ದೆಹಲಿ ಹೈಕೋರ್ಟ್ ನ್ಯಾ.ಯಶವಂತ್ ವರ್ಮಾ ಅವರ ದೆಹಲಿ ಮನೆಯಲ್ಲಿ ಇತ್ತೀಚೆಗೆ ಅಗ್ನಿ ಆಕ ಸ್ಮಿಕ ಸಂಭವಿಸಿದ ವೇಳೆ ಅವರ ಮನೆಯಲ್ಲಿ ಶಂಕಾಸ್ಪದ ಅಪಾರ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಿ ದ್ದ ಪ್ರಕರಣ ರಾಷ್ಟ್ರದ ಗಮನ ಸೆಳೆದಿದೆ. ಈ ಕುರಿತು ನ್ಯಾಯಮೂರ್ತಿ ವರ್ಮಾ ಅವರು ದೆಹಲಿ ಹೈಕೋರ್ಟ್ ನ್ಯಾ.ಡಿ.ಕೆ.ಉಪಾಧ್ಯಾಯ ಅವರಿಗೆ ಪ್ರತಿಕ್ರಿಯೆ ಸಲ್ಲಿಸಿದ್ದು, ನಾನಾಗಲಿ ಅಥವಾ ನನ್ನ ಕುಟುಂಬ ಸದಸ್ಯರಾಗಲಿ ಸ್ಟೋರ್ ರೂಂನಲ್ಲಿ ನಗದು ಇಟ್ಟಿಲ್ಲ. ತಮ್ಮ ನಿವಾಸದಲ್ಲಿ ಹಣ ಪತ್ತೆ ಯಾದ ಪ್ರಕರಣವು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಅಪಖ್ಯಾತಿ ತರಲು ನಡೆಸಿರುವ ಪಿತೂರಿಯಂತೆ ಸ್ಪಷ್ಟವಾಗಿ ಕಂಡುಬರುತ್ತಿದೆ.
ಅಗ್ನಿ ಅವಘಡ ಸಂಭವಿಸಿದ ರಾತ್ರಿ ಅಗ್ನಿ ಶಾಮಕ ಸಿಬ್ಬಂದಿ ಹಣ ಸಿಕ್ಕಿರುವ ಬಗ್ಗೆ ಅವರ ಕುಟುಂಬ ಸದಸ್ಯರ ಗಮನಕ್ಕೆ ತಂದಿಲ್ಲ. ಹಣ ಸಿಕ್ಕಿರುವ ಕೊಠಡಿಯನ್ನು ಬಳಸದ ಪೀಠೋಪಕರಣಗಳನ್ನು, ವಸ್ತುಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು. ಆ ಕೊಠಡಿಗೆ ಬೀಗ ಹಾಕಿರುವುದಿಲ್ಲ.
ಇದನ್ನೂ ಓದಿ: Vishwavani Editorial: ಸದನ ಪರಂಪರೆಗೆ ಕಪ್ಪುಚುಕ್ಕೆ
ಅಧಿಕೃತ ಮುಂಭಾಗದ ಗೇಟ್ ಮತ್ತು ಸಿಬ್ಬಂದಿ ಕ್ವಾರ್ಟಸ್‌ನ ಹಿಂಬಾಗಿಲಿನಿಂದಲೂ ಪ್ರವೇಶಿಸಲು ದಾರಿ ಇದೆ. ಇದಕ್ಕೆ ಮುಖ್ಯ ನಿವಾಸದಿಂದ ಸಂಪರ್ಕವಿಲ್ಲ ಎಂದು ತಿಳಿಸಿದ್ದಾರೆ. ಹಾಗಾದರೆ ಅಲ್ಲಿ ಕಂತೆ ಕಂತೆ ಹಣ ಇಟ್ಟಿದ್ದು ಯಾರು? ಎಂಬ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ. ಇದೀಗ ಈ ಕುರಿತು ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪಂಜಾ ಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ನ ನ್ಯಾ.ಜಿ.ಎಸ್.ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ಸಮಿತಿಯೊಂದನ್ನು ರಚಿಸಿದ್ದಾರೆ.
ಈ ಸಮಿತಿಯಿಂದ ಹಣದ ಮೂಲದ ಬಗ್ಗೆ ತನಿಖೆಯಾಗಲಿ. ಒಂದು ವೇಳೆ ನಿಜವಾಗಿಯೂ ನ್ಯಾಯಾ ಧೀಶರಿಗೆ ಕಪ್ಪುಚ್ಕುಕೆ ಅಂಟಿಸಲು ಷಡ್ಯಂತ್ರ ಮಾಡಿದ್ದರೆ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು ಅಥವಾ ಆ ಹಣ ನ್ಯಾಯಾಽಶರಿಗೇ ಸಂಬಂಧಿಸಿದ್ದಾಗಿದ್ದರೆ ನ್ಯಾ.ವರ್ಮಾ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು.