ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್‌ಪಿಜಿ ಮೇಲಿನ ತೆರಿಗೆ ಕಡಿತವಾಗಲಿ

ಆದಾಯದಲ್ಲಿ ಸ್ಥಿರತೆ ಇಲ್ಲದ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಹೊಡೆತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟರೆ ಬೇರೆ ಆಯ್ಕೆ ಇರದು. ಇದರಿಂದ ಟೀ, ಕಾಫಿ, ಇಡ್ಲಿ, ದೋಸೆ ಸೇರಿದಂತೆ ಶ್ರೀ ಸಾಮಾನ್ಯರ ನಿತ್ಯದ ತಿಂಡಿ, ತಿನಿಸುಗಳ ಬೆಲೆಗಳು ಏರಿಕೆಯಾಗಲಿವೆ. ಇದು ವಿಶೇಷವಾಗಿ ನಗರದ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಹೊರೆಯಾಗಲಿದೆ. ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಅನಿಲ ಮತ್ತು ಕಚ್ಚಾ ತೈಲದ ದರ ಏರಿಕೆಯಾಗಿದೆ ನಿಜ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏಕಾಏಕಿ 993 ರುಪಾಯಿಗಳಷ್ಟು ಏರಿಕೆ ಯಾಗಿರುವುದು ಜನಸಾಮಾನ್ಯರ ಮಟ್ಟಿಗೆ ಮತ್ತೊಂದು ಆತಂಕದ ಬೆಳವಣಿಗೆ. ಈ ನಿರ್ಧಾರವು ಕೇವಲ ಹೋಟೆಲ, ಉಪಾಹಾರ ಗೃಹ, ಟೀ ಅಂಗಡಿ ಮಾಲೀಕರಿಗೆ ಮಾತ್ರ ಸೀಮಿತವಾಗದೇ, ಸಾಮಾನ್ಯ ಜನರ ನಿತ್ಯದ ಜೀವನಕ್ಕೂ ನೇರವಾಗಿ ಪರಿಣಾಮ ಬೀರುತ್ತದೆ.

ಆತಿಥ್ಯ ಸೇವೆಗಳ ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಇದು ಪರೋಕ್ಷವಾಗಿ ಜನಸಾಮಾನ್ಯರ ಖರ್ಚನ್ನು ಹೆಚ್ಚಿಸುತ್ತದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋ ರೆಂಟ್‌ಗಳು ಮತ್ತು ಸಣ್ಣ ಆಹಾರ ವ್ಯಾಪಾರಿಗಳು ಬಳಸುತ್ತಾರೆ. ಇತ್ತೀಚಿನ ಬೆಲೆ ಏರಿಕೆ ಅವರಿಗೆ ಹೆಚ್ಚುವರಿ ಭಾರವನ್ನು ಉಂಟು ಮಾಡಿದೆ.

ಇದನ್ನೂ ಓದಿ: Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

ಆದಾಯದಲ್ಲಿ ಸ್ಥಿರತೆ ಇಲ್ಲದ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಹೊಡೆತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟರೆ ಬೇರೆ ಆಯ್ಕೆ ಇರದು. ಇದರಿಂದ ಟೀ, ಕಾಫಿ, ಇಡ್ಲಿ, ದೋಸೆ ಸೇರಿದಂತೆ ಶ್ರೀ ಸಾಮಾನ್ಯರ ನಿತ್ಯದ ತಿಂಡಿ, ತಿನಿಸುಗಳ ಬೆಲೆಗಳು ಏರಿಕೆಯಾಗಲಿವೆ. ಇದು ವಿಶೇಷವಾಗಿ ನಗರದ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಹೊರೆಯಾಗಲಿದೆ. ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಅನಿಲ ಮತ್ತು ಕಚ್ಚಾ ತೈಲದ ದರ ಏರಿಕೆಯಾಗಿದೆ ನಿಜ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನದ ಬೆಲೆ ಏರಿಕೆ, ರುಪಾಯಿ ಮೌಲ್ಯದ ಕುಸಿತದ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಅನಿವಾರ‍್ಯ ಎಂದು ಸರಕಾರ ತಿಳಿಸಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಇಲ್ಲ ಎಂದು ಸಾರಾಸಗಟಾಗಿ ತಿಳಿಸಿದ್ದ ಕೇಂದ್ರ ಸರಕಾರ, ಈಗ ಚುನಾವಣೆ ಮುಗಿದ ಬೆನ್ನಿಗೇ ಸಾವಿರ ರು. ಸಮೀಪ ಬೆಲೆ ಏರಿಕೆ ಮಾಡಿರುವುದು ಅಕ್ಷಮ್ಯ. ಪೆಟ್ರೋ ಲಿಯಂ ಉತ್ಪನ್ನಗಳ ಮೇಲಿನ ಸುಂಕದ ಪ್ರಮಾಣವನ್ನು ಕಡಿಮೆ ಮಾಡಿದಂತೆ ಎಲ್‌ಪಿಜಿ ಮಾರಾಟದ ಮೇಲಿನ ತೆರಿಗೆ ಮೊತ್ತವನ್ನು ಕಡಿತಗೊಳಿಸಿದ್ದರೆ ಗ್ರಾಹಕರ ಮೇಲೆ ಇಷ್ಟೊಂದು ದೊಡ್ಡ ಹೊರೆ ಹೇರುವ ಅಗತ್ಯ ಇರಲಿಲ್ಲ.

ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದು ಸರಕಾರದ ಪ್ರಮುಖ ಕರ್ತವ್ಯವಾಗಿದೆ. ಎಲ್‌ಪಿಜಿ ಯಾಗಿ ಬದಲಿಯಾಗಿ ಅಸ ಒಲೆ, ಎಲೆಕ್ಟ್ರಿಕ್ ಒಲೆಗಳಂತಹ ಪರ‍್ಯಾಯ ವ್ಯವಸ್ಥೆ ಅಳವಡಿಸಿಕೊಳ್ಳಲು ಸರಕಾರ ಪ್ರೋತ್ಸಾಹ ನೀಡಬೇಕು. ಹಳ್ಳಿಗಳಲ್ಲಿ ಎಲ್‌ಪಿಜಿ ಬಳಕೆಗೆ ಸರಕಾರ ಒತ್ತು ನೀಡುವ ಬದಲು ಸುಧಾರಿತ ಸೌರ ಒಲೆಗೆ ಪ್ರೋತ್ಸಾಹ ನೀಡಿದ್ದರೆ ಅನಿಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದಿತ್ತು. ಒಟ್ಟಿನಲ್ಲಿ, ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಜನಸಾಮಾನ್ಯರ ದುರ್ಭರವಾಗದಂತೆ ಸರಕಾರ ನೋಡಿಕೊಳ್ಳಬೇಕಾಗಿದೆ.