವಾದ ಅವಕಾಶಗಳನ್ನು ನೀಡಿ, ಭರವಸೆ ತುಂಬಬೇಕಿರುವುದು ಈಗಿನ ಅಗತ್ಯ.
ಅರ್ಜೆಂಟೀನಾ, ಬ್ರೆಜಿಲ್, ಉರುಗ್ವೆ, ಇಟಲಿಯಂತಹ ದೇಶಗಳು ಫುಟ್‌ಬಾಲ್‌ನಲ್ಲಿ ವಿಶ್ವಕಪ್ ಗೆಲ್ಲುತ್ತವೆ ಎಂದರೆ ಭಾರತಕ್ಕೆ ಸಾಧ್ಯವಿಲ್ಲವೇ? ಭಾರತದ ಜನಸಂಖ್ಯೆ, ಯುವಶಕ್ತಿ ಎಂತಹ ಅಸಾಧ್ಯವನ್ನಾದರೂ ಸಾಧಿಸಿ ತೋರಬಲ್ಲ ಶಕ್ತಿ ಹೊಂದಿದೆ. ದೇಶದಲ್ಲಿನ ನಾಯಕರು ಸಮರ್ಥ ಕ್ರೀಡಾವ್ಯವಸ್ಥೆಯೊಂದನ್ನು ರೂಪಿಸಲು ಸಮರ್ಥರ ಕೈಗೆ ಅಧಿಕಾರ ನೀಡಬೇಕು. ಸದ್ಯದ ಮಟ್ಟಿಗೆ ಭಾರತದಲ್ಲಿ ಕಾಣುತ್ತಿರುವುದು ಬಿಸಿಸಿಐ ಮಾತ್ರ.
ಬಿಸಿಸಿಐನಲ್ಲಿ ಹಣವಿದೆ, ಶಿಸ್ತಿದೆ, ಬೇಕುಬೇಕಾದಂತೆ ರಾಜಕೀಯ ಮಾಡಲು ಅಲ್ಲಿ ಅವಕಾಶ ವಿಲ್ಲ. ಇದು ಈಗಿನ ಕ್ರೀಡಾವ್ಯವಸ್ಥೆಗೆ ಅಗತ್ಯ.