ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಹಾಲು ದುಬಾರಿಯ ಬರೆ

ಲೀಟರ್‌ಗೆ 8 ರೂಪಾಯಿ ಕನಿಷ್ಠ ಏರಿಸುವುದಂತೂ ಖಚಿತವಾಗಿದೆ. ಈಗ ಲೀಟರ್ 46 ರೂ. ಇರುವ ನಂದಿನಿ ಹಾಲಿನ ದರ ಇದರಿಂದ 54 ರೂ. ಆಗಲಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಏರಿಕೆ ಆಗುತ್ತಿದೆ. ಈ ಮೊದಲೆಲ್ಲ 2, 3 ರೂಪಾಯಿ ಏರಿಸುತ್ತಿದ್ದರು. ಬೆಲೆ ಏರಿಕೆಯ ಸರಪಣಿಗೆ ಅದೇ ಮೂಲವಾಗುತ್ತಿತ್ತು. ಹಾಲು ದರ ಏರಿದ ಕೂಡಲೇ ಹಾಲಿನ ಉತ್ಪನ್ನಗಳು ಮತ್ತು ಕಾಫಿ ಟೀ ಬೆಲೆ ಏರಿಕೆ ಸಾಮಾನ್ಯ.

ರಾಜ್ಯದಲ್ಲಿ ಹಾಲು, ಹಾಲಿನ ಉತ್ಪನ್ನಗಳ ದರಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮುಖ್ಯ ಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದು ಗ್ರಾಹಕರ ಮೇಲಿನ ಮತ್ತೊಂದು ಹೊರೆ, ಅಥವಾ ಬರೆ. ರಾಜ್ಯದ ಸಹಕಾರ ಹಾಲು ಒಕ್ಕೂಟಗಳು ಪ್ರತಿ ಲೀಟರ್‌ಗೆ 8 ರಿಂದ 10 ರೂ. ಹೆಚ್ಚಿಸಲು ಬೇಡಿಕೆ ಇಟ್ಟಿವೆ.

ಲೀಟರ್‌ಗೆ 8 ರೂಪಾಯಿ ಕನಿಷ್ಠ ಏರಿಸುವುದಂತೂ ಖಚಿತವಾಗಿದೆ. ಈಗ ಲೀಟರ್ 46 ರೂ. ಇರುವ ನಂದಿನಿ ಹಾಲಿನ ದರ ಇದರಿಂದ 54 ರೂ. ಆಗಲಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಏರಿಕೆ ಆಗುತ್ತಿದೆ. ಈ ಮೊದಲೆಲ್ಲ 2, 3 ರೂಪಾಯಿ ಏರಿಸುತ್ತಿದ್ದರು. ಬೆಲೆ ಏರಿಕೆಯ ಸರಪಣಿಗೆ ಅದೇ ಮೂಲವಾಗುತ್ತಿತ್ತು. ಹಾಲು ದರ ಏರಿದ ಕೂಡಲೇ ಹಾಲಿನ ಉತ್ಪನ್ನಗಳು ಮತ್ತು ಕಾಫಿ ಟೀ ಬೆಲೆ ಏರಿಕೆ ಸಾಮಾನ್ಯ.

ಇದನ್ನೂ ಓದಿ: Vishwavani Editorial: ಭಾರತೀಯನ ಹೀರೋಗಿರಿ

8 ರೂಪಾಯಿ ಏರಿದರಂತೂ ಕಾಫಿ ಕಪ್‌ಗೆ 5 ರೂ.ನಷ್ಟು ಏರುವ ಎಲ್ಲ ಸಾಧ್ಯತೆಯೂ ಇದೆ. ಹಾಲು. ಮೊಸರು ಇವೆಲ್ಲ ಐಷಾರಾಮಿ ಸವಲತ್ತಲ್ಲ. ಅದು ರಾಜ್ಯದ ಪ್ರತಿಯೊಬ್ಬನಿಗೂ ಬೇಕಾಗುವ ಅವಶ್ಯಕ ವಸ್ತು. ಅದಿಲ್ಲದೇ ದಿನ ಬೆಳಗಾಗುವುದೇ ಇಲ್ಲ. ಹೈನುಗಾರಿಕೆಗೆ ಅಗತ್ಯವಾಗಿರುವ ಪಶು ಆಹಾರ, ಮೇವು, ಔಷಧೋಪಚಾರ, ಕಾರ್ಮಿಕರ ಕೂಲಿ, ಇತರ ನಿರ್ವಹಣಾ ವೆಚ್ಚಗಳು ನಿರಂತರ ವಾಗಿ ಹೆಚ್ಚುತ್ತಿರುವುದರಿಂದ ಹಾಲಿನ ಉತ್ಪಾದನಾ ವೆಚ್ಚವೂ ಏರಿದೆ ಎಂಬುದು ಬೆಲೆಯೇರಿಕೆಗೆ ನೀಡಲಾಗಿರುವ ಕಾರಣ.

ಪ್ರಸ್ತುತ ಪ್ರತಿ ಲೀಟರ್ ಹಾಲಿನ ಮೇಲೆ ರೈತರಿಗೆ ಸರಾಸರಿ 35 ರೂ. ಪ್ರೋತ್ಸಾಹಧನ ಸಿಗುತ್ತಿದೆ. ರೈತರಿಗೆ ಈ ಬೆಲೆಯೇರಿಕೆ ಸಿಹಿ ಸುದ್ದಿ. ಆದರೆ ಒಂದು ವರ್ಗವನ್ನು ಖುಷಿಯಾಗಿಟ್ಟು ಇನ್ನೊಂದರ ಮೇಲೆ ದರದ ಹೊರೆ ಹೊರಿಸುವುದು ಒಳ್ಳೆಯ ಉಪಕ್ರಮವಲ್ಲ. ಪರೋಕ್ಷವಾಗಿ ರೈತರೂ ಬೆಲೆಯೇ ರಿಕೆಯ ದುಷ್ಫಲಾನುಭವಿಗಳೇ ಆಗುತ್ತಾರೆ. ರೈತರಿಗೆ ಹೆಚ್ಚಿನ ಲಾಭ ದೊರೆಯಬೇಕು. ಆದರೆ ಗ್ರಾಹಕರಿಗೆ ಹೊರೆ ಆಗಬಾರದು.

ಇದಕ್ಕಾಗಿ ರೈತರಿಗೆ ಸುಲಭ ದರದಲ್ಲಿ ಮೇವು, ಪಶು ಆಹಾರ ಲಭಿಸುವಂತೆ ಮಾಡಬೇಕಾದುದು ಸರಕಾರದ ಕರ್ತವ್ಯ. ಹೈನುಗಾರಿಕೆ ಆರ್ಥಿಕ ಹೊರೆಯಾಗದಂತೆ, ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಿನ ಲಾಭಾಂಶ ಸಿಗುವಂತೆ ಮಾಡುವ ಹೊಣೆ ಸರಕಾರದ್ದು. ಗೋಮಾಳಗಳನ್ನು ರಕ್ಷಿಸಬೇಕು. ಹಾಲಿನ ಉತ್ಪನ್ನಕ್ಕೆ ಪೂರಕವಾದ ಹಸಿರು ಮೇವು ಹೆಚ್ಚು ದೊರೆಯುವಂತೆ ಮಾಡಬೇಕು.