ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

ಇದುವರೆಗೆ 17 ವರ್ಷಗಳ ಕಾಲ ಅವರು ತಮ್ಮ ದೇಶಕ್ಕೆ ಕಾಲು ಹಾಕಿರಲಿಲ್ಲ. ಇತ್ತ ನೆರೆಯ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಹೊರದಬ್ಬಿದ್ದು ಮಾತ್ರವಲ್ಲ, ಅವರನ್ನು ಜೈಲಿನಲ್ಲಿಡಲಾಗಿದೆ. ಅವರ ಎದುರಾಳಿ ಪಕ್ಷ ಅಧಿಕಾರಕ್ಕೇರಿದೆ. ಈ ಎರಡೂ ದೇಶಗಳಲ್ಲಿ ತಲೆತಲಾಂತರದಿಂದ ಇಂತಹ ವಿದ್ಯಮಾನಗಳೇ ನಡೆದುಕೊಂಡು ಬಂದಿವೆ.

Vishwavani Editorial: ಬಾಂಗ್ಲಾ ಅರಾಜಕತೆ ನೀಗುತ್ತಾ ಬಿಎನ್‌ಪಿ?

-

Ashok Nayak
Ashok Nayak Feb 17, 2026 2:35 PM

2024ರಿಂದ ಬಾಂಗ್ಲಾದಲ್ಲಿ ಶುರುವಾದ ಹಿಂಸಾಚಾರ, ಅರಾಜಕತೆ ಮಂಗಳವಾರಕ್ಕೆ ಮುಗಿಯುವ ನಿರೀಕ್ಷೆಯಿದೆ. ಸುದೀರ್ಘಕಾಲ ಬಿಎನ್‌ಪಿ ಮತ್ತೆ ಅಧಿಕಾರಕ್ಕೇರಲಿದೆ. ಒಬ್ಬರು ಬದುಕಬೇಕಾದರೆ ಇನ್ನೊಬ್ಬರನ್ನು ಸಾಯಿಸಬೇಕು ಎಂಬ ನೀತಿಯೇ ಬಾಂಗ್ಲಾ ಮತ್ತು ಪಾಕಿಸ್ತಾನಗಳ ತತ್ವವಿದ್ದಂತಿದೆ.

ಬಾಂಗ್ಲಾದಲ್ಲಿ ಅರಾಜಕ ವಾತಾವರಣ ಸೃಷ್ಟಿಸಿ, ಶೇಖ್ ಹಸೀನಾರನ್ನು ಓಡಿಸಿ, ಅವರ ಅವಾಮಿ ಲೀಗ್ ಪಕ್ಷವನ್ನು ನಿಷೇಧಿಸಿ, ಬಹುತೇಕ ಏಕಪಕ್ಷೀಯ ರೀತಿಯಲ್ಲಿ ಚುನಾವಣೆ ನಡೆದು, ಬಿಎನ್‌ಪಿ ಅಧಿಕಾರಕ್ಕೇರಿದೆ. ಆ ಪಕ್ಷದ ನಾಯಕ ರೆಹಮಾನ್ ತಾರಿಖ್ ಪ್ರಧಾನಿ ಯಾಗಲು ಸಜ್ಜಾಗಿದ್ದಾರೆ.

ಇದುವರೆಗೆ 17 ವರ್ಷಗಳ ಕಾಲ ಅವರು ತಮ್ಮ ದೇಶಕ್ಕೆ ಕಾಲು ಹಾಕಿರಲಿಲ್ಲ. ಇತ್ತ ನೆರೆಯ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್‌ರನ್ನು ಅಧಿಕಾರದಿಂದ ಹೊರದಬ್ಬಿದ್ದು ಮಾತ್ರವಲ್ಲ, ಅವರನ್ನು ಜೈಲಿನಲ್ಲಿಡಲಾಗಿದೆ. ಅವರ ಎದುರಾಳಿ ಪಕ್ಷ ಅಧಿಕಾರಕ್ಕೇರಿದೆ. ಈ ಎರಡೂ ದೇಶಗಳಲ್ಲಿ ತಲೆತಲಾಂತರದಿಂದ ಇಂತಹ ವಿದ್ಯಮಾನಗಳೇ ನಡೆದುಕೊಂಡು ಬಂದಿವೆ. ಇಷ್ಟರ ನಡುವೆ ರೆಹಮಾನ್ ತಾರಿಖ್ ತಮ್ಮ ಪಕ್ಷಕ್ಕೆ ಬಹುಮತ ಬಂದಕೂಡಲೇ ಶೇಖ್ ಹಸೀನಾರನ್ನು ತಮಗೆ ಒಪ್ಪಿಸಿ ಎಂದು ಭಾರತಕ್ಕೆ ಆಗ್ರಹವಿಟ್ಟಿದ್ದಾರೆ.

ಇದನ್ನೂ ಓದಿ: Vishwavani Editorial: ಸಂಕಟದ ವೇಳೆಯೂ ಸುಂಕವೇ?

ಬಿಎನ್‌ಪಿ ಎಂದಿನಿಂದಲೂ ಭಾರತ ವಿರೋಧಿ ನಿಲುವನ್ನಿಟ್ಟುಕೊಂಡೇ ಬಂದ ಪಕ್ಷ. ಈಗಂತೂ ಬಾಂಗ್ಲಾದಲ್ಲಿ ಭಾರತ ವಿರೋಧಿ ನಿಲುವು ತಾರಕಕ್ಕೇರಿದೆ. ಅದರ ಪರಿಣಾಮ ಆ ದೇಶಗಳಲ್ಲಿ ಬದುಕುತ್ತಿರುವ ಹಿಂದೂಗಳು ನರಕ ಅನುಭವಿಸುವಂತಾಗಿದೆ. ನಿರಂತರವಾಗಿ ಹಿಂದೂಗಳನ್ನು ಕೊಲೆ ಮಾಡಲಾಗುತ್ತಿದೆ.

ವಿಷಯ ಹೀಗಿದ್ದರೂ ಭಾರತ ಸರಕಾರ ಅದರ ಬಗ್ಗೆ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆ ದೇಶದ ಆಂತರಿಕ ವಿಚಾರಕ್ಕೆ ಕೈಹಾಕುವುದೇಕೆ ಎಂಬ ನಿಲುವಿನಲ್ಲಿ ಸುಮ್ಮನಿದ್ದಂತಿದೆ. ಆದರೆ ಇದು ಭಾರತದೊಳಗೆ ಒಂದು ಅಸಹನೆ ಸೃಷ್ಟಿಸಿದೆ. ನೆರೆಯ ದೇಶದಲ್ಲಿ ನಡೆಯುತ್ತಿರುವ ಅನಗತ್ಯ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನಿರ ಲಾರದ ಸ್ಥಿತಿಗೆ ಇಲ್ಲಿನ ಜನರು ತಲುಪಿದ್ದಾರೆ.

ಒಂದು ವೇಳೆ ಈ ದಾವಾಗ್ನಿ ಏನಾದರೂ ಭುಗಿಲೆದ್ದರೆ, ಮತ್ತೊಂದು ಕೋಮುಸಂಘರ್ಷ ವಾದರೂ ಆಗಬಹುದು. ಇಂತಹ ಸ್ಥಿತಿ ಎದುರಾಗದಂತೆ ನೋಡಿಕೊಳ್ಳುವ ಅಗತ್ಯ ಬಾಂಗ್ಲಾ ಕ್ಕೂ ಇದೆ. ರೆಹಮಾನ್ ತಾರಿಖ್ ತಮ್ಮ ನಾಡಿನ ಹಿಂದೂಗಳಿಗೆ ಭದ್ರಭಾವವನ್ನುಂಟು ಮಾಡುವ ಅಗತ್ಯವಿದೆ.