ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಭಾರತೀಯನ ಹೀರೋಗಿರಿ

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ - ದುಬೈ ವಿಮಾನದಲ್ಲಿ ನಡೆದ ಭಯೋತ್ಪಾದನೆಯ ಹಾಗೂ ಧಿರೋದಾತ್ತ ಘಟನೆ ಈಗ ಜಾಗತಿಕ ಸುದ್ದಿ. ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಒಮಾನ್ ಮೂಲದ ಸಹ ಪೈಲಟ್‌ನನ್ನು ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರು ಪ್ರಾಣದ ಹಂಗು ತೊರೆದು ಆತನೊಂದಿಗೆ ಹೋರಾಡಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಇವರ ಸಾಹಸವನ್ನು ಜಾಗತಿಕ ನಾಯಕರು ಶ್ಲಾಘಿಸಿದ್ದಾರೆ.

Vishwavani Editorial: ಭಾರತೀಯನ ಹೀರೋಗಿರಿ

-

Profile
Ashok Nayak Oct 2, 2026 10:45 AM

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ - ದುಬೈ ವಿಮಾನದಲ್ಲಿ ನಡೆದ ಭಯೋತ್ಪಾದನೆಯ ಹಾಗೂ ಧಿರೋದಾತ್ತ ಘಟನೆ ಈಗ ಜಾಗತಿಕ ಸುದ್ದಿ. ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಒಮಾನ್ ಮೂಲದ ಸಹ ಪೈಲಟ್‌ನನ್ನು ಭಾರತೀಯ ಮೂಲದ ಪೈಲಟ್ ಸ್ಮಿತ್ ಮಚ್ಚಾರ್ ಅವರು ಪ್ರಾಣದ ಹಂಗು ತೊರೆದು ಆತನೊಂದಿಗೆ ಹೋರಾಡಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಇವರ ಸಾಹಸವನ್ನು ಜಾಗತಿಕ ನಾಯಕರು ಶ್ಲಾಘಿಸಿದ್ದಾರೆ.

ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತದ ಹೆಮ್ಮೆಯ ಪುತ್ರ ಸ್ಮಿತ್‌ಗೆ ಪ್ರಶಸ್ತಿಯನ್ನೂ ಘೋಷಿಸಲಾಗಿದೆ. ಘಟನೆ ಭಯೋತ್ಪಾದಕ ಯತ್ನ ಎಂದು ಇಸ್ರೇಲ್ ಹೇಳಿದೆ. ಆದರೆ ಘಟನೆಯ ಹಿಂದೆ ಏನಿದೆ ಎಂಬುದು ಸಮಗ್ರ ತನಿಖೆಯಿಂದ ಗೊತ್ತಾಗಬೇಕಿದೆ. ಏನಿದ್ದರೂ ಇದು, ಭಾರತೀಯ ಪೈಲಟ್‌ನ ಸಮಯೋಚಿತ ಹೀರೋಗಿರಿ ಇಲ್ಲದೇ ಹೋಗಿದ್ದರೆ ಭಯಾನಕ ದುರಂತವಾಗಿ ಪರಿಣಮಿಸುತ್ತಿತ್ತು ಎಂಬುದಂತೂ ಸತ್ಯ.

33000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ 30 ಸೆಕೆಂಡ್‌ನಲ್ಲಿ 15000 ಅಡಿ ಎತ್ತರಕ್ಕೆ ಪತನಗೊಂಡಿತ್ತು. ದುರಂತ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ್ದಾನೆ ಸ್ಮಿತ್. ಗುಜರಾತ್ ಮೂಲದ ಸ್ಮಿತ್ 14 ವರ್ಷಗಳ ಪೈಲಟ್ ಅನುಭವ ಹೊಂದಿದವರು. ಪೈಲಟ್‌ಗಿರಿ ಬಹಳ ಚಾತುರ್ಯ, ಸಂಯಮ, ಪ್ರಸಂಗಾವಧಾನವನ್ನು ಅಪೇಕ್ಷಿಸುವ ವೃತ್ತಿ.

ಇದನ್ನೂ ಓದಿ: Vishwavani Editorial: ಎಂಆರ್‌ಪಿಎಲ್ ಸ್ಫೋಟದ ಗಂಭೀರತೆ

ವಿಮಾನ ಪ್ರಯಾಣದ ಶೇಕಡಾ ನೂರು ಸುರಕ್ಷಿತ ಅನಿಸಲು ಪೈಲಟ್‌ನ ಕೊಡುಗೆಯೂ ಮುಖ್ಯ. ಇದು ಹೆಚ್ಚಿನ ಒತ್ತಡವನ್ನೂ ಹೊಂದಿರುತ್ತದೆ. ಈ ಹಿಂದೆ ಒಂದು ಪಾಡ್‌ಕ್ಯಾಸ್ಟ್‌ನಲ್ಲಿ ಇವರು ‘ಕ್ಯಾಬಿನ್ ಸಿಬ್ಬಂದಿಯ ಮಹತ್ವ ಪ್ರಯಾಣಿಕರಿಗೆ ಅರ್ಥ ಆಗುವುದು ಸಂಕಷ್ಟದ ಸಮಯದಲ್ಲಿ ಮಾತ್ರ’ ಎಂದು ಹೇಳಿದ್ದರು. ಅದನ್ನು ಈಗ ಸಾಬೀತುಪಡಿಸಿ ತೋರಿಸಿದ್ದಾರೆ.

ಹಾಗೆಯೇ ವಿಮಾನದಲ್ಲಿದ್ದ ಯಾನಿವ್ ಹಯೂನ್ ಎಂಬ ಪ್ಲಂಬರ್‌ನ ಸಾಹಸವನ್ನೂ ನೆನೆಯ ಬೇಕು. ಆತ ಕಾಕ್‌ಪಿಟ್‌ಗೆ ಧಾವಿಸಿ, ದಾಳಿಕೋರ ಸಹ ಪೈಲಟ್‌ನನ್ನು ನಿಯಂತ್ರಣದಿಂದ ಈಚೆಗೆ ಎಳೆದುಹಾಕಿ, ವಿಮಾನ ದುರಂತವನ್ನು ತಪ್ಪಿಸಿದ್ದಾನೆ.

ಜೊತೆಗೆ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ, ರಜೆಯಲ್ಲಿದ್ದ ಇನ್ನಿಬ್ಬರು ಪೈಲಟ್‌ಗಳು ವಿಮಾನದ ನಿಯಂತ್ರಣ ಕೈಗೆತ್ತಿಕೊಂಡು ಮುನ್ನಡೆಸಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಇವರೆಲ್ಲ ಸೇರಿಯೇ ಭಾರಿ ಅನಾಹುತವೊಂದು ತಪ್ಪಿದೆ. ಹೀರೋಗಳು ನಮ್ಮ ನಿಮ್ಮ ನಡುವೆಯೂ ಇರಬಹುದು. ಸಕಾಲಿಕವಾಗಿ, ಸಮಯಪ್ರಜ್ಞೆಯನ್ನು ಬಳಸಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಶ್ರೀಸಾಮಾನ್ಯನೂ ಹೀರೋ ಆಗುತ್ತಾನೆ ಎಂಬುದನ್ನು ಈ ಘಟನೆ ನಿರೂಪಿಸಿದೆ. ಹಾಗೆಯೇ, ವಿಮಾನಯಾನವನ್ನು ಇನ್ನಷ್ಟು ಸುರಕ್ಷಿತಗೊಳಿಸಬೇಕಾದ ಅಗತ್ಯವನ್ನೂ ಇದು ಒತ್ತಿ ಹೇಳುತ್ತದೆ.