Vishwavani Editorial: ಸುಸ್ಥಿರ ಬುನಾದಿಗೊಂದು ಇಟ್ಟಿಗೆ
ಕೆಲ ದಿನಗಳ ಹಿಂದಷ್ಟೇ ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ, ತರುವಾಯದಲ್ಲಿ ‘ದೊಡ್ಡಣ್ಣ’ ಅಮೆರಿಕದೊಂದಿಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದು ಗೊತ್ತಿರುವ ಸಂಗತಿಯೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಲೆದೋರಿದ್ದ ಆರ್ಥಿಕ ಅನಿಶ್ಚಿತತೆಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಎರಡು ಒಪ್ಪಂದಗಳು ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ವ್ಯಾಖ್ಯಾನಿಸಲಾಗಿತ್ತು.
-
ಕೆಲ ದಿನಗಳ ಹಿಂದಷ್ಟೇ ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ, ತರುವಾಯದಲ್ಲಿ ‘ದೊಡ್ಡಣ್ಣ’ ಅಮೆರಿಕದೊಂದಿಗೆ ಭಾರತವು ವ್ಯಾಪಾರ ಒಪ್ಪಂದಗಳನ್ನು ಮಾಡಿ ಕೊಂಡಿದ್ದು ಗೊತ್ತಿರುವ ಸಂಗತಿಯೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ತಲೆದೋರಿದ್ದ ಆರ್ಥಿಕ ಅನಿಶ್ಚಿತತೆಗಳನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಈ ಎರಡು ಒಪ್ಪಂದಗಳು ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ವ್ಯಾಖ್ಯಾನಿಸಲಾಗಿತ್ತು.
ಇದರ ಮುಂದುವರಿದ ಭಾಗವೆಂಬಂತೆ ಭಾರತವು ಈಗ ಇಸ್ರೇಲ್‌ನ ಜತೆಗೂ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಡಿಯಿಟ್ಟಿದೆ. ಇದು ನಿಜಕ್ಕೂ ಶ್ಲಾಘನೀಯ ಬೆಳವಣಿಗೆಯೇ ಸರಿ. ಏಕೆಂದರೆ, ಕ್ಷಿಪಣಿ ನಿರೋಧಕ ತಂತ್ರಜ್ಞಾನ ಸೇರಿದಂತೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಹೆಜ್ಜೆಗಳು ಇದರಲ್ಲಿ ಅಂತರ್ಗತವಾಗಿವೆ.
ಇದನ್ನೂ ಓದಿ: Vishwavani Editorial: ಅಮೆರಿಕ ಅಧ್ಯಕ್ಷರ ಹುಸಿ ಸಂಭ್ರಮ
ಇಸ್ರೇಲ್ ಜತೆಗಿನ ವ್ಯಾಪಾರ ವರ್ಧನೆ, ಭಯೋತ್ಪಾದನಾ ನಿಗ್ರಹದ ಆಶಯಕ್ಕೆ ಪರಸ್ಪರ ಕೈಜೋಡಿಸುವಿಕೆ ಮುಂತಾದ ಆಶಯಗಳೂ ಇಲ್ಲಿ ಹೊಮ್ಮಿವೆ. ಅಂತಾರಾಷ್ಟ್ರೀಯ ಬಾಂಧವ್ಯ ಎಂಬುದು ಯಾವುದೇ ರಾಷ್ಟ್ರದ ಪಾಲಿಗೆ ಮಹತ್ತರ ಅಂಶವೇ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಅಂಶಕ್ಕೆ ಸಾಕಷ್ಟು ಮಹತ್ವವನ್ನು ಕೊಡುತ್ತಲೇ ಬರಲಾಗಿದೆ. ಆದರೆ ಕಳೆದೊಂದು ದಶಕದಲ್ಲಿ ಈ ಬಾಂಧವ್ಯಕ್ಕೆ ವಿಭಿನ್ನ ಆಯಾಮ ದೊರೆತಿರುವುದಲ್ಲದೆ, ಭಾರತವನ್ನು ‘ಹಾವಾಡಿಗರ ದೇಶ’ ಎಂದೇ ಕರೆಯುತ್ತಿದ್ದ ವಿಶ್ವದ ಕೆಲ ದೇಶಗಳೂ ತಮ್ಮ ಆ ಗ್ರಹಿಕೆಯನ್ನು ಕೈಬಿಟ್ಟು ಭಾರತದ ಸ್ನೇಹಕ್ಕೆ ಹಾತೊರೆಯುವಂಥ ವಾತಾವರಣವನ್ನು ಈ ಕಾಲಘಟ್ಟವು ಹುಟ್ಟುಹಾಕಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಭಾರತವು ‘ವಿಶ್ವಗುರು’ ಎನಿಸಿಕೊಳ್ಳಲು ಏನೆಲ್ಲಾ ಹೆಜ್ಜೆಗಳನ್ನು ಇಡಬೇಕಿದೆಯೋ, ಯಾವೆಲ್ಲಾ ಸತ್ವಪರೀಕ್ಷೆಗಳಿಗೆ ಒಡ್ಡಿಕೊಳ್ಳಬೇಕಿದೆಯೋ, ಅವೆಲ್ಲವೂ ಯಥೋಚಿತವಾಗಿ ಕೈಗೂಡುತ್ತಿವೆ ಎಂಬುದು ಸಮಾಧಾನಕರ ಸಂಗತಿ. ಅದು ಸಾರ್ಥಕ ರಾಷ್ಟ್ರ ನಾಯಕತ್ವದ ದ್ಯೋತಕವೂ ಹೌದು...