ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮೂಗು ಹಿಡಿದರೆ ಬಾಯಿ ಓಪನ್!

ಭಾರಿ ಸುಂಕ ಹೇರಿದ್ದಕ್ಕೆ ವಿಶ್ವದ ಮಿಕ್ಕ ದೇಶಗಳಂತೆಯೇ ಭಾರತವೂ ಅಮೆರಿಕಕ್ಕೆ ದುಂಬಾಲು ಬಿದ್ದು ಸುಂಕವನ್ನು ತಗ್ಗಿಸುವಂತೆ ಕೋರುತ್ತದೆ ಎಂದೇ ಲೆಕ್ಕಿಸಿದ್ದರು ಟ್ರಂಪ್. ಆದರೆ ಭಾರತ ಈ ಬೆಳವಣಿಗೆಗೆ ‘ಕ್ಯಾರೇ’ ಎನ್ನಲಿಲ್ಲ. ಸಾಲದೆಂಬಂತೆ, ಟ್ರಂಪ್ ಮಾತಾಡಲೆಂದು ೪ ಬಾರಿ ಕರೆ ಮಾಡಿದಾಗಲೂ ಮೋದಿ ‘ನಾಟ್ ರೀಚಬಲ್’ ಆಗಿಬಿಟ್ಟರು! ಕಾರಣ, ‘ಮೂಗನ್ನು ಗಟ್ಟಿ ಯಾಗಿ ಹಿಡಿದರೆ, ಬಾಯಿ ತಾನಾಗೇ ತೆರೆದುಕೊಳ್ಳುತ್ತದೆ’ ಎಂಬುದು ಮೋದಿಯವರಿಗೆ ಗೊತ್ತಿತ್ತು.

Vishwavani Editorial: ಮೂಗು ಹಿಡಿದರೆ ಬಾಯಿ ಓಪನ್!

-

Ashok Nayak Ashok Nayak Sep 8, 2025 7:08 PM

ರಾಜಕೀಯ ಪಂಡಿತರು ಅಂದುಕೊಂಡಂತೆಯೇ ಆಗಿದೆ. ಅದೆಂದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿಷಯದಲ್ಲಿ ‘ಒಂದು ಮಟ್ಟಕ್ಕೆ’ ಹಳಿಗೆ ಮರಳಿದ್ದಾರೆ. ‘ಭಾರತ ದೇಶದ್ದು ಸತ್ತ ಆರ್ಥಿಕತೆ’ ಎಂದು ಕೂರಂಬು ಬಿಟ್ಟು ಭಾರತವನ್ನು ಕೆರಳಿಸಿದ್ದರ ಜತೆಗೆ, ‘ಉಕ್ರೇನ್ ಜತೆಗಿನ ರಷ್ಯಾದ ಯುದ್ಧಕ್ಕೆ ಆರ್ಥಿಕವಾಗಿ ನೆರವಾಗಲೆಂದು ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುತ್ತಿರುವ ಕಾರಣಕ್ಕೇ ಭಾರತದ ಮೇಲೆ ಅತಿರೇಕದ ಸುಂಕ ಹೇರಲಾಗಿದೆ’ ಎಂದೂ ಸಮರ್ಥಿಸಿಕೊಂಡಿದ್ದ ಟ್ರಂಪ್ ಈಗ ಪ್ಲೇಟು ಬದಲಿಸಿದ್ದಾರೆ.

ಇದನ್ನೂ ಓದಿ: Vishwavani Editorial: ಆಪ್ತಮಿತ್ರನ ಸಾಂಗತ್ಯ ಸಾಕು

ಚೀನಾದಲ್ಲಿ ಆಯೋಜಿಸಲಾಗಿದ್ದ ಶಾಂಘೈ ಶೃಂಗಸಭೆಯ ತರುವಾಯ ‘ಭಾರತ-ಚೀನಾ-ರಷ್ಯಾ’ ಮೈತ್ರಿಕೂಟದ ಮೇಲೆ ಕೆಂಗಣ್ಣು ಬೀರಿದ್ದ ಟ್ರಂಪ್ ಈಗ, ‘ಮೋದಿ ಮತ್ತು ನಾನು ಈಗಲೂ ಸ್ನೇಹಿತರು, ಯಾವಾಗಲೂ ಸ್ನೇಹಿತರಾಗಿರುತ್ತೇವೆ. ಅವರೊಬ್ಬ ಉತ್ತಮ ಪ್ರಧಾನಿ’ ಎಂಬ ಆಲಾಪನೆ ಮಾಡಿದ್ದಾರೆ. ಭಾರಿ ಸುಂಕ ಹೇರಿದ್ದಕ್ಕೆ ವಿಶ್ವದ ಮಿಕ್ಕ ದೇಶಗಳಂತೆಯೇ ಭಾರತವೂ ಅಮೆರಿಕಕ್ಕೆ ದುಂಬಾಲು ಬಿದ್ದು ಸುಂಕವನ್ನು ತಗ್ಗಿಸುವಂತೆ ಕೋರುತ್ತದೆ ಎಂದೇ ಲೆಕ್ಕಿಸಿದ್ದರು ಟ್ರಂಪ್. ಆದರೆ ಭಾರತ ಈ ಬೆಳವಣಿಗೆಗೆ ‘ಕ್ಯಾರೇ’ ಎನ್ನಲಿಲ್ಲ. ಸಾಲದೆಂಬಂತೆ, ಟ್ರಂಪ್ ಮಾತಾಡಲೆಂದು ೪ ಬಾರಿ ಕರೆ ಮಾಡಿದಾಗಲೂ ಮೋದಿ ‘ನಾಟ್ ರೀಚಬಲ್’ ಆಗಿಬಿಟ್ಟರು! ಕಾರಣ, ‘ಮೂಗನ್ನು ಗಟ್ಟಿ ಯಾಗಿ ಹಿಡಿದರೆ, ಬಾಯಿ ತಾನಾಗೇ ತೆರೆದುಕೊಳ್ಳುತ್ತದೆ’ ಎಂಬುದು ಮೋದಿಯವರಿಗೆ ಗೊತ್ತಿತ್ತು.

ಅವರು ಅಂದುಕೊಂಡಂತೆಯೇ ಟ್ರಂಪ್ ಎಂಬ ‘ಬಾಯಿ’ ಈಗ ತೆರೆದುಕೊಂಡಿದೆ. ಇದು ಭಾರತೀ ಯರಿಗೂ, ಭಾರತದ ನಾಯಕತ್ವದ ಪಾಲಿಗೂ ಹೆಮ್ಮೆಯ ಸಂಗತಿ. ಭಾರತವು ತಾನಾಗಿಯೇ ಮತ್ತೊಂದು ದೇಶದ ಮೇಲೆ ಯುದ್ಧಕ್ಕೆ ಮುಂದಾದ ನಿದರ್ಶನಗಳು ಚರಿತ್ರೆಯಲ್ಲಿಲ್ಲ; ಆದರೆ ಪರದೇಶಗಳು ಕಿತಾಪತಿ ಮಾಡಿದಾಗ, ತನ್ನ ಸ್ವಾಭಿಮಾನ-ಸಾರ್ವಭೌಮತೆಗಳ ರಕ್ಷಣೆಗೆಂದು ಅವಕ್ಕೆ ಮುಟ್ಟಿಕೊಂಡು ನೋಡುವಂಥ ತಿರುಗೇಟು ನೀಡಿದ್ದಿದೆ. ಟ್ರಂಪ್ ವಿಷಯದಲ್ಲೂ ಈಗ ಆಗಿರುವುದು ಅದೇ ಎಂದುಕೊಳ್ಳೋಣವೇ?!...