ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಬಸ್‌ ದರ ಏರಿಕೆ ಸಲ್ಲದು

ಸಾರಿಗೆ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂಬುದು ನೀಡಲಾಗುತ್ತಿರುವ ಕಾರಣ. ಆದರೆ ಇನ್ನಷ್ಟು ಪ್ರಮುಖ ಕಾರಣಗಳನ್ನು ಸಚಿವರಾಗಲೀ ಇಲಾಖೆಯಾಗಲೀ ಉಲ್ಲೇಖಿಸಿಲ್ಲ. ಮುಖ್ಯ ವಾಗಿ ಶಕ್ತಿ ಯೋಜನೆಯಿಂದ ಬೊಕ್ಕಸದ ಮೇಲೆ ಬಿದ್ದಿರುವ ಹೊರೆ. ಇದು ದುಡಿಯುವ ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ, ನಿಜ. ಆದರೆ ಇದರಿಂದ ಆಗುತ್ತಿರುವ ನಷ್ಟವೂ ಸಣ್ಣದೇನಲ್ಲ

Vishwavani Editorial: ಬಸ್‌ ದರ ಏರಿಕೆ ಸಲ್ಲದು

-

Profile
Ashok Nayak Nov 4, 2026 10:51 AM

ಮಧ್ಯಮ ವರ್ಗದ ಜನತೆಗೆ ಹಾಲಿನ ದರ ಏರಿಕೆ ಮೂಲಕ ಬರೆ ಹಾಕಿದ ಸರಕಾರ, ಇದೀಗ ಬಸ್ ಪ್ರಯಾಣ ದರ ಏರಿಸುವ ಮೂಲಕ ಗಾಯಕ್ಕೆ ಉಪ್ಪು ಸವರಲು ಮುಂದಾಗಿದೆ. ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಸರಕಾರ ಮುಂದಾಗಿದ್ದು, ನವೆಂಬರ್ 5ರಿಂದಲೇ ಹೊಸ ದರ ಜಾರಿಗೆ ಬರುವ ನಿರೀಕ್ಷೆಯಿದೆ.

ಈ ಕುರಿತು ಸಾರಿಗೆ ಇಲಾಖೆ ಹಾಗೂ ನಾಲ್ಕೂ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಚಿವರ ಸಭೆ ಇಂದು (ನ.4) ನಡೆಯಲಿದೆ. 11 ವರ್ಷಗಳಿಂದ ಸಾರಿಗೆ ಸಂಸ್ಥೆಗಳ ಟಿಕೆಟ್ ದರವನ್ನು ಕೇವಲ ಒಂದು ಬಾರಿ ಹೆಚ್ಚಿಸಲಾಗಿದೆ. ಈ ಅವಧಿಯಲ್ಲಿ ಡೀಸೆಲ್ ಬೆಲೆ, ವಾಹನಗಳ ನಿರ್ವಹಣೆ ಹಾಗೂ ಕಾರ್ಯಾಚರಣೆಯ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೆ ಶಾಕ್‌; KSRTC-BMTC ಟಿಕೆಟ್‌ ದರ ಏರಿಕೆಗೆ ಸರ್ಕಾರದ ಚಿಂತನೆ

ಸಾರಿಗೆ ನಿಗಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂಬುದು ನೀಡಲಾಗುತ್ತಿರುವ ಕಾರಣ. ಆದರೆ ಇನ್ನಷ್ಟು ಪ್ರಮುಖ ಕಾರಣಗಳನ್ನು ಸಚಿವರಾಗಲೀ ಇಲಾಖೆಯಾಗಲೀ ಉಲ್ಲೇಖಿ ಸಿಲ್ಲ. ಮುಖ್ಯವಾಗಿ ಶಕ್ತಿ ಯೋಜನೆಯಿಂದ ಬೊಕ್ಕಸದ ಮೇಲೆ ಬಿದ್ದಿರುವ ಹೊರೆ. ಇದು ದುಡಿಯುವ ಮಹಿಳೆಯರಿಗೆ ಶಕ್ತಿ ತುಂಬುವ ಯೋಜನೆ, ನಿಜ. ಆದರೆ ಇದರಿಂದ ಆಗುತ್ತಿರುವ ನಷ್ಟವೂ ಸಣ್ಣದೇನಲ್ಲ. ಇದರಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಕೆಂಪು ಬಸ್ಸುಗಳನ್ನು ಕಡಿಮೆ ಮಾಡಿ, ಈ ಯೋಜನೆಯ ಅನ್ವಯವಿಲ್ಲದ ರಾಜಹಂಸ, ಎಲೆಕ್ಟ್ರಿಕ್ ಬಸ್ಸುಗಳನ್ನು ಬಿಡಲಾರಂಭಿಸಿದೆ.

ಇದರಿಂದಾಗಿ, ಇರುವ ಕೆಲವೇ ಕೆಂಪು ಬಸ್ಸುಗಳಲ್ಲಿ ನೂಕುನುಗ್ಗಲಿನಲ್ಲಿ ಕೈಕಾಲು ಮುರಿದುಕೊಂಡು ಜನ ಪ್ರಯಾಣಿಸಬೇಕಿದೆ. ಆದಾಯ ಕಡಿಮೆ ಎಂದು ಕಂಡುಬಂದ ಹಲವು ಗ್ರಾಮೀಣ ಮಾರ್ಗಗಳಲ್ಲಿ ಬಸ್ಸು ಸಂಚಾರವನ್ನು ಕಡಿಮೆ ಮಾಡಲಾಗಿದೆ ಅಥವಾ ನಿಲ್ಲಿಸಲಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಒಟ್ಟಾರೆ ಸುಮಾರು 9000 ಕೋಟಿ ರು. ಸಂಚಿತ ನಷ್ಟ ಎದುರಿಸುತ್ತಿದ್ದು, ಪ್ರತಿ ವರ್ಷ ಸುಮಾರು 2000 ಕೋಟಿ ರು. ನಷ್ಟ ಅನುಭವಿಸುತ್ತಿವೆ.

ಇವೆಲ್ಲವೂ ನಿಗಮಗಳ ಆಡಳಿತ ಹಾದಿ ತಪ್ಪಿರುವುದರ ಸೂಚನೆ. ಈಗಿನ ದರ ಏರಿಕೆ, ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ವ್ಯವಹಾರ. ಪತ್ನಿ ಉಚಿತವಾಗಿ ಹೋಗುವ ಬಸ್ಸಿನಲ್ಲಿ ಪತಿ ದುಪ್ಪಟ್ಟು ಪ್ರಯಾಣ ದರ ಕೊಟ್ಟು ಪ್ರಯಾಣಿಸುವುದನ್ನು ಉಚಿತ ಎನ್ನಲಾಗದು. ಸಾರ್ವಜನಿಕ ಸಾರಿಗೆಯನ್ನು ಲಾಭದಾಯಕ ಸಂಸ್ಥೆಯೆಂದು ಪರಿಗಣಿಸುವುದರಲ್ಲೇ ದೋಷವಿದೆ. ಇದನ್ನೊಂದು ಸೇವೆಯೆಂದು ಪರಿಗಣಿಸಬೇಕು ಹಾಗೂ ಅನಗತ್ಯ ದರ ಏರಿಕೆಯನ್ನು ಕೈಬಿಡಬೇಕು