ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಟ್ರಂಪ್ ಹಿನ್ನಡೆಯ ಫಲ

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು 435 ಸ್ಥಾನಗಳ ಪೈಕಿ ಡೆಮೋಕ್ರಾಟ್ಸ್ 228 ಸ್ಥಾನ ಗೆದ್ದುಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ 139 ಸ್ಥಾನ ಗೆದ್ದಿದೆ. 100 ಸದಸ್ಯ ಬಲದ ಸೆನೆಟ್‌ನಲ್ಲಿ 35 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಡೆಮೋಕ್ರಾಟ್ಸ್ 19 ಸ್ಥಾನಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದೆ. ಅಲ್ಲಿಗೆ, ಟ್ರಂಪ್ ಇದುವರೆಗೆ ಸಾಧಿಸಿದ್ದ ಪಾಳೇಗಾರಿಕೆ ಮನೋಭಾವದ ಅಧಿಪತ್ಯದ ಅಂತ್ಯ ಆದಂತಾಗಿದೆ. ‌

ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಾಟ್ಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು 435 ಸ್ಥಾನಗಳ ಪೈಕಿ ಡೆಮೋಕ್ರಾಟ್ಸ್ 228 ಸ್ಥಾನ ಗೆದ್ದು ಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ 139 ಸ್ಥಾನ ಗೆದ್ದಿದೆ. 100 ಸದಸ್ಯ ಬಲದ ಸೆನೆಟ್‌ನಲ್ಲಿ 35 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಡೆಮೋಕ್ರಾಟ್ಸ್ 19 ಸ್ಥಾನಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದೆ. ಅಲ್ಲಿಗೆ, ಟ್ರಂಪ್ ಇದುವರೆಗೆ ಸಾಧಿಸಿದ್ದ ಪಾಳೇಗಾರಿಕೆ ಮನೋಭಾವದ ಅಧಿಪತ್ಯದ ಅಂತ್ಯ ಆದಂತಾಗಿದೆ. ‌

ಸಂಸತ್‌ನಲ್ಲಿ ಅವರ ಪಕ್ಷ ಬಹುಮತ ಕಳೆದುಕೊಂಡಿರುವುದರಿಂದ ಮುಂದಿನ ಕಾನೂನುಗಳನ್ನು ರೂಪಿಸುವಲ್ಲಿ ಅವರು ತೊಡಕು ಎದುರಿಸಲಿದ್ದಾರೆ. ಇರಾನ್ ವಿರುದ್ಧ ಯುದ್ಧ, ಅಮೆರಿಕದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು, ತೈಲಬೆಲೆ ಏರಿಕೆ, ನಿರುದ್ಯೋಗ, ವಿದೇಶಗಳ ವಿರುದ್ಧ ಬೇಕಾಬಿಟ್ಟಿ ಸುಂಕನೀತಿಯಿಂದ ಅಲ್ಲಿನ ಜನರು ಬೇಸತ್ತು ಹೋಗಿದ್ದುದು, ಈ ಫಲಿತಾಂಶದಲ್ಲಿ ಪ್ರತಿಫಲಿಸಿದೆ.

ಇದನ್ನೂ ಓದಿ: Vishwavani Editorial: ಬಸ್‌ ದರ ಏರಿಕೆ ಸಲ್ಲದು

ಟ್ರಂಪ್ ಹಿನ್ನಡೆಯಿಂದ ಭಾರತ ತುಸು ನಿಟ್ಟುಸಿರು ಬಿಡಬಹುದು. ಎಚ್1ಬಿ ವೀಸಾಕ್ಕೆ 1 ಲಕ್ಷ ಡಾಲರ್ ಶುಲ್ಕ, ಗ್ರೀನ್ ಕಾರ್ಡ್ ವಿತರಣೆಗೆ ಬಿಗಿ ನಿರ್ಬಂಧಗಳನ್ನು ಟ್ರಂಪ್ ಜಾರಿ ಮಾಡಿ ಲಕ್ಷಾಂತರ ಭಾರತೀಯ ಐಟಿ ಉದ್ಯೋಗಿಗಳನ್ನು ತೀವ್ರ ಸಮಸ್ಯೆಗೆ ಸಿಲುಕಿಸಿದ್ದರು. ಈ ನೀತಿಗಳು ಬದಲಾದರೆ ಭಾರತೀಯ ಮೂಲದ ಐಟಿ ಕಂಪನಿಗಳು ಅಲ್ಲಿ ಭಾರತೀಯ ಉದ್ಯೋಗಿಗಳನ್ನು ನೇಮಕ ಮಾಡಿ ಕೊಳ್ಳಲು ಅನುಕೂಲವಾಗಬಹುದು.

ಭಾರತೀಯ ಉತ್ಪನ್ನಗಳ ಆಮದಿನ ಮೇಲೆ ಟ್ರಂಪ್ ಶೇ.26ರಷ್ಟು ಸುಂಕ ಹೇರಿದ್ದಾರೆ. ಭಾರತ ರಷ್ಯಾದಿಂದ ತೈಲ ಖರೀದಿಸಲು ಟ್ರಂಪ್ ತೀವ್ರ ತಗಾದೆ ತೆಗೆದು, ಭಾರಿ ನಿಯಂತ್ರಣ ಹೇರಿದ್ದರು. ಇದರಿಂದ ಭಾರತ- ಅಮೆರಿಕ ಸಂಬಂಧ ಹಳಸಿತ್ತು. ಭಾರತವು ರಾಜತಾಂತ್ರಿಕ ನಿಲುವುಗಳಲ್ಲಿ ಅಮೆರಿಕದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಲು ಹಾಗೂ ರಷ್ಯಾಗೆ ಹತ್ತಿರವಾಗಲು ಆರಂಭಿಸಿತ್ತು. ಇದು ರಕ್ಷಣಾ ಒಪ್ಪಂದಗಳಲ್ಲಿಯೂ ಪ್ರತಿಫಲಿಸಿತ್ತು. ಆದರೆ ಭಾರತದ ರಾಜತಾಂತ್ರಿಕ ನೀತಿ ಅಲಿಪ್ತ ನಿಲುವಿನದ್ದು.

ಎಲ್ಲ ದೇಶಗಳ ಜೊತೆ ಸ್ನೇಹದಿಂದ ಇರುವುದು ಭಾರತಕ್ಕೆ ಸಾಧ್ಯವಾದರೂ, ಟ್ರಂಪ್‌ರಂಥ ತಿಕ್ಕಲು ನಾಯಕ ಇರುವಷ್ಟು ಕಾಲ ಅದು ಸಾಧ್ಯವಾಗದು. ಟ್ರಂಪ್ ಅಧಿಕಾರ ಮದದ ಹುಚ್ಚಾಟಗಳಿಗೆ ಲಗಾಮು ಬಿದ್ದರೆ ಭಾರತವೂ ತನ್ನ ಮೊದಲಿನ ಸ್ನೇಹವನ್ನು ಮುಂದುವರಿಸಲು ಅವಕಾಶವಿದೆ.