ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ದರೋಡೆ ಪ್ರಕರಣ ಹೆಚ್ಚಳ ಕಳವಳಕಾರಿ

ಬೆಂಗಳೂರಿನ ಎಟಿಎಂ ಹಣ ದರೋಡೆ ಪ್ರಕರಣ, ಮೈಸೂರಿನ ಹುಣಸೂರು ಚಿನ್ನಾಭರಣ ಅಂಗಡಿ ದರೋಡೆ, ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ಚಿನ್ನಾಭರಣ ಅಂಗಡಿ ಪ್ರಕರಣದ ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಕೇಳಿ ಜನರು ನಿಟ್ಟುಸಿರುವ ಬಿಡುವ ಮುನ್ನವೇ ಇಂಥ ಹಲವು ಪ್ರಕರಣಗಳು ವರದಿಯಾಗುತ್ತಿವೆ.

ರಾಜ್ಯದಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿರುವುದು ನಾಗರಿಕರ ಭದ್ರತೆ ಮತ್ತು ಕಾನೂನು-ಕ್ರಮದ ಸ್ಥಿತಿಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ನಗರ ಪ್ರದೇಶಗಳಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲಿಯೂ ದರೋಡೆ, ಲೂಟಿ ಪ್ರಕರಣಗಳು ವರದಿ ಯಾಗುತ್ತಿರುವುದು ಸಮಾಜದ ಶಾಂತಿ ಮತ್ತು ಜನರ ನೆಮ್ಮದಿಗೆ ಧಕ್ಕೆ ತಂದಿದೆ.

ಬೆಂಗಳೂರಿನ ಎಟಿಎಂ ಹಣ ದರೋಡೆ ಪ್ರಕರಣ, ಮೈಸೂರಿನ ಹುಣಸೂರು ಚಿನ್ನಾಭರಣ ಅಂಗಡಿ ದರೋಡೆ, ವಿಜಯಪುರ ಜಿಲ್ಲೆಯ ಚಡಚಣದಲ್ಲಿ ನಡೆದ ಚಿನ್ನಾಭರಣ ಅಂಗಡಿ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಕೇಳಿ ಜನರು ನಿಟ್ಟುಸಿರುವ ಬಿಡುವ ಮುನ್ನವೇ ಇಂಥ ಹಲವು ಪ್ರಕರಣಗಳು ವರದಿಯಾಗುತ್ತಿವೆ.

ಇದನ್ನೂ ಓದಿ: Vishwavani Editorial: ಎರಡು ಅತಿರೇಕಗಳ ಸುತ್ತ

ಜುವೆಲ್ಲರ್ಸ್, ಬ್ಯಾಂಕ್, ಎಟಿಎಂ, ವ್ಯಾಪಾರ ಸಂಸ್ಥೆಗಳು ಹಾಗೂ ವಸತಿ ಪ್ರದೇಶಗಳನ್ನು ಗುರಿ ಯಾಗಿಸಿಕೊಂಡು ನಡೆಯುತ್ತಿರುವ ಅಪರಾಧಗಳು ಪೊಲೀಸ್ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿವೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಜಾಮೀನಿನಲ್ಲಿ ಹೊರಬಂದು ಮತ್ತೆ ಅದೇ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ.

ದರೋಡೆಕೋರರನ್ನು ಮಟ್ಟಹಾಕಬೇಕಾದರೆ ಪೊಲೀಸ್ ಇಲಾಖೆಯ ಜವಾಬ್ದಾರಿ ಎಷ್ಟಿದೆಯೋ ಅದಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರು ಮತ್ತು ಸರಕಾರದ ಜವಾಬ್ದಾರಿ ಇದೆ. ಅಪರಾಧ ನಿಯಂತ್ರ ಣಕ್ಕೆ ವಿಶೇಷ ಪೊಲೀಸ್ ಪಡೆ, ವೇಗದ ನ್ಯಾಯಾಲಯಗಳ ಸ್ಥಾಪನೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಽಸುವ ವ್ಯವಸ್ಥೆ ಜಾರಿಗೊಳಿಸಬೇಕಾಗಿದೆ.

ಸಾರ್ವಜನಿಕರು ಪಕ್ಕದ ಮನೆಯವರ ಬಗ್ಗೆ ಎಚ್ಚರಿಕೆ, ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು, ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ದರೋಡೆ ಪ್ರಕರಣಗಳನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ. ಒಟ್ಟಿನಲ್ಲಿ, ದರೋಡೆ ಪ್ರಕರಣಗಳ ಹೆಚ್ಚಳ ಕೇವಲ ಪೊಲೀಸ್ ಸಮಸ್ಯೆಯಲ್ಲ; ಇದು ಆಡಳಿತ, ನ್ಯಾಯಾಂಗ ಮತ್ತು ಸಮಾಜದ ಸಂಯುಕ್ತ ಜವಾಬ್ದಾರಿಯ ವಿಷಯ. ಇಲ್ಲವಾದರೆ, ಕಾನೂನು-ಕ್ರಮದ ಮೇಲಿನ ನಂಬಿಕೆ ಕುಸಿದು, ಸಮಾಜ ಅಶಾಂತಿಯತ್ತ ಸಾಗುವ ಅಪಾಯವನ್ನು ನಿರ್ಲಕ್ಷಿಸುವಂತಿಲ್ಲ.