ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

ನೇರವಾಗಿ ಎಐ ಕೋರ್ಸ್‌ʼಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ ಅಥವಾ ವೈಯಕ್ತಿಕವಾಗಿ ಯಾದರೂ ಎಐಯನ್ನು ಕಲಿಯುತ್ತಿದ್ದಾರೆ. ಇಡೀ ಜಗತ್ತನ್ನು ಎಐ ತಂತ್ರಜ್ಞಾನ ಆವರಿಸಿಕೊಂಡಿರುವ ರೀತಿಗೆ ಇದು ಉದಾಹರಣೆ. ಎಐ ಕಲಿಕೆ ಅನಿವಾರ್ಯ ಎಂದು ಬಹಳ ಬೇಗನೆ ಈಗಿನ 5ಜಿ ತಲೆಮಾರಿನ ಜನಾಂಗ ಅರಿತುಕೊಂಡಿದೆ.

ದೆಹಲಿಯಲ್ಲಿ ಫೆ.16ರಿಂದ ಕೃತಕ ಬುದ್ಧಿಮತ್ತೆ (ಎಐ ಇಂಪ್ಯಾಕ್ಟ್ ಸಮಿಟ್) ಶೃಂಗಸಭೆ ಆರಂಭವಾಗಿದೆ. ಜಗತ್ತಿನ 20 ದೇಶಗಳ ಗಣ್ಯರು, 40ಕ್ಕೂ ಅಧಿಕ ಕಂಪನಿಗಳ ಸಿಇಒಗಳು ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಎಐ ಅನ್ನುವುದು ಎಲ್ಲ ಕಡೆ ಕೇಳಿ ಬರುತ್ತಿರುವ ಪದವಾದ್ದ ರಿಂದ ಇದನ್ನು ಬಹುತೇಕರು ಗಂಭೀರವಾಗಿ ಸ್ವೀಕರಿಸಲಿಕ್ಕಿಲ್ಲ.

ಈ ಶೃಂಗದಲ್ಲಿ ಎಐನಿಂದಾಗುವ ಹಲವು ರೀತಿಯ ಪರಿಣಾಮಗಳನ್ನು ವಿಷದವಾಗಿ ಚರ್ಚಿಸಲಾಗುತ್ತದೆ. ಎಐಯನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು ಎಂದೂ ವಿಶ್ಲೇಷಿಸಲಾಗುತ್ತದೆ. ಒಟ್ಟಾರೆ ಎಐನ ಹಲವು ಮಗ್ಗಲುಗಳನ್ನು ಇಲ್ಲಿ ಎತ್ತಿಕೊಳ್ಳ ಲಾಗುತ್ತದೆ.

ಹಿಂದೆ ಜಗತ್ತಿನಲ್ಲಿ ಕಂಪ್ಯೂಟರ್ ಬಂದಾಗ ಅದನ್ನು ಜನರು ಹಲವು ದಶಕಗಳ ಕಾಲ ಗಂಭೀರವಾಗಿ ಪರಿಗಣಿಸಿರಲಿಲ್ಲ. 1992ರ ನಂತರ ಕಂಪ್ಯೂಟರ್ ಜನರ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಲು ಆರಂಭವಾಯಿತು. ಈಗ ಇಡೀ ಜಗತ್ತನ್ನು ಅಂತರ್ಜಾಲ ಆವರಿಸಿಕೊಂಡಿದೆ. ಇದರ ಮುಂದುವರಿದ ಭಾಗವೇ ಎಐ.

ಇದನ್ನೂ ಓದಿ: Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

ವಿಶೇಷವೆಂದರೆ ಕಂಪ್ಯೂಟರ್, ಅಂತರ್ಜಾಲದಂತೆ ಎಐಯನ್ನು ಸ್ವೀಕರಿಸಲು ಜನ ತಡ ಮಾಡುತ್ತಿಲ್ಲ. ಪಿಯುಸಿ ಹಂತದಲ್ಲೇ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಎಐ ಆಧಾರಿತ ಕೋರ್ಸ್‌ಗಳನ್ನು ಮಾಡಬಹುದೇ ಎಂದು ಯೋಚಿಸಲು ಶುರು ಮಾಡುತ್ತಿದ್ದಾರೆ.

ನೇರವಾಗಿ ಎಐ ಕೋರ್ಸ್‌ʼಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ ಅಥವಾ ವೈಯಕ್ತಿಕವಾಗಿ ಯಾದರೂ ಎಐಯನ್ನು ಕಲಿಯುತ್ತಿದ್ದಾರೆ. ಇಡೀ ಜಗತ್ತನ್ನು ಎಐ ತಂತ್ರಜ್ಞಾನ ಆವರಿಸಿ ಕೊಂಡಿರುವ ರೀತಿಗೆ ಇದು ಉದಾಹರಣೆ. ಎಐ ಕಲಿಕೆ ಅನಿವಾರ್ಯ ಎಂದು ಬಹಳ ಬೇಗನೆ ಈಗಿನ 5ಜಿ ತಲೆಮಾರಿನ ಜನಾಂಗ ಅರಿತುಕೊಂಡಿದೆ.

ವೃತ್ತಿರಂಗದಲ್ಲಿ ಎಐನಿಂದ ಉದ್ಯೋಗಗಳು ಕಿತ್ತುಕೊಂಡು ಹೋಗುತ್ತಿವೆ. ಇದುವರೆಗೆ ವ್ಯಕ್ತಿ ಗಳು ಮಾಡುತ್ತಿದ್ದ ಕೆಲಸವನ್ನು ಈಗ ಎಐ ತನ್ನಿಂತಾನೇ ಮಾಡಿ ಮುಗಿಸುತ್ತಿದೆ. ಎಲ್ಲ ಕಂಪನಿಗಳು ತಮಗೆ ಸಂಬಳ ಉಳಿಯುತ್ತದೆ ಎಂದು ಉದ್ಯೋಗಿಗಳನ್ನು ಮುಲಾಜಿಲ್ಲದೇ ಕಿತ್ತು ಹಾಕುತ್ತಿವೆ. ಆ ಉದ್ಯೋಗಿಗಳಿಗೆ ಪರ್ಯಾಯ ಆಯ್ಕೆಯೇನು ಎಂದು ಗೊತ್ತಾಗುತ್ತಿಲ್ಲ.

ಬಹುಶಃ ಒಂದು ಜನಾಂಗ ಇದರಿಂದ ದೊಡ್ಡಮಟ್ಟದಲ್ಲಿ ತೊಂದರೆಗೊಳಗಾಗುತ್ತದೆ. ಐಟಿ ಕ್ಷೇತ್ರದಲ್ಲಂತೂ ಉದ್ಯೋಗಿಗಳಿಗೆ ಎಐ ನುಂಗಲಾರದ ತುತ್ತಾಗಿದೆ. ಎಐ ಅಳವಡಿಕೆ ಸರಿಯೇ... ಆದರೆ ಮುಂದಿನ ಜೀವನ ಹೇಗೆ ಎಂಬ ಚಿಂತೆಯನ್ನು ಹೋಗಲಾಡಿಸಲೂ ದೆಹಲಿ ಶೃಂಗದಲ್ಲಿ ಒಂದು ದಾರಿ ಹುಡುಕುವುದು ಒಳಿತು.