ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಗ್ನಿ ಸುರಕ್ಷತೆ ಖಾತ್ರಿ ಬೇಕು

ಕೆಲ ದಿನಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ರೆಸ್ಟಾರೆಂಟ್‌ನಲ್ಲಿ ಉಂಟಾದ ಬೆಂಕಿ ಅನಾಹುತ ದಲ್ಲಿ ಇಬ್ಬರು ಸತ್ತು, ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಎಲ್ಲ ಬೆಂಕಿ ಆಕಸ್ಮಿಕಗಳ ಮೂಲ ಕಾರಣ ಬೇರೆ ಬೇರೆ ಆಗಿರಬಹುದಾದರೂ, ಹೆಚ್ಚಿನ ಜೀವಹಾನಿಗಳಿಗೆ ಕಾರಣ ಅಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು ಇಲ್ಲದಿರುವುದೇ ಆಗಿರುತ್ತದೆ.

ಉತ್ತರ ಪ್ರದೇಶದ ಲಖನೌನಲ್ಲಿರುವ ಮೂರು ಅಂತಸ್ತಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ಕಟ್ಟಡದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ತಿಂಗಳ ಆರಂಭದಲ್ಲಿ ದಿಲ್ಲಿಯ ಮಾಳವೀಯ ನಗರದ ಹೋಟೆಲೊಂದರಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ 21 ಮಂದಿ ಬಲಿಯಾಗಿದ್ದರು. ಅವರಲ್ಲಿ 13 ವಿದೇಶೀಯರೂ ಇದ್ದರು.

ಕೆಲ ದಿನಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ರೆಸ್ಟಾರೆಂಟ್‌ನಲ್ಲಿ ಉಂಟಾದ ಬೆಂಕಿ ಅನಾಹುತದಲ್ಲಿ ಇಬ್ಬರು ಸತ್ತು, ಹತ್ತಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಎಲ್ಲ ಬೆಂಕಿ ಆಕಸ್ಮಿಕಗಳ ಮೂಲ ಕಾರಣ ಬೇರೆ ಬೇರೆ ಆಗಿರಬಹುದಾದರೂ, ಹೆಚ್ಚಿನ ಜೀವಹಾನಿಗಳಿಗೆ ಕಾರಣ ಅಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು ಇಲ್ಲದಿರುವುದೇ ಆಗಿರುತ್ತದೆ.

ಇಂಥ ಆಕಸ್ಮಿಕಗಳು ಸಂಭವಿಸಿದ ನಂತರ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ಲಬ್‌ ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ, ಸೇಫ್ಟಿ ಕ್ರಮಗಳು ಇಲ್ಲದ ಕಡೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದು, ಅವುಗಳನ್ನು ಮುಚ್ಚುವುದು ನಡೆಸತೊಡಗುತ್ತಾರೆ. ಆದರೆ ಈ ಎಲ್ಲ ಸುರಕ್ಷತಾ ಕ್ರಮಗಳನ್ನೂ ಕ್ಲಬ್- ಹೋಟೆಲ್‌ಗಳು ತೆರೆಯುವ ಹೊತ್ತಿನಲ್ಲಿಯೇ ಪರಿಶೀಲನೆ ನಡೆಸಿ ರುವುದಿಲ್ಲ. ಇದೇ ಸಮಸ್ಯೆಗೆ ಕಾರಣ.

ಇದನ್ನೂ ಓದಿ: Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

ಬಹುಮಹಡಿ ಕಟ್ಟಡಗಳಲ್ಲಿ ಇಂಥ ಅನಾಹುತಗಳು ಸಂಭವಿಸದಂತೆ, ತುರ್ತು ಪರಿಸ್ಥಿತಿಯಲ್ಲಿ ಕೈಗೆ ಸಿಗುವಂತೆ ಅಗ್ನಿಶಾಮಕ ಉಪಕರಣಗಳಿರಬೇಕು. ಬೆಂಕಿ, ಹೊಗೆ ಕಾಣಿಸಿಕೊಂಡರೆ ಒಳಗಿರುವವ ರನ್ನು ಎಚ್ಚರಿಸಲು ಸ್ಮೋಕ್ ಡಿಟೆಕ್ಟರ್ʼಗಳು, ಅಲಾರಂಗಳಿರಬೇಕು. ಮೆಟ್ಟಿಲುಗಳು ಮತ್ತು ತುರ್ತು ನಿರ್ಗಮನದಾರಿಗಳನ್ನು ಇಟ್ಟಿರಬೇಕು. ಇವುಗಳನ್ನು ಯಾವುದೇ ಹೊತ್ತಿನಲ್ಲೂ ಮುಚ್ಚಿರದೆ ಮುಕ್ತ ವಾಗಿ ಇಡಬೇಕು.

ಕಟ್ಟಡದಲ್ಲಿ ಕನಿಷ್ಠ ಎರಡು ಪ್ರತ್ಯೇಕ ಮೆಟ್ಟಿಲುಗಳಿರಬೇಕು. ಅಗ್ನಿ ಅವಘಡ ಸಂಭವಿಸಿದಾಗ ಯಾವುದೇ ಕಾರಣಕ್ಕೂ ಲಿಫ್ಟ್ ಬಳಸಬಾರದು. ಹಾಗೆಯೇ ಆಗಾಗ ಅಣಕು ಡ್ರಿಲ್‌ಗಳನ್ನು ನಡೆಸ ಬೇಕು. ವಿದ್ಯುತ್ ಉಪಕರಣಗಳ ಸುರಕ್ಷತೆ ಖಾತ್ರಿಪಡಿಸಿರಬೇಕು. ಓವರ್‌ಲೋಡ್ ಆಗದಂತೆ ನೋಡಿ ಕೊಳ್ಳಬೇಕು. ಇವೆಲ್ಲ ಸಂಗತಿಗಳನ್ನೂ ಪರಿಶೀಲಿಸಿ ಖಚಿತಪಡಿಸಿದ ‘ಅಗ್ನಿ ಸುರಕ್ಷತಾ ಪ್ರಮಾಣಪತ್ರ’ ವನ್ನು ವಾಣಿಜ್ಯ ಬಳಕೆಯ ಕಟ್ಟಡ ಮಾಲಿಕರು ಪಡೆದಿರುವುದು ಕಡ್ಡಾಯವಾಗಿದೆ.

ಆದರೆ ಕಟ್ಟಡ ಮಾಲಿಕರು, ರಿಯಾಲ್ಟಿ ಏಜೆಂಟರು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಶಾಮೀಲಾ ದಾಗ ಇದ್ಯಾವುದನ್ನೂ ದೃಢಪಡಿಸದೆ, ಎಲ್ಲವನ್ನೂ ಕಡೆಗಣಿಸಿ, ಅಲ್ಲಿಗೆ ಆಗಮಿಸುವ ಸಾರ್ವಜನಿಕರ ಜೀವನದ ಜತೆ ಚೆಲ್ಲಾಟವಾಡುವುದು ಸಾಮಾನ್ಯವಾಗುತ್ತದೆ. ನಗರಗಳಲ್ಲಿ ವಾಣಿಜ್ಯ ಬಳಕೆಯ ಬಹುಮಹಡಿ ಕಟ್ಟಡಗಳಿಗೆ ಪರಿಶೀಲನೆ ಕಡ್ಡಾಯಗೊಳಿಸಿ, ಜನರ ಸುರಕ್ಷತೆ ಖಾತ್ರಿಪಡಿಸಿ.