ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇಸ್ಲಾಮ್ ಮೂಲಭೂತವಾದ ನಿಲ್ಲಲಿ

ಭಾರತಕ್ಕೆ ಉಗ್ರರನ್ನು ಕಳುಹಿಸಿ ಕೊಡುವ ಪಾಕಿಸ್ತಾನದಲ್ಲೂ ಉಗ್ರರ ಕಿರುಕುಳ ಕಡಿಮೆ ಯಿಲ್ಲ. ಸದಾ ಅಲ್ಲಿ ಬಾಂಬ್ ಸ್ಫೋಟಗೊಳ್ಳುತ್ತ ಆಗಾಗ ಜನ ಸಾಯುತ್ತಲೇ ಇರುತ್ತಾರೆ. ಆ ದೇಶದ ಅಭಿವೃದ್ಧಿಯೇ ಹಳ್ಳ ಹಿಡಿದಿದೆ. ಜಮ್ಮುಕಾಶ್ಮೀರ ರೋಗಗ್ರಸ್ತವಾಗುವುದಕ್ಕೆ ಭಯೋತ್ಪಾದನೆಯೇ ಕಾರಣ. ಅಫ್ಘಾನಿಸ್ತಾನ, ಸಿರಿಯಾದಂತಹ ಕೆಲವು ದೇಶಗಳು ಇಸ್ಲಾಮ್ ಹೆಸರಿನ ಭಯೋತ್ಪಾದನೆ ಯಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ.

Vishwavani Editorial: ಇಸ್ಲಾಮ್ ಮೂಲಭೂತವಾದ ನಿಲ್ಲಲಿ

-

Ashok Nayak
Ashok Nayak Dec 18, 2025 9:37 AM

ಈ ವರ್ಷ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ನ.10ರಂದು ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟಗೊಂಡು 15 ಮಂದಿ ಮೃತಪಟ್ಟಿದ್ದಾರೆ. ಡಿ.14ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಬ್ಬರು ಉಗ್ರರು ನಡೆಸಿದ ದಾಳಿಯಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

ಇದಕ್ಕೂ ಮುನ್ನ ಭಾರತ, ಇಸ್ರೇಲ್, ಅಮೆರಿಕ, ಅಫ್ಘಾನಿಸ್ತಾನ, ಸಿರಿಯಾ, ಇರಾನ್, ನ್ಯೂಜಿ ಲೆಂಡ್, ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿ ಇಸ್ಲಾಮ್ ಹೆಸರಿನಲ್ಲಿ ನಡೆದ ಹಿಂಸಾಚಾರ ಗಳು ಅಸಂಖ್ಯ. ಮಂಗಳವಾರ ಅಮೆರಿಕದ ವೈಟ್‌ಹೌಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಹೂದಿಗಳ ಹನುಕ್ಕಾ ಸಂಭ್ರಮಾಚರಣೆಗೆ ಚಾಲನೆ ನೀಡಿ, ಜಗತ್ತಿನ ಎಲ್ಲ ದೇಶಗಳು ಒಗ್ಗೂಡಿ ಇಸ್ಲಾಮ್ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Vishwavani Editorial: ಹೆಸರಿಗಿಂತ ಕೆಲಸ ಮುಖ್ಯ

ಸಾಮಾನ್ಯವಾಗಿ ಟ್ರಂಪ್ ಮಾತಾಡುವುದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವು ದಿಲ್ಲ. ಮೊದಲನೇ ಬಾರಿ ಅವರ ಹೇಳಿಕೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಇಸ್ಲಾಮ್ ಹೆಸರಿನಲ್ಲಿ ನಡೆಯುತ್ತಿರುವ ಉಗ್ರಕೃತ್ಯಗಳ ಬಗ್ಗೆ ಇಸ್ಲಾಮನ್ನು ಶುದ್ಧಭಾವದಿಂದ ನೋಡುವ ಮುಸ್ಲಿಮರೂ ಬೇಸತ್ತಿದ್ದಾರೆ.

ಭಾರತಕ್ಕೆ ಉಗ್ರರನ್ನು ಕಳುಹಿಸಿ ಕೊಡುವ ಪಾಕಿಸ್ತಾನದಲ್ಲೂ ಉಗ್ರರ ಕಿರುಕುಳ ಕಡಿಮೆ ಯಿಲ್ಲ. ಸದಾ ಅಲ್ಲಿ ಬಾಂಬ್ ಸ್ಫೋಟಗೊಳ್ಳುತ್ತ ಆಗಾಗ ಜನ ಸಾಯುತ್ತಲೇ ಇರುತ್ತಾರೆ. ಆ ದೇಶದ ಅಭಿವೃದ್ಧಿಯೇ ಹಳ್ಳ ಹಿಡಿದಿದೆ. ಜಮ್ಮುಕಾಶ್ಮೀರ ರೋಗಗ್ರಸ್ತವಾಗುವುದಕ್ಕೆ ಭಯೋ ತ್ಪಾದನೆಯೇ ಕಾರಣ. ಅಫ್ಘಾನಿಸ್ತಾನ, ಸಿರಿಯಾದಂತಹ ಕೆಲವು ದೇಶಗಳು ಇಸ್ಲಾಮ್ ಹೆಸರಿನ ಭಯೋತ್ಪಾದನೆಯಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿವೆ.

ಇದರ ವಿರುದ್ಧ ಜಗತ್ತಿನ ಎಲ್ಲ ದೇಶಗಳು ಒಗ್ಗೂಡಬೇಕು. ಇಸ್ಲಾಮ್ ಹೆಸರಿನಲ್ಲಿ ನಡೆಯುವ ಉಗ್ರವಾದವನ್ನು ಮುಸ್ಲಿಮ್ ರಾಷ್ಟ್ರಗಳೂ ಮುಂಚೂಣಿಯಲ್ಲಿ ನಿಂತು ಖಂಡಿಸಬೇಕು. ಈ ವೈಜ್ಞಾನಿಕ ಯುಗದಲ್ಲೂ ಇಸ್ಲಾಮ್ ಉಗ್ರವಾದ ಈ ಮಟ್ಟಕ್ಕೆ ಬೆಳೆಯುತ್ತಲೇ ಹೋಗುತ್ತಿರು ವುದು ಅಪಾಯಕಾರಿ.