ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ತಂದೆ-ತಾಯಿ ಕಡೆಗಣನೆ ಕಳವಳಕಾರಿ

ತಾಯಿ- ತಂದೆಯನ್ನು ಅನಾಥರನ್ನಾಗಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂಬ ಉದ್ದೇಶದಿಂದ ಹಿರಿಯ ನಾಗರಿಕ ರನ್ನು ಆರೈಕೆ ಮಾಡದೆ ನಿರ್ಲಕ್ಷಿಸುವ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ರದ್ದುಗೊಳಿಸಲು ಅವಕಾಶ ಕಲ್ಪಿ ಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದು ಸ್ವಾಗತಾರ್ಹ ನಡೆ

ತಂದೆ-ತಾಯಿ ಕಡೆಗಣನೆ ಕಳವಳಕಾರಿ

Profile Ashok Nayak Mar 20, 2025 5:08 AM

ತಾಯಿ- ತಂದೆಯನ್ನು ಅನಾಥರನ್ನಾಗಿ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ತಡೆ ಹಾಕಬೇಕು ಎಂಬ ಉದ್ದೇಶದಿಂದ ಹಿರಿಯ ನಾಗರಿಕ ರನ್ನು ಆರೈಕೆ ಮಾಡದೆ ನಿರ್ಲಕ್ಷಿಸುವ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ರದ್ದುಗೊಳಿಸಲು ಅವ ಕಾಶ ಕಲ್ಪಿಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅವರು ಸೂಚಿಸಿದ್ದು ಸ್ವಾಗತಾರ್ಹ ನಡೆ. ಆದರೆ ವಯಸ್ಸಾದ ಮೇಲೆ ತಂದೆ-ತಾಯಿ ಯನ್ನು ನೋಡಿಕೊಳ್ಳಬೇಕು ಎಂಬುದನ್ನು ಕಾನೂನಿನ ಮೂಲಕ ಹೇಳಬೇಕಾದ ಅಗತ್ಯ ಬಂದಿರು ವುದು ವಿಪರ್ಯಾಸ. ಮಕ್ಕಳನ್ನು ಪೋಷಕರು ಕಾಳಜಿ ಮಾಡುವುದು ಹಾಗೂ ವೃದ್ಧಾಪ್ಯದಲ್ಲಿ ಪೋಷಕರ ಆರೈಕೆಯನ್ನು ಮಕ್ಕಳು ಮಾಡುವುದು ಭಾರ ತೀಯ ಕುಟುಂಬ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಣೆ ಅಥವಾ ಹೊಣೆಗಾರಿಕೆಯಷ್ಟೇ ಆಗಿರದೆ, ಅದು ನಮ್ಮ ಜೀವನಮೌಲ್ಯಗಳ ಪರಂಪರೆಯ ಮುಖ್ಯ ಲಕ್ಷಣ ಆಗಿದೆ.

ಇದನ್ನೂ ಓದಿ: Vishwavani Editorial: ಜಗದ ಜನರ ‘ಮನ್ ಕೀ ಬಾತ್’

ಆದರೆ ಆ ಮೌಲ್ಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ ಎಂಬುದು ಕಳವಳಕಾರಿ. ತನ್ನ ತೋಳಲ್ಲಿ ಶಕ್ತಿ ಇರುವಷ್ಟು ದಿನ ತನ್ನ ಮಕ್ಕಳಿಗಾಗಿ ಆ ತಂದೆ-ತಾಯಿಯ ಪಡಬಾರದ ಕಷ್ಟ ಪಟ್ಟಿರುತ್ತಾರೆ. ಒಂದೊಂದು ರುಪಾಯಿಯನ್ನೂ ಕೂಡಿಟ್ಟು ತನ್ನ ಮಕ್ಕಳ ಭವಿಷ್ಯ ಕಟ್ಟಿರುತ್ತಾರೆ. ಆ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ವೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬ ಅಪೇಕ್ಷೆಯೂ ಸೇರಿರುತ್ತದೆ.

ಆದರೆ ವೃದ್ಧಾ ಯುವಜನತೆಯ ಸ್ವಾರ್ಥ ಮನೋಭಾವನೆಯಿಂದಾಗಿ ಹಿರಿಯರ ಆ ಆಸೆಗೆ ತಣ್ಣೀರು ಬೀಳುತ್ತಿದೆ. ಇದು ಹೀಗೆಯೇ ಮುಂದುವರಿದರೆ ಕುಟುಂಬ ವ್ಯವಸ್ಥೆಯ ಮೇಲೆ ಇದ್ದ ನಂಬಿಕೆಯೇ ಹೋಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಶ್ಲಾಘ ನೀಯ. ಈ ಸಮಸ್ಯೆಗೆ ಕಾನೂನು ಕ್ರಮದ ಮೂಲಕ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸರಕಾರ ಮುಂದಾಗಿರುವುದೇನೋ ಸರಿ. ಆದರೆ, ಸಮಾಜದಲ್ಲಿನ ನೈತಿಕ ಅಧಃಪತನವನ್ನು ತಡೆಗ ಟ್ಟುವುದು ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ.