ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಯುದ್ಧದ ಪಾರ್ಶ್ವ ಪರಿಣಾಮಗಳು

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಹೊಮ್ಮಿರುವ ಸಮರೋನ್ಮಾದದಿಂದಾಗಿ ಭಾರತದಲ್ಲಿ ಇಂಧನ ತೈಲಕ್ಕೆ ಹಾಹಾಕಾರ ಏರ್ಪಡುವಂಥ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕ ತಲೆದೋರಿರು ವುದು ಇಂಥ ಕರ್ಮಕ್ಕೆ ಒಂದು ಉದಾಹರಣೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯು ತ್ತಿದ್ದ ತೈಲದ ಸಾಗಣೆಗೆ ಅಂಕುಶ ಬಿದ್ದಿರು ವುದರಿಂದಾಗಿ, ಜಾಗತಿಕ ಇಂಧನ ಮಾರುಕಟ್ಟೆಗಳು ಸಂಕಷ್ಟಕ್ಕೆ ಸಿಲುಕಿವೆ.

ಪರಸ್ಪರ ಸಂಘರ್ಷದಲ್ಲಿ ತೊಡಗಿಸಿಕೊಂಡ ಎರಡು ದೇಶಗಳು ಅಥವಾ ಯುದ್ಧಬಣಗಳು ‘ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ನಿನ್ನ ಎರಡೂ ಕಣ್ಣು ಇಲ್ಲವಾಗಬೇಕು’ ಎಂಬ ರಣೋತ್ಸಾಹದಲ್ಲೇ ಹೋರಾಡುವುದು ವಾಡಿಕೆ. ಉಕ್ರೇನ್ ಮತ್ತು ರಷ್ಯಾ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಹಣಾಹಣಿಗಳಲ್ಲಿ ಈ ಕಹಿಸತ್ಯವನ್ನು ಅದಾಗಲೇ ಕಂಡಿದ್ದೇವೆ.

ಇದರ ಮುಂದುವರಿದ ಭಾಗವೆಂಬಂತೆ ಗೋಚರಿಸುತ್ತಿದೆ ಇರಾನ್‌ನ ಮೇಲೆ ಅಮೆರಿಕ ಮತ್ತು ಇಸ್ರೇಲ್‌ಗಳು ಸಾರಿರುವ ಸಮರ. ಯುದ್ಧದ ಸಹಭಾಗಿಗಳು ಪರಸ್ಪರರ ದಾಳಿಯಿಂದಾಗಿ ಒಂದಿಷ್ಟು ನೇರ ಹೊಡೆತವನ್ನು ತಿಂದು ನಷ್ಟವನ್ನು ಅನುಭವಿಸುವುದು ಒಂದೆಡೆಯಾದರೆ, ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ ಅದರ ಪಾರ್ಶ್ವ ಪರಿಣಾಮವನ್ನು ಅನುಭವಿಸಬೇಕಾದ ಕರ್ಮವು ಮಿಕ್ಕ ದೇಶಗಳ ಹೆಗಲೇರಿ ಬಿಡುತ್ತದೆ.

ಇದನ್ನೂ ಓದಿ: Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ

ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಹೊಮ್ಮಿರುವ ಸಮರೋನ್ಮಾದದಿಂದಾಗಿ ಭಾರತದಲ್ಲಿ ಇಂಧನ ತೈಲಕ್ಕೆ ಹಾಹಾಕಾರ ಏರ್ಪಡುವಂಥ ಪರಿಸ್ಥಿತಿ ಎದುರಾಗಲಿದೆ ಎಂಬ ಆತಂಕ ತಲೆ ದೋರಿರುವುದು ಇಂಥ ಕರ್ಮಕ್ಕೆ ಒಂದು ಉದಾಹರಣೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ತೈಲದ ಸಾಗಣೆಗೆ ಅಂಕುಶ ಬಿದ್ದಿರು ವುದರಿಂದಾಗಿ, ಜಾಗತಿಕ ಇಂಧನ ಮಾರುಕಟ್ಟೆಗಳು ಸಂಕಷ್ಟಕ್ಕೆ ಸಿಲುಕಿವೆ.

ಸಮರೋನ್ಮಾದ ಇನ್ನೂ ಸಾಕಷ್ಟು ದಿನಗಳವರೆಗೆ ಮುಂದುವರಿದರೆ ತಮ್ಮ ಚಟುವಟಿಕೆ ಗಳಿಗೆ ತೈಲ ಇಂಧನವನ್ನೇ ನೆಚ್ಚಿರುವ ಸಾಕಷ್ಟು ಕಾರ್ಯಕ್ಷೇತ್ರಗಳು ಏದುಸಿರು ಬಿಡಬೇಕಾಗುತ್ತದೆ ಮತ್ತು ಇದು ಹಲವು ನೆಲೆಗಟ್ಟುಗಳಲ್ಲಿ ಬೆಲೆಯೇರಿಕೆಗೆ ಕಾರಣ ವಾಗುತ್ತದೆ.

ಇದೊಂದು ‘ಸಾಮಾನ್ಯಜ್ಞಾನ’. ಯುದ್ಧ ದಿಂದ ಒದಗುವ ಇಂಥ ಅಪಾಯಗಳ ಅರಿವಿದ್ದೂ ಕೆಲ ದೇಶಗಳು ಹೀಗೆ ಸಮರೋನ್ಮಾದಕ್ಕೆ ಒಡ್ಡಿಕೊಳ್ಳುವುದೇಕೆ? ಎಂಬುದು ಯಕ್ಷಪ್ರಶ್ನೆ. ಮುಖ್ಯವಾಗಿ, ರಾಷ್ಟ್ರದ ಅಧಿಕಾರ ಗದ್ದುಗೆಯನ್ನು ಅಪ್ಪಿದವರು ಅದನ್ನೊಂದು ‘ಪಾರು ಪತ್ಯೆ’ ಎಂದು ಭ್ರಮಿಸಿಬಿಡುವುದರಿಂದ ಇಂಥ ಅಪಸವ್ಯಗಳು ಕಾಲ ಕಾಲಕ್ಕೆ ಸಂಭವಿಸು ತ್ತವೆ. ‘ಗ್ಲಾನಿ’ಯು ಒದಗಿದಾಗ ಧರ್ಮಸಂಸ್ಥಾಪನೆಗಾಗಿ ಅವತರಿಸಬೇಕಾದ ‘ಜ್ಞಾನಿ’ಗಾಗಿ ಜಗತ್ತು ಕಾಯುತ್ತಿದೆ...