Yograj Singh: ಕೊಹ್ಲಿ, ಯುವರಾಜ್ ನಿಜವಾದ ಸ್ನೇಹಿತರಲ್ಲ; ಯೋಗರಾಜ್ ಸಿಂಗ್
Yuvraj Singh: ಯೋಗರಾಜ್ ಸಿಂಗ್ ಏನೇ ಆರೋಪ ಮಾಡಿದರೂ ಕೂಡ ಕೊಹ್ಲಿ ಮತ್ತು ಯುವಿ ಆತ್ಮೀಯ ಸ್ನೇಹಿತರಾಗಿದ್ದಾರೆ. ಯುವರಾಜ್ 402 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 35.05ರ ಸರಾಸರಿಯಲ್ಲಿ 11,178 ರನ್ ಸಿಡಿಸಿದ್ದಾರೆ. 17 ಶತಕ ಮತ್ತು 71 ಅರ್ಧಶತಕ ಗಳಿಸಿದ್ದಾರೆ.

-

ಮೊಹಾಲಿ: ಸದಾ ಎಂ.ಎಸ್ ಧೋನಿಯ ಬಗ್ಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಯುವರಾಜ್ ಸಿಂಗ್(Yuvraj Singh) ತಂದೆ ಯೋಗರಾಜ್ ಸಿಂಗ್(Yograj Singh) ಈ ಬಾರಿ ವಿರಾಟ್ ಕೊಹ್ಲಿ(Virat Kohli)ಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಯುವರಾಜ್ ಸಿಂಗ್ ಮತ್ತು ಕೊಹ್ಲಿ ಸ್ನೇಹಿತರೇ ಅಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗರಾಜ್, ಯುವರಾಜ್ ಎಷ್ಟು ಪ್ರತಿಭಾನ್ವಿತ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಅದೇ ಪ್ರತಿಭೆ ಕೆಲವರಿಗೆ ಭಯವಾಗಿ ಪರಿಣಮಿಸಿತ್ತು. 'ಯಶಸ್ಸಿನ ನಂತರ, ಹಣ, ಹೆಸರು ಮತ್ತು ಖ್ಯಾತಿ ಸಿಗುತ್ತದೆ. ಆದರೆ, ಜಗತ್ತಿನಲ್ಲಿ ನಿಜವಾದ ಸ್ನೇಹಿತರು ಇರುವುದಿಲ್ಲ' ಎಂಬುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಯುವರಾಜ್ ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಕ್ರಿಕೆಟ್ಗೆ ಮರು ಪ್ರವೇಶ ಮಾಡಿದಾಗ, ವಿರಾಟ್ ಕೊಹ್ಲಿ ಭಾರತೀಯ ತಂಡದ ನಾಯಕರಾಗಿದ್ದರು. ಯುವಿ ಕಮ್ಬ್ಯಾಕ್ ಬಳಿಕ ಕೇವಲ 11 ಏಕದಿನ ಮತ್ತು 24 ಟಿ-20 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು. ಇವುಗಳಲ್ಲಿ, ಕೊಹ್ಲಿ ನಾಯಕತ್ವದಲ್ಲಿ ಕೇವಲ 3 ಟಿ20 ಮತ್ತು 11 ಏಕದಿನ ಪಂದ್ಯಗಳನ್ನು ಆಡಲಾಗಿತ್ತು. 2014 ರಲ್ಲಿ ಆರ್‌ಸಿಬಿ ತಂಡದಲ್ಲಿ ಒಂದೇ ಡ್ರೆಸ್ಸಿಂಗ್ ಕೋಣೆಯಲ್ಲಿದ್ದರು. ಆದರೆ ಅಲ್ಲಿಯೂ ಸಹ ಈ ಇಬ್ಬರ ನಡುವೆ ಹೆಚ್ಚು ಸ್ನೇಹ ಇರಲಿಲ್ಲ ಎಂದು ಯೋಗ್ ರಾಜ್ ಹೇಳಿದ್ದಾರೆ.
ಯೋಗರಾಜ್ ಸಿಂಗ್ ಏನೇ ಆರೋಪ ಮಾಡಿದರೂ ಕೂಡ ಕೊಹ್ಲಿ ಮತ್ತು ಯುವಿ ಆತ್ಮೀಯ ಸ್ನೇಹಿತರಾಗಿದ್ದಾರೆ. ಯುವರಾಜ್ 402 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 35.05ರ ಸರಾಸರಿಯಲ್ಲಿ 11,178 ರನ್ ಸಿಡಿಸಿದ್ದಾರೆ. 17 ಶತಕ ಮತ್ತು 71 ಅರ್ಧಶತಕ ಗಳಿಸಿದ್ದಾರೆ.