ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಟ್ರಂಪ್ ನಡೆದದ್ದೇ ದಾರಿಯಲ್ಲ!

ಪ್ರಾಯಶಃ ಟ್ರಂಪ್ ಮಹಾಶಯರಿಗೆ ಇದಕ್ಕಿಂತ ಮಿಗಿಲಾದ ಛೀಮಾರಿಯ ಅಗತ್ಯವಿಲ್ಲ ಎನಿಸುತ್ತದೆ. ಅನ್ಯದೇಶಗಳು ಟ್ರಂಪ್‌ರೆಡೆಗೆ ಅಸಮಾಧಾನವನ್ನು ತೋರುವುದು ಒತ್ತಟ್ಟಿಗಿರಲಿ, ಸ್ವದೇಶದಲ್ಲಿಯೇ ಅವರೆಡೆಗೆ ಹೀಗೆ ಅಪಸ್ವರ ಹೊಮ್ಮಿರುವುದು ಗಮನಾರ್ಹ. ಟ್ರಂಪ್ ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.

Vishwavani Editorial: ಟ್ರಂಪ್ ನಡೆದದ್ದೇ ದಾರಿಯಲ್ಲ!

-

Ashok Nayak Ashok Nayak Sep 1, 2025 5:20 AM

ಎಲ್ಲವೂ ತಾವು ಅಂದುಕೊಂಡಂತೆಯೇ ನಡೆಯುತ್ತದೆ, ಒಂದಿಡೀ ಜಗತ್ತೇ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ ಎಂಬ ಭ್ರಮೆಯಲ್ಲಿದ್ದರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆದರೀಗ ಆ ಭ್ರಮೆಯ ಪೊರೆ ಕಳಚುತ್ತಿರುವುದು ನಿಧಾನವಾಗಿ ಅವರ ಅರಿವಿಗೆ ಬರುತ್ತಿರುವಂತಿದೆ.

ಟ್ರಂಪ್ ನೇತೃತ್ವದ ಅಮೆರಿಕ ಸರಕಾರವು ವಿವಿಧ ದೇಶಗಳಿಂದ ಆಮದಾದ ಉತ್ಪನ್ನಗಳ ಮೇಲೆ ಅತಿರೇಕದ ಪ್ರತಿಸುಂಕ ಹೇರಿ ಬೊಕ್ಕಸವನ್ನು ತುಂಬಿಸಿಕೊಳ್ಳುವ ಹವಣಿಕೆಯಲ್ಲಿತ್ತು. ಈ ವಿಲಕ್ಷಣ ನಡೆಗೆ ವಿಶ್ವದ ವಿವಿಧ ದೇಶಗಳಿಂದ ಅಸಮಾಧಾನವೂ ವ್ಯಕ್ತವಾಗಿತ್ತು. ಆದರೆ ಇದ್ಯಾವುದಕ್ಕೂ ಜಗ್ಗದ ಟ್ರಂಪ್, ತಾವು ನಡೆದದ್ದೇ ದಾರಿ ಎಂಬ ಅಹಮಿಕೆಯನ್ನೇ ಮುಂದುವರಿಸಿದ್ದರು. ಆದರೆ ಈಗ ಅಮೆರಿಕದ ಫೆಡರಲ್ ಮೇಲ್ಮನವಿ ನ್ಯಾಯಾಲಯವೇ ಟ್ರಂಪ್ ಸರಕಾರದ ಈ ಕ್ರಮವನ್ನು ತೀವ್ರ ವಾಗಿ ಖಂಡಿಸಿ, ‘ಅತಿರೇಕದ ಪ್ರತಿಸುಂಕದ ಹೇರಿಕೆ ಕಾನೂನುಬಾಹಿರ’ ಎಂದು ತೀರ್ಪು ನೀಡಿದೆ.

ಇದನ್ನೂ ಓದಿ: Vishwavani Editorial: ಸಂಚುಕೋರರ ದಮನವಾಗಲಿ

ಪ್ರಾಯಶಃ ಟ್ರಂಪ್ ಮಹಾಶಯರಿಗೆ ಇದಕ್ಕಿಂತ ಮಿಗಿಲಾದ ಛೀಮಾರಿಯ ಅಗತ್ಯವಿಲ್ಲ ಎನಿಸುತ್ತದೆ. ಅನ್ಯದೇಶಗಳು ಟ್ರಂಪ್‌ರೆಡೆಗೆ ಅಸಮಾಧಾನವನ್ನು ತೋರುವುದು ಒತ್ತಟ್ಟಿಗಿರಲಿ, ಸ್ವದೇಶದಲ್ಲಿಯೇ ಅವರೆಡೆಗೆ ಹೀಗೆ ಅಪಸ್ವರ ಹೊಮ್ಮಿರುವುದು ಗಮನಾರ್ಹ. ಟ್ರಂಪ್ ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು.

ಮತ್ತೊಂದೆಡೆ, ಭಾರತ, ರಷ್ಯಾ, ಚೀನಾ ದೇಶಗಳು ಪರಸ್ಪರ ಕೈಜೋಡಿಸಿ ಮಹಾವ್ಯೂಹವನ್ನು ರಚಿಸಿ ಕೊಂಡಿರುವುದು ಟ್ರಂಪ್‌ರ ನಿದ್ರೆಗೆಡಿಸಿದೆ ಎಂಬು ದರಲ್ಲಿ ಸಂಶಯವಿಲ್ಲ. ಏಕೆಂದರೆ, ಈ ಮೂರೂ ರಾಷ್ಟ್ರಗಳು ಅಮೆರಿಕದ ಏಕಪಕ್ಷೀಯ ನೀತಿಯ ವಿರುದ್ಧ ಮತ್ತೇನಾದರೂ ರಣತಂತ್ರ ವನ್ನು ಹೆಣೆದರೆ ಅದನ್ನು ಎದುರಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲೇ ಅವರು ತಮ್ಮ ಹೆಚ್ಚಿನ ಸಮಯ ವನ್ನು ವ್ಯಯಿಸಬೇಕಾಗಿ ಬಂದಿದೆ.

ಅಮೆರಿಕದ ಜನರು ಎರಡನೇ ಬಾರಿಗೆ ಹರಿವಾಣದಲ್ಲಿ ಇಟ್ಟು ಕೊಟ್ಟಿರುವ ಅಧಿಕಾರವನ್ನು ಸದುಪ ಯೋಗ ಮಾಡಿಕೊಳ್ಳದೆ, ಅನವಶ್ಯಕ ಚೇಷ್ಟೆಗಳಿಗೆ ಮುಂದಾ ಗುತ್ತಿರುವ ಟ್ರಂಪ್ ಪ್ರಾಯಶಃ ಅದಕ್ಕಾಗಿ ದುಬಾರಿ ಬೆಲೆಯನ್ನೇ ತೆರಲಿದ್ದಾರೆ ಎನಿಸುತ್ತದೆ. ಕಾದು ನೋಡೋಣ...