ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ನೀಟ್ ಪತ್ರಿಕೆ ಸೋರಿಕೆ ಅಕ್ಷಮ್ಯ

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಹೊಸದಲ್ಲವಾದರೂ, ಪ್ರತಿಸಲ ವೂ ಇದರ ಬಲಿಪಶುವಾಗುವ ವಿದ್ಯಾರ್ಥಿಗಳ ಕಷ್ಟ ಹೊಸದು. ವರ್ಷವಿಡೀ ಪರಿಶ್ರಮಪಟ್ಟು ಓದಿ, ಕೋಚಿಂಗ್ ಪಡೆದು, ಅದಕ್ಕಾಗಿ ಸಾಕಷ್ಟು ದೊಡ್ಡ ಮೊತ್ತದ ಹಣ ವಿನಿಯೋಗಿಸಿ ಪರೀಕ್ಷೆ ಬರೆದಿರುತ್ತಾರೆ.

ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಾತಿಗಾಗಿ ನಡೆದಿದ್ದ ನೀಟ್ ಯುಜಿ- 2026 ಪರೀಕ್ಷೆಯ ‘ಗೆಸ್ ಪತ್ರಿಕೆ’ ಸೋರಿಕೆಯಾಗಿದೆ. ಮೇ 3ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಗಳು ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಇಟಿ) ಆ ದಿನದ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

ಈ ಊಹೆ ಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದ್ದವು. ರಾಜಸ್ಥಾನದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾದ ವರದಿ ಬಂದಿತ್ತು. ಈ ಬಗ್ಗೆ ಎನ್‌ಟಿಎ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿತ್ತು.

ತನಿಖಾ ಸಂಸ್ಥೆಗಳು ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ಪರೀಕ್ಷೆಯನ್ನು ರದ್ದು ಗೊಳಿಸಲು ನಿರ್ಧರಿಸಿದೆ. ಇದರ ಮಾಸ್ಟರ್‌ಮೈಂಡ್ ಎನ್ನಲಾದ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Vishwavani Editorial: ಮಿತವ್ಯಯದ ಮಾತು ಸಕಾಲಿಕ

ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಹೊಸದಲ್ಲವಾದರೂ, ಪ್ರತಿಸಲವೂ ಇದರ ಬಲಿಪಶುವಾಗುವ ವಿದ್ಯಾರ್ಥಿಗಳ ಕಷ್ಟ ಹೊಸದು. ವರ್ಷವಿಡೀ ಪರಿಶ್ರಮಪಟ್ಟು ಓದಿ, ಕೋಚಿಂಗ್ ಪಡೆದು, ಅದಕ್ಕಾಗಿ ಸಾಕಷ್ಟು ದೊಡ್ಡ ಮೊತ್ತದ ಹಣ ವಿನಿಯೋಗಿಸಿ ಪರೀಕ್ಷೆ ಬರೆದಿರುತ್ತಾರೆ.

ಸ್ವಾರ್ಥಿಗಳ ದುರಾಸೆ, ಲಂಚ ಗುಳಿತನ, ಭ್ರಷ್ಟಾಚಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಹಣ, ಸಮಯ ಎಲ್ಲವೂ ನಷ್ಟವಾಗುತ್ತವೆ. ಮತ್ತೆ ಕಷ್ಟಪಟ್ಟು ಬರೆಯಬೇಕು. 23 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇವರ ಕಷ್ಟನಷ್ಟಕ್ಕೇನು ಪರಿಹಾರ? ಈ ಪರೀಕ್ಷೆ ಗಿರುವ ಸ್ಪರ್ಧೆ, ಇದು ಉಂಟು ಮಾಡುವ ಒತ್ತಡವೂ ಊಹಾತೀತ. ಅದರ ಜೊತೆ ಈ ಲೀಕೇಜ್‌ಗಳ ಕಾಟ.

ಇದು ಮುಂದಿನ ಅಧ್ಯಯನ, ಒಟ್ಟಾರೆ ಅಕಾಡೆಮಿಕ್ ಪ್ರಕ್ರಿಯೆಗೂ ಹೊಡೆತ ನೀಡುತ್ತದೆ. ನೀಟ್ ಪರೀಕ್ಷೆ ಬರೆದ ಮಕ್ಕಳು ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆದಿರುತ್ತಾರೆ. ಇದರ ಫಲಿತಾಂಶ ಅವಲಂಬಿಸಿ ಉಳಿದವುಗಳನ್ನು ನಿರ್ಧರಿಸುತ್ತಾರೆ.

ಇದರ ಫಲಿತಾಂಶ ಅನಿಶ್ಚಿತವಾದಷ್ಟೂ ವಿದ್ಯಾರ್ಥಿಗಳು ಮುಂದಿನ ಕೋರ್ಸ್ ನಿರ್ಧರಿಸ ಲಾಗದ ಸಂಕಷ್ಟಕ್ಕೆ ಬೀಳುತ್ತಾರೆ. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಳೆದು ಕೊಂಡರೆ ಅಂಥ ಪರೀಕ್ಷೆಗೆ ಬೆಲೆಯಿಲ್ಲ. ಆದರೂ ಪ್ರತಿಭೆಯನ್ನು ಅಳೆಯಲು ಇದು ಬಿಟ್ಟು ಬೇರೆ ದಾರಿಯಿಲ್ಲ.

ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ತನಿಖೆ, ಅಪರಾಧಿಗಳಿಗೆ ಶಿಕ್ಷೆ ಇತ್ಯಾದಿಗಳ ಮೂಲಕ ಮರುಸ್ಥಾಪಿಸುವುದರೊಂದಿಗೆ, ಮುಂದೆ ಹೀಗಾಗದಂತೆ ಕಠಿಣ ಪರೀಕ್ಷಾ ವ್ಯವಸ್ಥೆಯ ನಿರ್ಮಾಣವೂ ಆಗಬೇಕಿದೆ. ನೀಟ್ ಪರೀಕ್ಷೆ ಕಂಪ್ಯೂಟರೀಕರಣ ಮಾಡಬೇಕು ಎಂಭ ಬೇಡಿಕೆ ಬಹಳ ಕಾಲದಿಂದ ಇದೆ. ಅದನ್ನೂ ಪರಿಶೀಲಿಸಬಹುದು. ವೃತ್ತಿ ಶಿಕ್ಷಣ ಪರೀಕ್ಷೆಗಳು ಇನ್ನಷ್ಟು ವೃತ್ತಿಪರ ಆಗುವುದು ಅನಿವಾರ್ಯ.