ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಮಿತವ್ಯಯದ ಮಾತು ಸಕಾಲಿಕ

ಪೆಟ್ರೋಲ್, ಡೀಸೆಲ್ ಉಪಯೋಗ ಕಡಿಮೆ ಮಾಡಿ. ರಾಷ್ಟ್ರೀಯ ಹಿತಾಸಕ್ತಿಗಾಗಿ ಕೋವಿಡ್ ಕಾಲದ ಕ್ರಮಗಳನ್ನು ಪುನರುಜ್ಜೀವನಗೊಳಿಸಬೇಕು. ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಂ ಮಾಡಿ. ವಿದೇಶಿ ವಿನಿಮಯ ಮೀಸಲು ಉಳಿಸಲು, ವಿದೇಶಗಳಲ್ಲಿ ರಜೆ ಕಳೆಯುವುದನ್ನು ಮತ್ತು ವಿದೇಶಿ ವಿವಾಹಗಳನ್ನು ತಪ್ಪಿಸಿ.

Vishwavani Editorial: ಮಿತವ್ಯಯದ ಮಾತು ಸಕಾಲಿಕ

-

Profile
Ashok Nayak May 12, 2026 9:24 AM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಇಂಧನ ಉಳಿಸಲು ಅಗತ್ಯವಿರುವಲ್ಲ ಪ್ರಜೆಗಳು ಸಾರ್ವಜನಿಕ ಸಾರಿಗೆ, ಮೆಟ್ರೋ ಬಳಸುವುದನ್ನು ರೂಢಿಸಿಕೊಳ್ಳಿ. ಕಾರ್ ಪೂಲಿಂಗ್ ಅನುಸರಿಸಿ. ವಸ್ತುಗಳ ಸಾಗಾಟಕ್ಕೆ ರೈಲು ಉಪಯೋಗಿಸಿ. ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಿ.

ಪೆಟ್ರೋಲ್, ಡೀಸೆಲ್ ಉಪಯೋಗ ಕಡಿಮೆ ಮಾಡಿ. ರಾಷ್ಟ್ರೀಯ ಹಿತಾಸಕ್ತಿಗಾಗಿ ಕೋವಿಡ್ ಕಾಲದ ಕ್ರಮಗಳನ್ನು ಪುನರುಜ್ಜೀವನಗೊಳಿಸಬೇಕು. ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಂ ಮಾಡಿ. ವಿದೇಶಿ ವಿನಿಮಯ ಮೀಸಲು ಉಳಿಸಲು, ವಿದೇಶಗಳಲ್ಲಿ ರಜೆ ಕಳೆಯುವುದನ್ನು ಮತ್ತು ವಿದೇಶಿ ವಿವಾಹಗಳನ್ನು ತಪ್ಪಿಸಿ.

ಇದನ್ನೂ ಓದಿ: Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು

ಒಂದು ವರ್ಷ ದವರೆಗೆ ಅನಗತ್ಯ ಚಿನ್ನದ ಖರೀದಿ ತಪ್ಪಿಸಿ. ಖಾದ್ಯ ತೈಲ ಬಳಕೆ ಕಡಿಮೆ ಮಾಡಿ. ಇದು ರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಮತ್ತು ವೈಯಕ್ತಿಕ ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಎಂದು ಮನವಿ ಮಾಡಿದ್ದಾರೆ. ಅವರ ಮಾತುಗಳಿಗೆ ಇದೀಗ ನಾನಾರ್ಥ ಗಳು ವ್ಯಕ್ತವಾಗುತ್ತಿವೆ. ದೇಶ ಅಷ್ಟೊಂದು ಸಂಕಷ್ಟದಲ್ಲಿದೆಯೇ ಎಂದು ಹಲವರು ಪ್ರಶ್ನಿಸಿ ದ್ದಾರೆ.

ಜಾಗತಿಕ ಯುದ್ಧದಿಂದ ಉಂಟಾಗುವ ಕೆಲವು ಬಿಕ್ಕಟ್ಟುಗಳು, ಉದಾಹರಣೆಗೆ ಗ್ಯಾಸ್ ಕೊರತೆ ಯಂಥವು ಬೇಗನೆ ಗೊತ್ತಾಗುತ್ತವೆ. ಆದರೆ ಇನ್ನು ಕೆಲವು ಅಷ್ಟು ಶೀಘ್ರವಾಗಿ ಗೊತ್ತಾಗದೆ, ಒಳಗೊಳಗೇ ಕನ್ನ ಕೊರೆಯುತ್ತವೆ. ಷೇರು ಪೇಟೆಯಲ್ಲಿ ನಂಬಿಕೆ ಕಳೆದುಕೊಂಡ ಜನತೆ ಚಿನ್ನ ಖರೀದಿಸುವುದು ಅಂಥದೊಂದು.

ಚಿನ್ನದ ಖರೀದಿ ಹೆಚ್ಚಾದಷ್ಟೂ ಅದರ ಆಮದು, ವಿದೇಶಿ ವಿನಿಮಯ ಕೊರತೆ ಹೆಚ್ಚಾಗು ತ್ತದೆ. ಇದು ದೀರ್ಘಕಾಲಿಕ ಆಮದುಗಳಿಗೆ ಹೊಡೆತ ನೀಡುತ್ತದೆ. ಆ ನಿಟ್ಟಿನಲ್ಲಿ ಮೋದಿ ಸಲಹೆ ಸಕಾಲಿಕ. ಆರ್ಥಿಕ, ಷೇರು ಮಾರುಕಟ್ಟೆ ತಜ್ಞರು ಕೂಡ ಇದನ್ನೇ ಸೂಚಿಸಿದ್ದು, ದೊಡ್ಡ ಮೊತ್ತದ ಹೂಡಿಕೆಗಳಿಂದ ದೂರವಿರುವಂತೆ ತಿಳಿಸಿದ್ದಾರೆ.

ಹಿಂದೆಯೂ, ಯುದ್ಧದ ಸಮಯದಲ್ಲಿ, ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಒಂದು ಹೊತ್ತಿನ ಊಟ ಬಿಟ್ಟುಬಿಡಿ’ ಎಂದು ಕರೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ಇದು ಖರ್ಚು ಮಾಡುವ ಕಾಲವಲ್ಲ, ಉಳಿತಾಯ ಮಾಡುವ ಕಾಲ ಎಂಬುದೇ ಅದರರ್ಥ. ದೇಶಪ್ರೇಮ ಎಂದರೆ ಗಡಿಯಲ್ಲಿ ಪ್ರಾಣ ತ್ಯಾಗ ಮಾಡುವುದು ಮಾತ್ರವಲ್ಲ. ಇಂತಹ ಸಮಯದಲ್ಲಿ ನಮ್ಮ ಕರ್ತವ್ಯವನ್ನು ಅರಿತುಕೊಂಡು ಹೊಣೆಗಾರಿಕೆಯಿಂದ ಜೀವಿಸುವುದು ಕೂಡ ದೇಶಪ್ರೇಮವೇ. ಎಲ್ಲರ ಸಹಕಾರ, ಕೊಡುಗೆಯಿಂದ ಈಗ ಎದುರಾಗಿ ರುವ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.